ಬ್ರಾಂಪ್ಟನ್(ಆ.05): ಟೀಂ ಇಂಡಿಯಾಗೆ ವಿದಾಯ ಹೇಳಿ ಇದೀಗ ಗ್ಲೋಬಲ್ ಕೆನಾಡ ಟಿ20 ಲೀಗ್ ಟೂರ್ನಿ ಆಡುತ್ತಿರುವ ಯುವರಾಜ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನಸೆಳೆದಿದ್ದಾರೆ. ಟೊರೊಂಟೊ ರಾಯಲ್ಸ್ ತಂಡದ ನಾಯಕ ಯುವಿ ಕೇವಲ 22 ಎಸೆತದಲ್ಲಿ 51 ರನ್ ಸಿಡಿಸಿ ಗಮನಸೆಳೆದಿದ್ದಾರೆ.

ಇದನ್ನೂ ಓದಿ: ಕೆನಡಾ ಟಿ20: ಯುವಿ ತಂಡವನ್ನು ಗೆಲ್ಲಿಸಿದ ಮತ್ತೋರ್ವ ಭಾರತೀಯ..!

ಯುವಿ ಬ್ಯಾಟಿಂಗ್ ಇಳಿದರೆ ಸಿಕ್ಸರ್ ಸುರಿಮಳೆ ಖಚಿತ. ಆದರ ಫಿಟ್ನೆಸ್ ಹಾಗೂ ಫಾರ್ಮ್ ಸಮಸ್ಯೆಯಿಂದ ಯುವರಾಜ್ ಸಿಂಗ್ ಟೀಂ ಇಂಡಿಯಾದಿಂದ ದೂರ ಉಳಿದಿದ್ದರು. ಹೀಗಾಗಿ ವಿದಾಯ ಘೋಷಿಸಿ ಕೆನಾಡ ಟಿ20 ಲೀಗ್ ಟೂರ್ನಿ ಸೇರಿಕೊಂಡರು. ಇದೀಗ ಕೆನಾಡ ಲೀಗ್ ಟೂರ್ನಿಯಲ್ಲಿ ಭರ್ಜರಿ 5 ಸಿಕ್ಸರ್ ಸಿಡಿಸಿದ್ದಾರೆ.

 

ಇದನ್ನೂ ಓದಿ: ಪೀಟರ್‌ಸನ್- ಯುವರಾಜ್ ಮತ್ತೆ ಟ್ವಿಟರ್ ಸಮರ!

ಮೊದಲು ಬ್ಯಾಟಿಂಗ್ ಮಾಡಿದ ಬ್ರಾಂಪ್ಟನ್ ವೋಲ್ಸ್ 20 ಓವರ್‌ಗಳಲ್ಲಿ ಬರೋಬ್ಬರಿ 222 ರನ್ ಸಿಡಿಸಿತ್ತು. ಇದಕ್ಕುತ್ತರಾವಿಗೆ ಟೊರೊಂಟೊ ರಾಯಲ್ಸ್ ತಂಡ ದಿಟ್ಟ ಹೋರಾಟ ನೀಡಿತು. ಯುವರಾಜ್ ಸಿಂಗ್ ಅಬ್ಬರದ ಬ್ಯಾಟಿಂಗ್ ಹೊರತಾಗಿಯೂ ಟೊರೊಂಟೊ 11 ರನ್ ಸೋಲು ಕಂಡಿತು.