ಬಿಸಿಸಿಐ ಕೈಪಿಡಿ ಓದದ ಹಾರ್ದಿಕ್, ರಾಹುಲ್?
ಭ್ರಷ್ಟಾಚಾರದಿಂದ ದೂರವಿರುವುದು ಹೇಗೆ, ಹಣಕಾಸು ನಿರ್ವಹಣೆ ಹೀಗೆ ಅನೇಕ ವಿಚಾರಗಳನ್ನು ತಿಳಿಸಿ, ಪ್ರತಿ ಆಟಗಾರರಿಗೂ ಓದಲು ಸೂಚಿಸಲಾಗಿತ್ತು. ಈ ಕೈಪಿಡಿಯಲ್ಲಿ ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ವಹಿಸಬೇಕಾದ ಎಚ್ಚರ, ಯಾವ ಪ್ರಶ್ನೆಗೆ ಉತ್ತರಿಸಬೇಕು, ಯಾವುದಕ್ಕೆ ಉತ್ತರಿಸಬಾರದು ಎನ್ನುವುದರ ಕುರಿತು ಸಹ ಜಾಗೃತಿ ಮೂಡಿಸಲಾಗಿತ್ತು.
ನವದೆಹಲಿ(ಜ.21): ಐಪಿಎಲ್ ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್ ಪ್ರಕರಣದ ಬೆಳಕಿಗೆ ಬಂದ ಬಳಿಕ ನ್ಯಾ.ಲೋಧಾ ಸಮಿತಿ ಶಿಫಾರಸುಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಭಾರತೀಯ ಆಟಗಾರರಿಗೆ ‘ವೃತಿಪರ ಕ್ರಿಕೆಟಿಗರು ತಿಳಿದುಕೊಳ್ಳಲೇಬೇಕಾದ 100 ಅಂಶಗಳು’ ಹೆಸರಿನ ಕೈಪಿಡಿಯನ್ನು ವಿತರಿಸಿತ್ತು.
ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಿಸಿಸಿಐನಿಂದ ಕೈಪಿಡಿ
ಭ್ರಷ್ಟಾಚಾರದಿಂದ ದೂರವಿರುವುದು ಹೇಗೆ, ಹಣಕಾಸು ನಿರ್ವಹಣೆ ಹೀಗೆ ಅನೇಕ ವಿಚಾರಗಳನ್ನು ತಿಳಿಸಿ, ಪ್ರತಿ ಆಟಗಾರರಿಗೂ ಓದಲು ಸೂಚಿಸಲಾಗಿತ್ತು. ಈ ಕೈಪಿಡಿಯಲ್ಲಿ ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ವಹಿಸಬೇಕಾದ ಎಚ್ಚರ, ಯಾವ ಪ್ರಶ್ನೆಗೆ ಉತ್ತರಿಸಬೇಕು, ಯಾವುದಕ್ಕೆ ಉತ್ತರಿಸಬಾರದು ಎನ್ನುವುದರ ಕುರಿತು ಸಹ ಜಾಗೃತಿ ಮೂಡಿಸಲಾಗಿತ್ತು. ಆ ಕೈಪಿಡಿಯನ್ನು ರಾಹುಲ್ ಹಾಗೂ ಪಾಂಡ್ಯ ಓದಿರಲಿಲ್ಲವಾ ಎನ್ನುವ ಪ್ರಶ್ನೆ ಈಗ ಉದ್ಭವವಾಗಿದೆ. ‘ವೃತಿಪರ ಕ್ರಿಕೆಟಿಗರು ತಿಳಿದುಕೊಳ್ಳಲೇಬೇಕಾದ 100 ಅಂಶಗಳು' ಕೈಪಿಡಿಯ ಪುಟ 77ರಲ್ಲಿ ಮಾಧ್ಯಮ ಸಂದರ್ಶನದ ಬಗ್ಗೆ ಉಲ್ಲೇಖಿಸಲಾಗಿದ್ದು, ಕಾಕತಾಳಿಯ ಎಂಬಂತೆ ವಿಷಯಕ್ಕೆ ರಾಹುಲ್ ಫೋಟೋವನ್ನು ಬಳಕೆ ಮಾಡಲಾಗಿದೆ.
ಕಳೆದ ವರ್ಷದ ಸೆಪ್ಟೆಂಬರ್’ನಲ್ಲಿ ಕ್ರಿಕೆಟ್ ಆಟಗಾರರಿಗಾಗಿ ಬಿಸಿಸಿಐ, ಮೊದಲ ಬಾರಿಗೆ ಕೈಪಿಡಿಯೊಂದನ್ನು ಬಿಡುಗಡೆ ಮಾಡಿತ್ತು. ಈ ಕೈಪಿಡಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮುನ್ನುಡಿ ಬರೆದಿದ್ದರು.