Asianet Suvarna News Asianet Suvarna News

BMCRI Recruitment 2022: ಬೆಂಗಳೂರು ಮೆಡಿಕಲ್​ ಕಾಲೇಜಿನ ಡೈರೆಕ್ಟರ್​ ಹುದ್ದೆಗೆ ಅರ್ಹರಿಂದ ಅರ್ಜಿ ಆಹ್ವಾನ

  • ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ BMCRI
  • ಡೈರೆಕ್ಟರ್​ & ಡೀನ್ ಹುದ್ದೆ ಭರ್ತಿಗೆ ಅಧಿಸೂಚನೆ
  •  ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 3 ಕೊನೆಯ ದಿನ
BMCRI Recruitment notification  for  director and dean posts in bengaluru gow
Author
Bengaluru, First Published Dec 28, 2021, 6:48 PM IST

ಬೆಂಗಳೂರು(ಡಿ.28): ಬೆಂಗಳೂರು ಮೆಡಿಕಲ್​ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (Bengaluru Medical College and Research Institute) ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಡೈರೆಕ್ಟರ್​ & ಡೀನ್ (Director & Dean)​ ಹುದ್ದೆಗಳು ಖಾಲಿ ಇದ್ದು ಅಭ್ಯರ್ಥಿಗಳು ಆಫ್​ಲೈನ್(Offline)​ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.  ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜನವರಿ 3, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ bmcribengaluru.karnataka.gov.in ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ಶೈಕ್ಷಣಿಕ ವಿದ್ಯಾರ್ಹತೆ : ಬೆಂಗಳೂರು ಮೆಡಿಕಲ್​ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನೇಮಕಾತಿಯ ಡೈರೆಕ್ಟರ್​ & ಡೀನ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ ಮುಗಿಸಿರಬೇಕು. 

ಅನುಭವ: ಡೈರೆಕ್ಟರ್​ & ಡೀನ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ವೈದ್ಯಕೀಯ ಕಾಲೇಜು/ಸಂಸ್ಥೆಯಲ್ಲಿ ಪ್ರೊಫೆಸರ್/ಅಸೋಸಿಯೇಟ್ ಪ್ರೊಫೆಸರ್/ರೀಡರ್ ಆಗಿ ಕನಿಷ್ಠ 10 ವರ್ಷಗಳ ಬೋಧನಾ ಅನುಭವವನ್ನು ಹೊಂದಿರಬೇಕು, ಅದರಲ್ಲಿ ಕನಿಷ್ಠ 5 ವರ್ಷಗಳು ವಿಭಾಗದಲ್ಲಿ ಪ್ರೊಫೆಸರ್ ಆಗಿರಬೇಕು. ಅಭ್ಯರ್ಥಿಯು ವೈದ್ಯಕೀಯ ಅಧೀಕ್ಷಕರಾಗಿ ಅಥವಾ ವಿಭಾಗದ ಮುಖ್ಯಸ್ಥರಾಗಿ ಅಥವಾ ಪ್ರಾಧ್ಯಾಪಕರಾಗಿ ಕನಿಷ್ಠ 05 ವರ್ಷ ಆಡಳಿತಾತ್ಮಕ ಅನುಭವವನ್ನು ಹೊಂದಿರಬೇಕು.

C.V. RAMAN HOSPITAL RECRUITMENT 2022: ಖಾಲಿ ಇರುವ PHARMACIST ಮತ್ತು STAFF NURSE ಹುದ್ದೆಗೆ ನೇರ ಸಂದರ್ಶನ

ವಯೋಮಿತಿ ಮತ್ತು ವೇತನ: ಡೈರೆಕ್ಟರ್​ & ಡೀನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಗರಿಷ್ಠ 58 ವರ್ಷ ಮೀರಿರಬಾರದು. ಆಯ್ಕೆಯಾಗುವ ಅಭ್ಯರ್ಥಿಗೆ  ಮಾಸಿಕ   1,44,200-2,18,200 ರೂ ವೇತನ  ನಿಗದಿಯಾಗಿದೆ.

ಆಯ್ಕೆ ಪ್ರಕ್ರಿಯೆ ಮತ್ತು ಉದ್ಯೋಗದ ಸ್ಥಳ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಉದ್ಯೋಗ ಮಾಡಬೇಕಾಗುತ್ತದೆ.

NTPC Recruitment 2022: ಸಹಾಯಕ ಕಾನೂನು ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ, ತಿಂಗಳಿಗೆ 1.2 ಲಕ್ಷ

11 ಡೀನ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದ ನೌಕರರ ರಾಜ್ಯ ವಿಮಾ ನಿಗಮ:  ನೌಕರರ ರಾಜ್ಯ ವಿಮಾ ನಿಗಮದಲ್ಲಿ (Employees State Insurance Corporation- ESIC)  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಒಟ್ಟು 11 ಡೀನ್ (Dean)​ ಹುದ್ದೆಗಳು ಖಾಲಿ ಇದ್ದು, ಬಿಡಿಎಸ್​, ಡಿಎನ್​ಬಿ, ಎಂಎಸ್​, ಎಂಡಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಆಫ್​ಲೈನ್ (Offline)​ ಮೂಲಕ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 31,2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ https://www.esic.nic.in/ ಭೇಟಿ ನೀಡಲು ಕೋರಲಾಗಿದೆ.

ವಿದ್ಯಾರ್ಹತೆ ಮತ್ತು ವಯೋಮಿತಿ: ನೌಕರರ ರಾಜ್ಯ ವಿಮಾ ನಿಗಮ- ದೆಹಲಿ ನೇಮಕಾತಿಯ ಡೀನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಂತವೈದ್ಯರ ಕಾಯಿದೆ, 1948 ರ ಶ್ಕೆಡ್ಯೂಲ್ ಭಾಗ I ಅಥವಾ ಭಾಗ II ರಲ್ಲಿ ಒಳಗೊಂಡಿರುವ ಅರ್ಹತೆ ಹೊಂದಿರಬೇಕು.
ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ನೋಂದಾಯಿಸಿರಬೇಕು. ಸ್ನಾತಕೋತ್ತರ ಅರ್ಹತೆ ಅಂದರೆ ಮಾಸ್ಟರ್ ಆಫ್ ಡೆಂಟಲ್ ಸರ್ಜರಿ ಅಥವಾ ಅದಕ್ಕೆ ಸಮಾನವಾದ ಮಾನ್ಯತೆ ಪಡೆದ ಅರ್ಹತೆ ಪಡೆದಿರಬೇಕು.  ಡೀನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 30/01/2022ಕ್ಕೆ ಗರಿಷ್ಠ 55 ವರ್ಷ ಮೀರಿರಬಾರದು.

ಅರ್ಜಿ ಸಲ್ಲಿಸುವ ವಿಳಾಸ: ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ ಕೊಡಿ
ಉಪ ನಿರ್ದೇಶಕರು (ನೇಮಕಾತಿ)
ಇಎಸ್​ಐ ಕಾರ್ಪೊರೇಷನ್
ಪಂಚ್​ದೀಪ್​ ಭವನ್
ಸಿಐಜಿ ಮಾರ್ಗ್​
ನವದೆಹಲಿ- 110002

Follow Us:
Download App:
  • android
  • ios