Asianet Suvarna News Asianet Suvarna News

ಪೆರೇರಾ ಅಬ್ಬರಕ್ಕೆ ಪಾಕ್ ಉಡೀಸ್

ಮೂರು ಪಂದ್ಯಗಳ ಸರಣಿ 1-1ರಲ್ಲಿ ಸಮಗೊಂಡಿದ್ದು ಮೂರನೇ ಪಂದ್ಯವನ್ನು ಯಾರು ಗೆಲ್ಲುತ್ತಾರೆಂದು ಕಾದು ನೋಡಬೇಕಿದೆ.

World XI Stuns Pakistan win by 7 Wickets to Level Seeries

ಕರಾಚಿ(ಸೆ.14): ತಿಸಾರಾ ಪೆರೇರಾ ಸ್ಫೋಟಕ ಬ್ಯಾಟಿಂಗ್‌ ಹಾಗೂ ಕರಾರುವಕ್ಕಾದ ಬೌಲಿಂಗ್' ನೆರವಿನಿಂದ ಪಾಕಿಸ್ತಾನ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ವಿಶ್ವ ಇಲೆವೆನ್ 7 ವಿಕೆಟ್'ಗಳ ಗೆಲುವು ಸಾಧಿಸಿದೆ.

175 ರನ್ ಗುರಿ ಬೆನ್ನಟ್ಟಿದ ವಿಶ್ವ ಇಲೆವೆನ್‌'ಗೆ ಕೊನೆ 3 ಓವರ್'ಗಳಲ್ಲಿ 41 ರನ್ ಬೇಕಿತ್ತು. ಪೆರೇರಾ ಕೇವಲ 19 ಎಸೆತಗಳಲ್ಲಿ 5 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿದರು. ಕೊನೆ 2 ಎಸೆತಗಳಲ್ಲಿ 6 ಬೇಕಿದ್ದಾಗ, ಸಿಕ್ಸರ್ ಸಿಡಿಸಿದ ಪೆರೇರಾ ಇನ್ನೂ 1 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲ್ಲಿಸಿದರು.

ಇದಕ್ಕೂ ಮುನ್ನ ಪಾಕ್ ಆಜಮ್ ಬಾಬರ್ ಹಾಗೂ ಶೆಹಜಾದ್‌'ರ ಎಚ್ಚರಿಕೆಯ ಆಟದ ನೆರವಿನಿಂದ ಪಾಕಿಸ್ತಾನ 174 ರನ್'ಗಳ ಸವಾಲಿನ ಮೊತ್ತ ಕಲೆ ಹಾಕಿತ್ತು. ಪೆರೇರಾ, ಬದ್ರಿ ತಲಾ 3 ವಿಕೆಟ್ ಪಡೆದರು. ಮೂರು ಪಂದ್ಯಗಳ ಸರಣಿ 1-1ರಲ್ಲಿ ಸಮಗೊಂಡಿದ್ದು ಮೂರನೇ ಪಂದ್ಯವನ್ನು ಯಾರು ಗೆಲ್ಲುತ್ತಾರೆಂದು ಕಾದು ನೋಡಬೇಕಿದೆ.

ಸಂಕ್ಷಿಪ್ತ ಸ್ಕೋರ್:

ಪಾಕಿಸ್ತಾನ: 174/6

(ಆಜಮ್ 45, ಪೆರೇರಾ 23/2),

ವಿಶ್ವ ಇಲೆವೆನ್:175/3

(ಆಮ್ಲಾ 72, ಪೆರೇರಾ 47)

Follow Us:
Download App:
  • android
  • ios