Asianet Suvarna News Asianet Suvarna News

ಎಬಿಡಿ, ಕೊಹ್ಲಿ ಡಕೌಟ್'ಗೆ ಪಾಕ್ ಆ್ಯಂಕರ್ ಜತೆ ತೆಗೆಸಿಕೊಂಡ ಸೆಲ್ಫಿ ಕಾರಣ?

ಪಾಕಿಸ್ತಾನ ವಿರುದ್ಧ ಪಂದ್ಯದ ವೇಳೆ ದ.ಆಫ್ರಿಕಾದ ನಾಯಕ ಎಬಿ ಡಿವಿಯ​ರ್‍ಸ್ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್‌ ಕೊಹ್ಲಿ ಶೂನ್ಯಕ್ಕೆ ಔಟಾಗಲು ಟಿವಿ ಆ್ಯಂಕರ್‌ ಒಬ್ಬಳ ಜತೆ ತೆಗಿಸಿಕೊಂಡ ಸೆಲ್ಫಿಯೊಂದು ಕಾರಣ ಎಂದು ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗುತ್ತಿದ್ದು, ಅಭಿಮಾನಿಗಳು ಆಕೆಯನ್ನು ಟೀಕಿಸುತ್ತಿದ್ದಾರೆ.

Zainab Abbas A Pakistani Journalist Casts Spell on Virat Kohli AB de Villiers
  • Facebook
  • Twitter
  • Whatsapp

ಲಂಡನ್‌(ಜೂ.10): ಪಾಕಿಸ್ತಾನ ವಿರುದ್ಧ ಪಂದ್ಯದ ವೇಳೆ ದ.ಆಫ್ರಿಕಾದ ನಾಯಕ ಎಬಿ ಡಿವಿಯ​ರ್‍ಸ್ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್‌ ಕೊಹ್ಲಿ ಶೂನ್ಯಕ್ಕೆ ಔಟಾಗಲು ಟಿವಿ ಆ್ಯಂಕರ್‌ ಒಬ್ಬಳ ಜತೆ ತೆಗಿಸಿಕೊಂಡ ಸೆಲ್ಫಿಯೊಂದು ಕಾರಣ ಎಂದು ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗುತ್ತಿದ್ದು, ಅಭಿಮಾನಿಗಳು ಆಕೆಯನ್ನು ಟೀಕಿಸುತ್ತಿದ್ದಾರೆ.

ಪಾಕಿಸ್ತಾನದ ಟಿವಿ ನಿರೂಪಕಿ ಝೈನಬ್‌ ಅಬ್ಬಾಸ್‌, ಪಾಕಿಸ್ತಾನ-ಆಫ್ರಿಕಾ ಪಂದ್ಯಕ್ಕೂ ಮುನ್ನ ಎಬಿಡಿ ಜತೆ ಸೆಲ್ಫಿ ತೆಗೆದುಕೊಂಡಿದ್ದರು. ಪಂದ್ಯದಲ್ಲಿ ಆಫ್ರಿಕಾ ನಾಯಕ ಶೂನ್ಯಕ್ಕೆ ವಿಕೆಟ್‌ ಕಳೆದುಕೊಂಡರು. ಇನ್ನು ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಆಕೆ ಕೊಹ್ಲಿ ಜತೆ ಸೆಲ್ಫಿ ತೆಗೆದುಕೊಂಡಿದ್ದರು. ಲಂಕಾ ವಿರುದ್ಧ ವಿರಾಟ್‌ ಸೊನ್ನೆಗೆ ನಿರ್ಗಮಿಸಿದರು. ಭಾರತ ವಿರುದ್ಧ ಪಂದ್ಯಕ್ಕೂ ಮುನ್ನ ಶ್ರೀಲಂಕಾ ಕ್ರಿಕೆಟ್‌ ಸಂಸ್ಥೆ, ಝೈನಬ್‌ ಅಬ್ಬಾಸ್‌ರನ್ನು ಯಾರೂ ಭೇಟಿ ಮಾಡದಂತೆ ಮಾಡಿದ್ದ ಟ್ವೀಟ್‌ ಅಚ್ಚರಿಗೆ ಕಾರಣವಾಗಿತ್ತು. ಆನಂತರ ಲಂಕಾ ಕ್ರಿಕೆಟ್‌ ಮಂಡಳಿ ತನ್ನ ಟ್ವಿಟರ್‌ ಪೇಜ್‌ನಿಂದ ಆ ಟ್ವೀಟನ್ನು ತೆಗೆದುಹಾಕಿದೆ. 

 

Follow Us:
Download App:
  • android
  • ios