ಚಂಡೀಘಡ(ಜು.25): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ, ಮಾಜಿ ನಾಯಕ ಎಂ.ಎಸ್.ಧೋನಿ ವಿರುದ್ಧ ಸದಾ ಒಂದಲ್ಲೊಂದು ಆರೋಪ ಮಾಡುತ್ತಿದ್ದ ಕ್ರಿಕೆಟರ್ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಇದೀಗ ದಿಢೀರ್ ರಾಗ ಬದಲಿಸಿದ್ದಾರೆ. ಇದೇ ಮೊದಲ ಬಾರಿಗೆ ಧೋನಿಯನ್ನು ಹೊಗಳಿದ್ದಾರೆ. 

ಇದನ್ನೂ ಓದಿ: ಯೋಧರ ಜೊತೆ ಕಾಶ್ಮೀರ ಗಡಿ ಕಾಯಲಿದ್ದಾರೆ ಧೋನಿ!

ಯುವರಾಜ್ ಆಯ್ಕೆ ಕುರಿತು ಹಲವು ಬಾರಿ ಧೋನಿ ವಿರುದ್ದ ಕಿಡಿ ಕಾರಿದ್ದ ಯೋಗರಾಜ್ ಸಿಂಗ್, ಇದೀಗ ಹೊಗಳಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದು ಭಾರತೀಯ ಸೇನೆಯಲ್ಲಿ ಗಡಿ ಕಾಯಲು ಹೊರಟಿರುವ ಧೋನಿ ನಿರ್ಧಾರಕ್ಕೆ ಯೋಗರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಧೋನಿ ತರಬೇತಿಗೆ ಭಾರತೀಯ ಸೇನಾ ಮುಖ್ಯಸ್ಥರಿಂದ ಗ್ರೀನ್ ಸಿಗ್ನಲ್!

ಕೇವಲ ಧೋನಿ ನಿರ್ಧಾರ ಮಾತ್ರವಲ್ಲ, ನಾನು ಧೋನಿ ಅಭಿಮಾನಿ. ಧೋನಿ ಸುದೀರ್ಘ ವರ್ಷಗಳಿಂದ  ದೇಶಕ್ಕಾಗಿ ಆಡುತ್ತಿದ್ದಾರೆ. ಧೋನಿ ಆಟ ತುಂಬಾ ಇಷ್ಟಪಡುತ್ತೇನೆ. ಕಠಿಣ ಸಂದರ್ಭಗಳಲ್ಲಿ ಧೋನಿ ತೆಗೆದುಕೊಂಡ ನಿರ್ಧಾರಗಳನ್ನು ವಿಶ್ವ ಕ್ರಿಕೆಟ್ ಮೆಚ್ಚಿದೆ ಎಂದು ಯೋಗರಾಜ್ ಹೇಳಿದ್ದಾರೆ. ಧೋನಿ ಬ್ಯಾಟಿಂಗ್, ನಿರ್ಧಾರ ಹಾಗೂ ನಾಯಕತ್ವವನ್ನು ಇದೇ ಮೊದಲ ಬಾರಿಗೆ  ಯೋಗರಾಜ್ ಹೊಗಳಿದ್ದಾರೆ.

ಇದನ್ನೂ ಓದಿ:ಸೇನೆಗೆ ಸೇರಿಕೊಳ್ಳಲು ಕ್ರಿಕೆಟ್‌ನಿಂದ ಬ್ರೇಕ್; ಧೋನಿಗೆ ಫ್ಯಾನ್ಸ್ ಸೆಲ್ಯೂಟ್!

ಯುವರಾಜ್ ಸಿಂಗ್ ತಂಡದಿಂದ ಹೊರಬಿದ್ದ ಬಳಿಕ ಯೋಗರಾಜ್ ಸಿಂಗ್ ಧೋನಿ ವಿರುದ್ಧ ತಿರುಗಿ ಬಿದ್ದಿದ್ದರು. ಧೋನಿ ಕುತಂತ್ರದಿಂದ ಯುವಿಯನ್ನು ಹೊರಗಿಡಲಾಗಿದೆ. ಯುವರಾಜ್ ಸಿಂಗ್ ಫಿಟ್ ಆಗಿದ್ದರೂ ಧೋನಿ ಆಯ್ಕೆ ಮಾಡಿಲ್ಲ ಎಂದು ಧೋನಿ ವಿರುದ್ದ ಸರಣಿ ಆರೋಪ ಮಾಡಿದ್ದರು.