ಮುಂಬೈ[ಡಿ.19]: ಮೂರು ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ 11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್ ಹಂತ ಪ್ರವೇಶಿಸಲು ವಿಫಲವಾಗಿತ್ತು. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ಸಾಕಷ್ಟು ಅಳೆದ ತೂಗಿ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. 

Exclusive ಸಂದರ್ಶನ: RCB ತಂಡ ಸೇರಿಕೊಂಡ ಏಕೈಕ ಕನ್ನಡಿಗ ದೇವದತ್!

ಆಟಗಾರರ ಹರಾಜಿಗೂ ಮುನ್ನವೇ ಕ್ವಿಂಟನ್ ಡಿ ಕಾಕ್ ಅವರನ್ನು ಸೆಳೆದುಕೊಂಡಿದ್ದ ಮುಂಬೈ ಇಂಡಿಯನ್ಸ್ ಇದೀಗ 12ನೇ ಆವೃತ್ತಿಯ ಹರಾಜಿನಲ್ಲಿ ಅನುಭವಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಲಸಿತ್ ಮಾಲಿಂಗ ಅವರನ್ನು ಖರೀದಿಸಿದೆ. ಕಳೆದ ಆವೃತ್ತಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಯುವಿಯನ್ನು ಈ ಬಾರಿ ರೀಟೈನ್ ಮಾಡಿಕೊಂಡಿರಲಿಲ್ಲ. 

ಅಬ್ ಆಯೇಗಾ ಮಜಾ: ಮುಂಬೈ ಸೇರಿದ ಯುವಿ ಖಡಕ್ ವಾರ್ನಿಂಗ್..!

ಒಂದಾದ ಗುರು-ಶಿಷ್ಯರು:

ಐಪಿಎಲ್ 2019: ಯಾರು ಯಾವ ತಂಡಕ್ಕೆ- ಹರಾಜಿನ ಸಂಪೂರ್ಣ ಮಾಹಿತಿ

ಹರಾಜಿನಲ್ಲಿ ಯುವರಾಜ್ ಸಿಂಗ್ ಹಾಗೂ ಲಸಿತ್ ಮಾಲಿಂಗ ಅವರನ್ನು ಖರೀದಿಸಿದ್ದಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ಅನುಭವಿ ಹಾಗೂ ಯುವ ಆಟಗಾರರನ್ನೊಳಗೊಂಡ ಪರಿಪೂರ್ಣ ತಂಡವಾಗಿದೆ. ಅದರಲ್ಲೂ ಯುವರಾಜ್ ಸಿಂಗ್ ಹಾಗೂ ಲಸಿತ್ ಮಾಲಿಂಗ ನಮ್ಮ ತಂಡ ಕೂಡಿಕೊಂಡಿದ್ದು ಸಂತೋಷವಾಗಿದೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.

ರಾಜಸ್ಥಾನ ರಾಯಲ್ಸ್ ಫುಲ್ ಟೀಂ -ಉನಾದ್ಕಟ್‌ಗೆ 8.4 ಕೋಟಿ ಜಾಕ್‌ಪಾಟ್!

ಟೀಂ ಇಂಡಿಯಾದಲ್ಲಿ ಸಚಿನ್ ತೆಂಡುಲ್ಕರ್-ಯುವರಾಜ್ ಸಿಂಗ್ ಗುರುಶಿಷ್ಯರಂತೆ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಅವಕಾಶ ಸಿಕ್ಕಾಗಲೆಲ್ಲಾ ಯುವಿ, ಸಚಿನ್ ಕಾಲುಮುಟ್ಟಿ ನಮಸ್ಕಾರ ಮಾಡುವುದನ್ನು ನಾವು ನೋಡಿದ್ದೇವೆ. 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಯುವರಾಜ್ ಪ್ರಮುಖ ಪಾತ್ರ ವಹಿಸಿದ್ದರು, ಅಲ್ಲದೇ ಈ ವಿಶ್ವಕಪ್ ಗೆಲುವಲ್ಲಿ ಸಚಿನ್’ಗೆ ಅರ್ಪಿಸಿದ್ದರು. ಇದೀಗ ಮತ್ತೊಮ್ಮೆ ಸಚಿನ್-ಯುವಿ ಜೋಡಿ ಜತೆಯಾಗಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.