ಮುಂಬೈ[ಮಾ.25]: IPL 2019ನೇ ಆವೃತ್ತಿ ಆರಂಭವಾಗಿದ್ದು, ಸೀರೀಸ್ ನ ಮೂರನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿತಯನ್ಸ್ ನಡುವೆ ನಡೆದಿದೆ. ಈ ಪಂದ್ಯದಲ್ಲಿ ರಿಷನ್ ಪಂತ್ ಭರ್ಜರಿ ಅಬ್ಬರದ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಎದುರಾಳಿ ಮುಂಬೈ ಇಂಡಿಯನ್ಸ್ ತಂಡವನ್ನು 37 ರನ್ ಗಳ ಅಂತರದಿಂದ ಬಗ್ಗು ಬಡಿದಿದೆ. ಕಳೆದ ಸೀಜನ್ ನಲ್ಲಿ ಸರಾಸರಿ ಪ್ರದರ್ಶನ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಗೆಲುವಿನೊಂದಿಗೆ IPL 2019ಕ್ಕೆ ಎಂಟ್ರಿ ಮಾಡಿದೆ. ಇನ್ನು 27 ಎಸೆತಗಳಲ್ಲಿ 78 ರನ್ ಗಳಿಸಿದ ರಿಷಭ್ ಪಂತ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. 

ಯುವರಾಜ್ ಸಿಂಗ್ ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಸೋಲುಂಡಿದ್ದರೂ ಯುವಿ ಮಾತ್ರ ಹೀರೋ ಆಗಿ ಮಿಂಚಿದ್ದಾರೆ. ಪಂದ್ಯದಲ್ಲಿ ಅವರ ಅದ್ಭುತ ಆಟಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ. ಕಳೆದ ಹಲವಾರು ಸಮಯದಿಂದ ಫಾರ್ಮ್ ನಿಂದ ದೂರವಿದ್ದ ಯುವಿ ಬ್ಯಾಟ್ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮತ್ತೆ ಘರ್ಜಿಸಿದ್ದು, 35 ಎಸೆತಗಳಲ್ಲಿ 53 ರನ್ ಸಿಡಿಸಿದ ಯುವಿ ಆಟಕ್ಕೆ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಒಂದೆಡೆ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್ ಮನ್ ಗಳು ಒಬ್ಬರಾದ ಬಳಿಕ ಮತ್ತೊಬ್ಬರಂತೆ ಪೆವಿಲಿಯನ್ ಸೇರುತ್ತಿದ್ದರೆ ಮತ್ತೊಂದೆಡೆ ಯುವಿ ಅತ್ಯುತ್ತಮ ಆಟದ ಮೂಲಕ ತಂಡಕ್ಕೆ ಗೆಲುವು ತಂದುಕೊಡುವ ಯತ್ನದಲ್ಲಿದ್ದರು. ಅವರ ಈ ಹುಮ್ಮಸ್ಸಿಗೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರು 'ಯುವಿ.. ಯುವಿ..' ಎನ್ನುವ ಮೂಲಕ ಮತ್ತಷ್ಟು ಬಲ ತುಂಬಿಸಲಾರಂಭಿಸಿದ್ದರು. ಡೆಲ್ಲಿ ನೀಡಿದ್ದ 214 ರನ್ ಗಳನ್ನು ಹಿಂಬಾಲಿಸುತ್ತಿದ್ದ ಮುಂಬೈ ತಂಡ ಯುವಿ ಗಳಿಸಿದ್ದ ಅರ್ಧ ಶತಕವಿದ್ದರೂ, 19.2 ಓವರ್ ಗಳಲ್ಲಿ 176 ರನ್ ಗಳಿಸಿ ಆಲ್ ಔಟ್ ಆಯ್ತು. ಯುವರಾಜ್ ಸಿಂಗ್ ಹೊತುಪಡಿಸಿ ಕೃಣಾಲ್ ಪಾಂಡ್ಯಾ ಕೂಡಾ 30 ರನ್ ಗಳಿಸಿದ್ದರು. ಇನ್ನು ಬೌಲಿಂಗ್ ಮಾಂತ್ರಿಕ, ವೇಗಿ ಬೂಮ್ರಾ ಗಾಯಾಳು ಆಗಿದ್ದ ಕಾರಣ ಬ್ಯಾಟಿಂಗ್ ಮಾಡಲು ಹೋಗಲಿಲ್ಲ.