ವಿಶ್ವಕಪ್ 2019: ಫಿಕ್ಸಿಂಗ್‌ ಶಂಕೆಯಿಂದ ಭಾರತದ 2 ಪತ್ರಕರ್ತರಿಗೆ ನಿಷೇಧ!

ಐಸಿಸಿ ಟೂರ್ನಿ ಆರಂಭಕ್ಕೆ ಕೆಲ ದಿನಗಳಿರುವಾಗಲೇ ಫಿಕ್ಸಿಂಗ್ ಶಂಕೆ ವ್ಯಕ್ತವಾಗಿದೆ. ಕ್ರಿಕೆಟ್‌ನಿಂದ  ಕಳ್ಳಾಟ ಮುಕ್ತಗೊಳಿಸಲು ಐಸಿಸಿ, ಭಾರತದ ಇಬ್ಬರು ಪತ್ರಕರ್ತರಿಗೆ ನಿಷೇಧ ಹೇರಲಾಗಿದೆ.

world cup 2019 ICC ban 2 indian 3 bangladesh journalist for fixing suspects

ನವದೆಹಲಿ(ಮೇ.26): ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭ್ರಷ್ಟಾಚಾರ ತಡೆಯಲು ಸಕಲ ಪ್ರಯತ್ನ ನಡೆಸುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ), ಶಂಕಿತ ಬುಕ್ಕಿಗಳ ಪರವಾಗಿ ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ದುಬಾರಿ ಉಡುಗೊರೆ ಆಮಿಷವೊಡ್ಡಿದ ಆರೋಪದ ಮೇರೆಗೆ ಭಾರತದ ಇಬ್ಬರು, ಬಾಂಗ್ಲಾದೇಶದ ಮೂವರು ಪತ್ರಕರ್ತರಿಗೆ ನಿಷೇಧ ಹೇರಿದೆ. 

ಇದನ್ನೂ ಓದಿ: ವಿಶ್ವಕಪ್ ಅಭ್ಯಾಸ ಪಂದ್ಯ: ನ್ಯೂಜಿಲೆಂಡ್‌ಗೆ ಶರಣಾದ ಕೊಹ್ಲಿ ಬಾಯ್ಸ್!

ವಿಶ್ವಕಪ್‌ ಪಂದ್ಯಗಳ ವರದಿ ಮಾಡದಂತೆ, ಕ್ರೀಡಾಂಗಣಗಳ ಪ್ರವೇಶ ನಿರ್ಬಂಧಿಸಿದೆ. ಇದೇ ವೇಳೆ ಉದ್ಯಮಿಗಳು, ನಟರು, ರಾಜ್ಯ ಮಟ್ಟದ ಕ್ರಿಕೆಟಿಗರ ಮೆಲೂ ಕಣ್ಣಿಟ್ಟಿರುವುದಾಗಿ ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಆಡುತ್ತಿರುವ ಎಲ್ಲಾ 10 ತಂಡಗಳಿಗೆ ಪ್ರತ್ಯೇಕ ಭದ್ರತಾ ಅಧಿಕಾರಿಯನ್ನು ಐಸಿಸಿ ನೇಮಿಸಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: ವಿಶ್ವಕಪ್ 2019: ವಿಜಯ್ ಶಂಕರ್ ಸ್ಕ್ಯಾನ್ ರಿಪೋರ್ಟ್ ಬಹಿರಂಗ!

ಸದ್ಯ ಎಲ್ಲಾ ತಂಡಗಳು ಅಭ್ಯಾಸ ಪಂದ್ಯ ನಡೆಸುತ್ತಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್ ವಿರುದ್ದ ಮುಗ್ಗರಿಸಿದೆ. ಮೇ.30 ರಿಂದ 2019ರ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಜೂನ್ 5 ರಂದು ಭಾರತ ಮೊದಲ ಪಂದ್ಯ ಆಡಲಿದೆ. ಮೊದಲ ಹೋರಾಟದಲ್ಲಿ ಭಾರತ, ಸೌತ್ಆಫ್ರಿಕಾ ತಂಡವನ್ನು ಎದುರಿಸಲಿದೆ.
 

Latest Videos
Follow Us:
Download App:
  • android
  • ios