ಲಂಡನ್(ಮೇ.24): ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾ ಇಂಗ್ಲೆಂಡ್ ನಾಡಿನಲ್ಲಿ ಅಭ್ಯಾಸ ಆರಂಭಿಸಿದೆ. ಎಲ್ಲಾ ತಂಡಗಳು ಕಠಿಣ ಅಭ್ಯಾಸ ನಡೆಸುತ್ತಿದೆ. ಈ ಪ್ರಶಸ್ತಿ ಪ್ರಶಸ್ತಿ ಗೆಲ್ಲೋ ತಂಡಗಳಲ್ಲಿ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದೆ.  ಇಂಗ್ಲೆಂಡ್ ತಂಡದ ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಳ್ಳಲು ತಂಡದ ವೇಗಿ ಮುಖ್ಯ ಕಾರಣ ಎಂದು ಕೊಹ್ಲಿ ಹೇಳಿದ್ದಾರೆ. 

ಇದನ್ನೂ ಓದಿ: ಚುನಾವಣೆಯಲ್ಲಿ ಗೆಲುವು- ಮೋದಿಗೆ ಶುಭಕೋರಿದ ವಿರಾಟ್ ಕೊಹ್ಲಿ !

ಐಪಿಎಲ್ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡಿರುವ ವೇಗಿ ಜೋಫ್ರಾ ಆರ್ಚರ್, ಇಂಗ್ಲೆಂಡ್ ತಂಡದ X ಫ್ಯಾಕ್ಟರ್ ಎಂದಿದ್ದಾರೆ. ಇತ್ತೀಚೆಗೆ ಆರ್ಚರ್, ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಕ್ರಿಸ್ ಗೇಲ್ ವಿಕೆಟ್ ಕಬಳಿಸಬೇಕು ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ವಿರಾಟ್, ನಿಜಕ್ಕೂ ಜೋಫ್ರಾ ಆರ್ಚರ್ ಈ ರೀತಿ ಹೇಳಿದ್ದರೆ ಅದು ನನಗೆ ಸಿಗೋ ಗೌರವ ಎಂದಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಅಭಿನಂದಿಸಿದ ಟೀಂ ಇಂಡಿಯಾ ಕ್ರಿಕೆಟರ್ಸ್!

ಆರ್ಚರ್ ವಿಶ್ವದ ಅತ್ಯುತ್ತಮ ವೇಗಿ. ಆರ್ಚರ್ ಈ ರೀತಿ ಹೇಳಿರುವುದು ಖುಷಿ ನೀಡಿದೆ ಎಂದು ಕೊಹ್ಲಿ ಹೇಳಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಆರ್ಚರ್ ಪ್ರದರ್ಶನ ಹತ್ತಿರದಿಂದ ಗಮನಿಸಿದ್ದೇನೆ. ಇಂಗ್ಲೆಂಡ್ ತಂಡ ಕೀ ಪ್ಲೇಯರ್ ಎಂದು ಬಣ್ಣಿಸಿದ್ದಾರೆ.