Asianet Suvarna News Asianet Suvarna News

NTPC Recruitment 2022: ಸಹಾಯಕ ಕಾನೂನು ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ, ತಿಂಗಳಿಗೆ 1.2 ಲಕ್ಷ ವೇತನ

  • ಖಾಲಿ ಹುದ್ದೆ ಭರ್ತಿಗೆ  NTPC ಅಧಿಸೂಚನೆ
  • CLAT 2021 ಪರೀಕ್ಷೆಗೆ ಹಾಜರಾದವರಿಗೆ ಅವಕಾಶ
  • ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು  ಜನವರಿ 7, ಕೊನೆಯ ದಿನ
NTPC Limited Recruitment notification for Assistant Law Officer post apply now gow
Author
Bengaluru, First Published Dec 28, 2021, 1:44 PM IST

ಬೆಂಗಳೂರು(ಡಿ.28): NTPC (National Thermal Power Corporation ) ಲಿಮಿಟೆಡ್  ಖಾಲಿ ಇರುವ ಸಹಾಯಕ ಕಾನೂನು ಅಧಿಕಾರಿಗಳ (Assistant law officers ) ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 10 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯ CLAT 2021 (Common Law Admission Test) ಪರೀಕ್ಷೆಗೆ ಹಾಜರಾಗಿರಬೇಕು. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಜನವರಿ 7,2022 ಆಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು NTPCಯ ಅಧಿಕೃತ ವೆಬ್‌ತಾಣ https://www.ntpc.co.in/ ಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಖಾಲಿಯಿರುವ ಕಾನೂನು ಅಧಿಕಾರಿಗಳ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು   ಕನಿಷ್ಠ ಶೇ.60ರಷ್ಟು ಅಂಕಗಳೊಂದಿಗೆ ಕಾನೂನಿನಲ್ಲಿ ಪದವಿ ಪೂರೈಸಿರಬೇಕು. ಇಲ್ಲವೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ತತ್ಸಮಾನ ಕೋರ್ಸ್‌ಗಳನ್ನು ಪೂರೈಸಿರಬೇಕು. ಎಸ್‌ಸಿ /PWD ಅಭ್ಯರ್ಥಿಗಳು ಶೇ.55 ರಷ್ಟು ಅಂಕಗಳನ್ನು ಹೊಂದಿದ್ದರೆ ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಎನ್‌ಟಿಪಿಸಿ ಲಿಮಿಟೆಡ್ ನಲ್ಲಿನ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಆಭ್ಯರ್ಥಿಗಳ ಆಯಸ್ಸು  ಜನವರಿ 7, 2022 ಕ್ಕೆ ಅನುಗುಣವಾಗುವಂತೆ 30 ವರ್ಷಗಳಿಗಿಂತ ಹೆಚ್ಚಿರಬಾರದು. ಒಬಿಸಿ ಕೆಟಗರಿ ಅವರಿಗೆ 3 ವರ್ಷಗಳ ಸಡಿಲಿಕೆ ಮತ್ತು ಎಸ್‌ಸಿ ಕೆಟಗರಿಯವರಿಗೆ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.

IT BPM Industry Jobs: ಭಾರತದ ಐಟಿ ವಲಯದಲ್ಲಿ ಮುಂದಿನ ವರ್ಷ 3.75 ಲಕ್ಷ ಉದ್ಯೋಗ ಸೃಷ್ಟಿ

ಅರ್ಜಿ ಶುಲ್ಕ: ಎನ್‌ಟಿಪಿಸಿ ಲಿಮಿಟೆಡ್ ನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ  ಸಾಮಾನ್ಯ/EWS/ಒಬಿಸಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು  300. ರೂ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಮಹಿಳಾ  ಅಭ್ಯರ್ಥಿಗಳಿಗೆ  ಮತ್ತು ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. SBI ಶಾಖೆಯಲ್ಲಿ ಹಣ ಪಾವತಿ ಮಾಡಿ ರಶೀದಿಯನ್ನು ಅರ್ಜಿ ನಮೂನೆ ವೇಳೆ ಲಗತ್ತಿಸಬೇಕು. 

ಆಯ್ಕೆ ಪ್ರಕ್ರಿಯೆ ಮತ್ತು ವೇತನ: ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ, CLAT 2021 ಪರೀಕ್ಷೆಯಲ್ಲಿನ ಪ್ರದರ್ಶನವನ್ನು ಗಮನಿಸಿ ಶಾರ್ಟ್ ಲಿಸ್ಟ್ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ 30,000 ದಿಂದ 1,20,000 ವರೆಗೆ ವೇತನ ನಿಗದಿಯಾಗಿದೆ.

NIMHANS Recruitment 2022: Msc ಆದವರಿಗೆ ಕನ್ನಡ ಸ್ಪಷ್ಟವಾಗಿ ಬರೆಯಲು ಬಂದರೆ ನಿಮ್ಹಾನ್ಸ್​​ ನಲ್ಲಿ ಜಾಬ್

ಕೃಷಿ ವಿಶ್ವವಿದ್ಯಾಲಯದ ವಿವಿಧ ಹುದ್ದೆಗೆ ಡಿ.31ರಂದು ನೇರ ಸಂದರ್ಶನ: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ (University of Agricultural Sciences Dharwad )ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಸಂಶೋಧನಾ ಸಹಾಯಕ (Research Associate), ಹಿರಿಯ ಸಂಶೋಧನಾ ಅಭ್ಯರ್ಥಿ(Senior Research Fellow) ಮತ್ತು ಗ್ರಾಜುಯೇಟ್ ಅಸಿಸ್ಟೆಂಟ್ (Graduate Assistant) ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ https://uasd.edu/ ಗೆ ಭೇಟಿ ನೀಡಿ. ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಿಕೊಳ್ಳಬಹುದು. ಡಿಸೆಂಬರ್ 31,2021ರಂದು  ನೇರ ಸಂದರ್ಶನ ನಡೆಯಲಿದೆ.

ಸಂದರ್ಶನದ ವಿವರ: ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿಕೊಂಡು ಡಿಸೆಂಬರ್ 31,2021ರಂದು ಬೆಳಿಗ್ಗೆ 10:30 ಗಂಟೆಯಿಂದ ಪ್ರಾರಂಭವಾಗುವ ನೇರ ಸಂದರ್ಶನಕ್ಕೆ ಪಾಲ್ಗೊಳ್ಳಲು ಈ ಕೆಳಗಿನ ವಿಳಾಸದಲ್ಲಿ ಇರತಕ್ಕದ್ದು,
Office Of The Association,
Director of Research (HQ),
Krishinagar,
Dharwad -580 005,
Karnataka.
 

Follow Us:
Download App:
  • android
  • ios