ನವದೆಹಲಿ[ಆ.05]: ಭಾರತದ ಮಹಿಳಾ ಕುಸ್ತಿಪಟು ವಿನೇಶ್‌ ಫೋಗಾಟ್‌ 53 ಕೆ.ಜಿ ವಿಭಾಗದಲ್ಲಿ ಸತತ 3ನೇ ಚಿನ್ನದ ಪದಕ ಗೆದ್ದಿದ್ದಾರೆ.

ಪ್ರೊ ಕುಸ್ತಿ ಹರಾಜು: ಭಜರಂಗ್, ವಿನೇಶ್’ಗೆ ಬಂಪರ್ 

ಭಾನುವಾರ ನಡೆದ ಪೋಲೆಂಡ್‌ ಓಪನ್‌ ಕುಸ್ತಿ ಪಂದ್ಯಾವಳಿ ಫೈನಲ್‌ನಲ್ಲಿ ವಿನೇಶ್‌ ಸ್ಥಳೀಯ ಕುಸ್ತಿಪಟು ರೊಕ್ಸಾನ ವಿರುದ್ಧ 3-2 ಅಂಕಗಳಿಂದ ಜಯಿಸಿದರು. ಸೆಮಿಫೈನಲ್‌ನಲ್ಲಿ ರಿಯೋ ಒಲಿಂಪಿಕ್ಸ್‌ ಕಂಚು ವಿಜೇತೆ ಸ್ವೀಡನ್‌ನ ಸೋಫಿಯಾ ಮ್ಯಾಟ್‌ಸನ್‌ ಅವರನ್ನು ಮಣಿಸಿದ್ದರು. 

24 ವರ್ಷದ ವಿನೇಶ್‌ ಕಳೆದೊಂದು ತಿಂಗಳಲ್ಲಿ ಗೆದ್ದ 3ನೇ ಚಿನ್ನದ ಪದಕ ಇದಾಗಿದೆ. ಇತ್ತೀಚೆಗೆ ಮ್ಯಾಡ್ರಿಡ್‌ನಲ್ಲಿ ನಡೆದಿದ್ದ ಸ್ಪೇನ್‌ ಗ್ರ್ಯಾನ್‌ ಪ್ರಿ ಹಾಗೂ ಇಸ್ತಾನ್‌ಬುಲ್‌ನಲ್ಲಿ ನಡೆದಿದ್ದ ಯಾಸರ್‌ ಡೊಗು ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಸ್ವರ್ಣಕ್ಕೆ ಕೊರಳ್ಳೊಡ್ಡಿದ್ದರು.