ಜಿಂಬಾಬ್ವೆ ಪರ ಟೆಂಡೈ ಚಟಾರ ಮಾರಕ ದಾಳಿ(4 ವಿಕೆಟ್) ಹಾಗೂ ಸಿಕಂದರ್ ರಾಜಾ(81) ಮತ್ತು ಮಸಕಜಾ(73) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಜಿಂಬಾಬ್ವೆ ತಂಡ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿದೆ.

ಢಾಕಾ(ಜ.17): ಕುಸಾಲ್ ಪೆರೇರಾ ಹಾಗೂ ತಿಸಾರ ಪೆರೇರಾ ಆಕರ್ಷಕ ಅರ್ಧಶತಕದ ಹೊರತಾಗಿಯೂ ಜಿಂಬಾಬ್ವೆ ತಂಡವು 12 ರನ್'ಗಳ ರೋಚಕ ಜಯ ದಾಖಲಿಸಿದೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಜಿಂಬಾಬ್ವೆಗಿದು ಮೊದಲ ಜಯವಾಗಿದೆ.

ಜಿಂಬಾಬ್ವೆ ಪರ ಟೆಂಡೈ ಚಟಾರ ಮಾರಕ ದಾಳಿ(4 ವಿಕೆಟ್) ಹಾಗೂ ಸಿಕಂದರ್ ರಾಜಾ(81) ಮತ್ತು ಮಸಕಜಾ(73) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಜಿಂಬಾಬ್ವೆ ತಂಡ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆ, ಹ್ಯಾಮಿಲ್ಟನ್ ಮಸಕಜಾ ಹಾಗೂ ಸಿಕಂದರ್‌'ರ ಅರ್ಧಶತಕದ ನೆರವಿನಿಂದ 290 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಶ್ರೀಲಂಕಾ ಉತ್ತಮ ಪೈಪೋಟಿ ನೀಡಿತಾದರೂ ಗೆಲುವಿನ ಅಂಚಿನಲ್ಲಿ ಎಡವಿತು. ಲಂಕಾ 278 ರನ್‌'ಗಳಿಗೆ ಆಲೌಟ್ ಆಗಿ ನಿರಾಸೆ ಅನುಭವಿಸಿತು.

ಸಂಕ್ಷಿಪ್ತ ಸ್ಕೋರ್:

ಜಿಂಬಾಬ್ವೆ 290 (ಸಿಕಂದರ್ 81, ಅಸೆಲಾ ಗುಣರತ್ನೆ 37/3),

ಲಂಕಾ 278/10 (ಕುಸಾಲ್ ಪೇರೆರಾ 80, ಚಟಾರ 33/4)