ಮುಂಬೈ(ಮಾ.25): ಕಳೆದ ಕೆಲ ವರ್ಷಗಳಿಂದ ಫಾರ್ಮ್ ಸಮಸ್ಯೆ, ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಯುವರಾಜ್ ಸಿಂಗ್ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ  ಹಾಫ್ ಸೆಂಚುರಿ ಸಿಡಿಸೋ ಮೂಲಕ ಯುವಿ ಮತ್ತೆ ಫಾರ್ಮ್‍‌ಗೆ ಮರಳಿದ್ದಾರೆ.

ಇದನ್ನೂ ಓದಿ: ಸೋಲಿನಲ್ಲೂ ಹೀರೋ ಆದ ಯುವರಾಜ್: ವಾಂಖೆಡೆಯಲ್ಲಿ 'ಯುವಿ' ಅಬ್ಬರಕ್ಕೆ ಬೌಂಡ್ರಿ, ಸಿಕ್ಸರ್ ಮಳೆ!

ಕಳೆದ ಕೆಲ ವರ್ಷಗಳಿಂದ ಯುವರಾಜ್ ಸಿಂಗ್ ನಿವೃತ್ತಿ ಮಾತುಗಳು ಕೇಳಿಬರುತ್ತಲೇ ಇದೆ. ಇದೀಗ ಯುವಿ ತಮ್ಮ ನಿವೃತ್ತಿ ಕುರಿತು ಮಾತನಾಡಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ನಿವೃತ್ತಿ ಕುರಿತು ಉತ್ತರಿಸಿದ್ದಾರೆ. ಕ್ರಿಕೆಟ್ ಆನಂದಿಸುವವರೆಗೂ ನಿವೃತ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

 

 

ಇದನ್ನೂ ಓದಿ: ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ವಿಶೇಷ ಅಭಿಮಾನಿಗೆ ನೀಡಿದ ರಸೆಲ್!

ನಿವೃತ್ತಿ ಕುರಿತು ಸಚಿನ್ ತೆಂಡೂಲ್ಕರ್ ಬಳಿಕ ಮಾತುಕತೆ ನಡೆಸಿದ್ದೇನೆ. ಸಚಿನ್ ಸಲಹೆ ಸ್ವೀಕರಿಸಿದ್ದೇನೆ. ಸಮಯ ಬಂದಾಗ ನಿವೃತ್ತಿ ನಿರ್ಧಾರ ಪ್ರಕಟಿಸುವುದಾಗಿ ಯುವರಾಜ್ ಸಿಂಗ್ ಹೇಳಿದ್ದಾರೆ. ಯುವರಾಜ್ ಸಿಂಗ್ ಕೊನೆಯ ಬಾರಿ ಟೀಂ ಇಂಡಿಯಾ ಪರ ಆಡಿದ್ದು 2017ರಲ್ಲಿ. ಬಳಿಕ ಫಾರ್ಮ್ ಹಾಗೂ ಫಿಟ್ನೆಸ್ ಸಮಸ್ಯೆಯಿಂದ ತಂಡದಿಂದ ಹೊರಬಿದ್ದರು.