ವೆಸ್ಟ್‌ಇಂಡೀಸ್‌ನಲ್ಲಿ ನಡೆದ 2007ರ ಏಕದಿನ ವಿಶ್ವಕಪ್‌ನಲ್ಲಿ ಆಸ್ಪ್ರೇಲಿಯಾ ಚಾಂಪಿಯನ್‌ ಆಗಿ, ಸತತ 3ನೇ ಬಾರಿಗೆ ಟ್ರೋಫಿ ಗೆದ್ದ ಸಾಧನೆ ಮಾಡಿತು. 16 ತಂಡಗಳು ಪಾಲ್ಗೊಂಡಿದ್ದ ಟೂರ್ನಿಯಲ್ಲಿ ತಲಾ 4 ತಂಡಗಳಂತೆ 4 ಗುಂಪುಗಳಾಗಿ ವಿಂಗಡಿಸಲಾಗಿತ್ತು. ಪ್ರತಿ ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆದ ತಂಡಗಳು ಸೂಪರ್‌ 8 ಹಂತಕ್ಕೆ ಪ್ರವೇಶಿಸಿದವು. 

ಇದನ್ನೂ ಓದಿ: ವಿಶ್ವಕಪ್ 2019: ಫಿಕ್ಸಿಂಗ್‌ ಶಂಕೆಯಿಂದ ಭಾರತದ 2 ಪತ್ರಕರ್ತರಿಗೆ ನಿಷೇಧ!

ಭಾರತ ಹಾಗೂ ಪಾಕಿಸ್ತಾನ ಗುಂಪು ಹಂತದಲ್ಲೇ ಹೊರಬಿದ್ದು ಅಭಿಮಾನಿಗಳಲ್ಲಿ ಆಘಾತ ಮೂಡಿಸಿದವು. ಆಸ್ಪ್ರೇಲಿಯಾ, ನ್ಯೂಜಿಲೆಂಡ್‌, ಶ್ರೀಲಂಕಾ ಹಾಗೂ ದ.ಆಫ್ರಿಕಾ ಸೆಮಿಫೈನಲ್‌ ಪ್ರವೇಶಿಸಿದವು. ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಡಕ್ವತ್‌ರ್‍ ಲೂಯಿಸ್‌ ನಿಯಮದನ್ವಯ 53 ರನ್‌ ಗೆಲುವು ಸಾಧಿಸಿದ ಆಸೀಸ್‌, 4ನೇ ಬಾರಿ ಚಾಂಪಿಯನ್‌ ಆಯಿತು.

ಚಾಂಪಿಯನ್‌: ಆಸ್ಪ್ರೇಲಿಯಾ

ರನ್ನರ್‌-ಅಪ್‌: ಶ್ರೀಲಂಕಾ

ಭಾರತದ ಸಾಧನೆ: ಗುಂಪು ಹಂತದಲ್ಲೇ ಔಟ್‌