ಚೆನ್ನೈ(ಮಾ.09): ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ ಸಂದರ್ಶನದ ಬಳಿಕ ಕಾಫಿ ವಿತ್ ಕರಣ್ ಶೋ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಸದ್ದು ಮಾಡಿದೆ. ವಿವಾದಾತ್ಮಕ ಹೇಳಿಕೆಯಿಂದ ಉಭಯ ಕ್ರಿಕೆಟಿಗರು ಅಮಾನತು ಶಿಕ್ಷೆ ಕೂಡ ಅನುಭವಿಸಿದ್ದಾರೆ. ಇದೀಗ ಆರ್ ಅಶ್ವಿನ್‌ಗೆ ಅಭಿಮಾನಿಯೋರ್ವ ಕಾಫಿ ವಿತ್ ಕರಣ್ ಶೋ ಕುರಿತು ಪ್ರಶ್ನೆ ಕೇಳಿದ್ದಾನೆ.

ಇದನ್ನೂ ಓದಿ: ಬಿಸಿಸಿಐ ಕೈಪಿಡಿ ಓದದ ಹಾರ್ದಿಕ್‌, ರಾಹುಲ್‌?

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಟಿವಿ ಕಾರ್ಯಕ್ರಮಕ್ಕೆ ಹೋಗುತ್ತೀರಾ ಎಂದು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಯೋರ್ವ ಆರ್ ಅಶ್ವಿನ್‌ಗೆ ಪ್ರಶ್ನೆ ಕೇಳಿದ್ದ. ಇದಕ್ಕೆ ಉತ್ತರಿಸಿರುವ ಅಶ್ವಿನ್ ಖಂಡಿತವಾಗಿಯೂ ಹೋಗುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಅಂತಿಮ 2 ಏಕದಿನ ಪಂದ್ಯಕ್ಕೆ ಬದಲಾವಣೆ - ಧೋನಿಗೆ ವಿಶ್ರಾಂತಿ!

ಆರ್ ಅಶ್ವಿನ್ ಸದ್ಯ ಟೀಂ ಇಂಡಿಯಾದಿಂದ ಹೊರಗುಳಿದ್ದಾರೆ. ಇಂಜುರಿ ಸಮಸ್ಯೆಯಿಂದ ಹೊರಗುಳಿದ ಅಶ್ವಿನ್‌ಗೆ ಇದೀಗ ಸ್ಥಾನವೇ ಇಲ್ಲದಂತಾಗಿದೆ. ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಆಗಮನದಿಂದ ಆರ್ ಅಶ್ವಿನ್ ಟೆಸ್ಟ್‌ಗೆ ಸೀಮಿತವಾಗಿದ್ದಾರೆ. ಅದರಲ್ಲೂ ಎಲ್ಲಾ ಟೆಸ್ಟ್ ಪಂದ್ಯಗಳಲ್ಲಿ ಅವಕಾಶ ಕೂಡ ಸಿಗುತ್ತಿಲ್ಲ.