ವಿಶ್ವಕಪ್: ಸಚಿನ್ ತೆಂಡುಲ್ಕರ್ 4 ದಾಖಲೆ ಯಾವುತ್ತೂ ಪುಡಿಯಾಗಲ್ಲ!
2019ರ ವಿಶ್ವಕಪ್ ಟೂರ್ನಿಗೆ ಎಲ್ಲಾ ತಂಡಗಳು ತಯಾರಿ ಆರಂಭಿಸಿದೆ. ಕೆಲ ಕ್ರಿಕೆಟಿಗರು ದಿಗ್ಗಜರ ದಾಖಲೆ ಪುಡಿ ಮಾಡಲು ಸಜ್ಜಾಗಿದ್ದಾರೆ. ಆದರೆ ಸಚಿನ್ ತೆಂಡೂಲ್ಕರ್ ನಿರ್ಮಿಸಿರುವ 4 ದಾಖಲೆಗಳು ಯಾವತ್ತೂ ಪುಡಿಯಾಗಲ್ಲ. ಆ ದಾಖಲೆ ಯಾವುದು? ಇಲ್ಲಿದೆ
ಬೆಂಗಳೂರು(ಜ.20): ಕ್ರಿಕೆಟ್‌ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವಷ್ಟು ದಾಖಲೆ ಇತರ ಯಾವ ಕ್ರಿಕೆಟಿಗನೂ ಮಾಡಿಲ್ಲ. ಮುಂದೆ ಮಾಡುವುದು ಕಷ್ಟ. ಇದಕ್ಕೆ ವಿಶ್ವಕಪ್ ಟೂರ್ನಿ ಕೂಡ ಹೊರತಲ್ಲ. ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಹಲವು ದಾಖಲೆ ಬರೆದಿದ್ದಾರೆ. ಇದರಲ್ಲಿ 4 ದಾಖಲೆಗಳು ಯಾವುತ್ತೂ ಬ್ರೇಕ್ ಆಗಲ್ಲ.
ಇದನ್ನೂ ಓದಿ: ಇಲ್ಲಿದೆ ಭಾರತ-ನ್ಯೂಜಿಲೆಂಡ್ ಏಕದಿನ,ಟಿ20 ಸರಣಿ ವೇಳಾಪಟ್ಟಿ!
1 ವಿಶ್ವಕಪ್‌ನಲ್ಲಿ ಗರಿಷ್ಠ ಇನ್ನಿಂಗ್ಸ್ ದಾಖಲೆ
ಸಚಿನ್ ಒಟ್ಟು 6 ವಿಶ್ವಕಪ್ ಟೂರ್ನಿ ಆಡಿದ್ದಾರೆ. ಈ ಮೂಲಕ ಒಟ್ಟು 44 ಇನ್ನಿಂಗ್ಸ್ ಆಡಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 42 ಇನ್ನಿಂಗ್ಸ್ ಆಡಿದ್ದಾರೆ. ಸದ್ಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರೋ ಕ್ರಿಕೆಟಿಗರ ಪೈಕಿ ವೆಸ್ಟ್ಇಂಡೀಸ್ ತಂಡದ ಕ್ರಿಸ್ ಗೇಲ್ 26 ಇನ್ನಿಂಗ್ಸ್ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಹೀಗಾಗಿ ಸಚಿನ್ 44 ಇನ್ನಿಂಗ್ಸ್ ದಾಖಲೆ ಹಾಗೇ ಉಳಿಯಲಿದೆ.
ಇದನ್ನೂ ಓದಿ: ಟ್ವಿಟರ್ ಸ್ಪೆಷಲ್: ಇದು ಧೋನಿ ಅಭಿಮಾನಿಗಳಿಗಾಗಿ ಮಾತ್ರ...!
2 ಗರಿಷ್ಠ 50+ ರನ್ ಸಾಧನೆ
ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಓಟ್ಟು 21 ಬಾರಿ 50+ ಸ್ಕೋರ್ ಮಾಡಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ಶ್ರೀಲಂಕಾದ ಕುಮಾರ ಸಂಗಕ್ಕಾರ 12 ಬಾರಿ 50+ ಸ್ಕೋರ್ ಬಾರಿಸಿದ್ದಾರೆ. ಈ ದಾಖಲೆ ಕೂಡ ಅಳಿಸಿಹಾಕೋದು ಕಷ್ಟ.
3 ವಿಶ್ವಕಪ್‌ನಲ್ಲಿ ಗರಿಷ್ಠ ಬೌಂಡರಿ
ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ಬರೋಬ್ಬರಿ 241 ಬೌಂಡರಿ ಸಿಡಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್ ಸಿಡಿಸಿರೋದು 96 ಬೌಂಡರಿ ಭಾರಿಸಿದ್ದಾರೆ. ಸದ್ಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರೋ ಕ್ರಿಕೆಟಿಗರು ಯಾರು ಕೂಡ 90 ಬೌಂಡರಿ ಭಾರಿಸಿಲ್ಲ.
ಇದನ್ನೂ ಓದಿ:ಹರಾಜಿನ ಬಳಿಕ ಒಂದಾದ ಗುರು-ಶಿಷ್ಯರು..! ತೆಂಡುಲ್ಕರ್ ಟ್ವೀಟ್ ಅಪ್ಪಟ ಬಂಗಾರ
4 ವಿಶ್ವಕಪ್‌ನಲ್ಲಿ ಗರಿಷ್ಠ ರನ್
ವಿಶ್ವಕಪ್ ಟೂರ್ನಿಯಲ್ಲಿ 2000 ರನ್ ಗಡಿದಾಟಿದ ಏಕೈಕ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್. ಸಚಿನ್ 56.95 ಸರಾಸರಿಯಲ್ಲಿ 2278 ರನ್ ಸಿಡಿಸಿದ್ದಾರೆ. ಇದರಲ್ಲಿ 6 ಶತಕ ಹಾಗೂ 15 ಅರ್ಧಶತಗಳು ಸೇರಿವೆ.