Asianet Suvarna News

ವಿಶ್ವ ಕುಸ್ತಿ ಕೂಟ: ಭಜರಂಗ್‌ಗೆ ಕಂಚು, ಸುಶೀ​ಲ್‌ಗೆ ಶಾಕ್..!

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕುಸ್ತಿಪಟುಗಳಾದ ಭಜರಂಗ್‌ ಪೂನಿಯಾ ಹಾಗೂ ರವಿ ದಹಿಯಾ ಕಂಚಿನ ಪದಕ ಜಯಿಸಿದ್ದಾರೆ. ಆದರೆ ಒಲಿಂಪಿಕ್ ಪದಕ ವಿಜೇತ ಸುಶೀಲ್‌ ಕುಮಾರ್ ಆಘಾತಕಾರಿ ಸೋಲು ಕಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

World Wrestling Championships 2019 Bajrang Punia, Ravi Dahiya win bronze
Author
Kazakhstan, First Published Sep 21, 2019, 9:10 AM IST
  • Facebook
  • Twitter
  • Whatsapp

ಕಜ​ಕ​ಸ್ತಾ​ನ(ಸೆ.21): ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಕುಸ್ತಿಪಟುಗಳಾದ ಭಜರಂಗ್‌ ಪೂನಿಯಾ ಹಾಗೂ ರವಿ ದಹಿಯಾ ಕಂಚಿನ ಪದಕ ಜಯಿಸಿದ್ದಾರೆ.

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಫೈನಲ್; ದಾಖಲೆ ಬರೆದ ಅಮಿತ್ ಪಂಘಲ್!

ಪುರುಷರ 65 ಕೆ.ಜಿ ಕಂಚಿ​ನ ಪದ​ಕ​ದ ಪಂದ್ಯ​ದಲ್ಲಿ ಮಂಗೋ​ಲಿಯಾದ ಟುಮುರ್‌ ಒಚಿರ್‌ ವಿರುದ್ಧ ಭಜ​ರಂಗ್‌ 8-7ರಲ್ಲಿ ​ಮ​ಣಿ​ಸಿ​ ಪದಕ ಗೆದ್ದರು. ಆರಂಭದಲ್ಲಿ 0-6 ರಿಂದ ಹಿಂದೆ ಬಿದ್ದಿದ್ದ ಭಜರಂಗ್‌, ಬಳಿಕ ಅದ್ಭುತ ಪ್ರದರ್ಶನ ತೋರುವ ಮೂಲಕ ಕಂಚಿನ ಪದಕ ಜಯಿಸಿದರು. ಇದು ಭಜ​ರಂಗ್‌ಗೆ ಸತತ 2ನೇ ಪದ​ಕ​ವಾ​ಗಿದೆ. ಕಳೆದ ಆವೃ​ತ್ತಿ​ಯಲ್ಲಿ ಬೆಳ್ಳಿ ಪದಕ ಗೆದ್ದಿ​ದ್ದರು. ಒಟ್ಟಾರೆ ಭಜ​ರಂಗ್‌, ವಿಶ್ವ ಕೂಟದಲ್ಲಿ 3ನೇ ಪದಕ ಗೆದ್ದಂತಾಗಿದೆ.

ವಿಶ್ವ ಕುಸ್ತಿ ಚಾಂಪಿ​ಯನ್‌ಶಿಪ್‌ 2020ರ ಒಲಿಂಪಿಕ್ಸ್‌ಗೆ ಭಜ​ರಂಗ್‌, ರವಿ

57 ಕೆ.ಜಿ ವಿಭಾಗದ ಮತ್ತೊಂದು ಕಂಚಿನ ಪದಕದ ಪಂದ್ಯ​ದಲ್ಲಿ ರವಿ ದಹಿಯಾ, ಹಾಲಿ ಏಷ್ಯನ್‌ ಚಾಂಪಿ​ಯನ್‌ ಇರಾ​ನ್‌ನ ರೇಜಾ ಅಟ್ರಿ ವಿರುದ್ಧ 6-3ರಲ್ಲಿ ಜಯಿ​ಸಿ​ದರು. ತಮ್ಮ ಚೊಚ್ಚಲ ವಿಶ್ವ ಕುಸ್ತಿ​ಯಲ್ಲಿ ರವಿ ಪದಕ ಗೆದ್ದ​ರು.

ಸುಶೀ​ಲ್‌ಗೆ ದೊಡ್ಡ ಆಘಾತ!

2 ಬಾರಿ ಒಲಿಂಪಿಕ್‌ ಪದಕ ವಿಜೇತ ಭಾರ​ತದ ತಾರಾ ಕುಸ್ತಿಪಟು ಸುಶೀಲ್‌ ಕುಮಾರ್‌, ವಿಶ್ವ ಕುಸ್ತಿ​ಯ ಅರ್ಹತಾ ಸುತ್ತಿನಲ್ಲಿ ಆಘಾತ ಅನು​ಭ​ವಿ​ಸಿ​ದರು. 8 ವರ್ಷ​ಗಳ ಬಳಿಕ ವಿಶ್ವ ಕುಸ್ತಿ ಚಾಂಪಿ​ಯ​ನ್‌​ಶಿ​ಪ್‌ಗೆ ಮರ​ಳಿದ ಸುಶೀಲ್‌ 74 ಕೆ.ಜಿ ವಿಭಾ​ಗ​ದಲ್ಲಿ ಸ್ಪರ್ಧಿ​ಸಿ​ದ್ದರು. ಶುಕ್ರ​ವಾರ ನಡೆದ ಮೊದಲ ಸುತ್ತಿ​ನಲ್ಲೇ ಸುಶೀ​ಲ್‌ ಸೋಲುಂಡು ಆಘಾ​ತ​ಕ್ಕೊ​ಳ​ಗಾ​ದ​ರು. ಅಜರ್‌​ಬೈ​ಜಾನ್‌ ಕುಸ್ತಿ​ಪ​ಟು ಖಾಡ್ಚಿ​ಮು​ರಾದ್‌ ಘಾಡ್ಚಿ​ಯೇ​ವ್‌ ವಿರುದ್ಧ ಸುಶೀಲ್‌ 9-11ರಲ್ಲಿ ಸೋಲುಂಡರು. ಪಂದ್ಯಾ​ವ​ಳಿ​ಯಿಂದ ಹೊರ​ಬಿದ್ದ ಸುಶೀಲ್‌ ಟೋಕಿಯೋ ಒಲಿಂಪಿಕ್ಸ್‌ ಅರ್ಹತೆ ಸಂಪಾ​ದಿ​ಸುವಲ್ಲಿ ವೈಫಲ್ಯ ಅನು​ಭ​ವಿ​ಸಿ​ದರು.

Follow Us:
Download App:
  • android
  • ios