Asianet Suvarna News Asianet Suvarna News

ವಿಶ್ವ ವೇಯ್ಟ್'ಲಿಫ್ಟಿಂಗ್ ಚಾಂಪಿಯನ್'ಶಿಪ್: ಚಿನ್ನಕ್ಕೆ ಕೊರಳೊಡ್ಡಿದ ಮೀರಾಬಾಯಿ ಚಾನು

48 ಕೆ.ಜಿ. ವಿಭಾಗದಲ್ಲಿ 194 ಕೆ.ಜಿ ಬಾರವನ್ನು ಎತ್ತುವ ಮೂಲಕ ಚಾನು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

World Weightlifting Championship Mirabai Chanu Becomes 1st Indian To Win Gold In Over 2 Decades

ಅ್ಯನಹೀಂ,ಯುಎಸ್'ಎ (ನ.30): ವರ್ಲ್ಡ್ ವೇಯ್ಟ್'ಲಿಫ್ಟಿಂಗ್ ಚಾಂಪಿಯನ್'ಶಿಪ್'ನಲ್ಲಿ ಭಾರತದ ಮೀರಾಬಾಯಿ ಚಾನು ಇತಿಹಾಸ ನಿರ್ಮಿಸಿದ್ದಾರೆ.

48 ಕೆ.ಜಿ. ವಿಭಾಗದಲ್ಲಿ 194 ಕೆ.ಜಿ ಬಾರವನ್ನು ಎತ್ತುವ ಮೂಲಕ ಚಾನು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಎರಡು ದಶಕಗಳಿಂದ ಚಿನ್ನದ ಪದಕದ ಬರ ಎದುರಿಸಿಸುತ್ತಿದ್ದ ಭಾರತಕ್ಕೆ ಚಾನು ಸಂಭ್ರಮದ ಹೊನಲು ಹರಿಸಿದ್ದಾರೆ. ಈ ಮೊದಲು ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಕರ್ಣಂ ಮಲ್ಲೇಶ್ವರಿ 1994&1995ರಲ್ಲಿ ಒಟ್ಟು 2 ಬಾರಿ ವೇಯ್ಟ್'ಲಿಫ್ಟಿಂಗ್'ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಹೀಗಿತ್ತು ಚಿನ್ನ ಗೆದ್ದ ಆ ಕ್ಷಣ:

ರೈಲ್ವೇ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಮೀರಾಬಾಯಿ ಚಾನು ಸಾಧನೆಯನ್ನು ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ರೈಲ್ವೇ ಇಲಾಖೆ ಕೊಂಡಾಡಿದೆ.  

 

Follow Us:
Download App:
  • android
  • ios