ಸೌಥಾಂಪ್ಟನ್‌(ಮೇ.26): ಆಸ್ಪ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್‌ ವೇಗಿಗಳಾದ ಮಾರ್ಕ್ ವುಡ್‌ ಹಾಗೂ ಜೋಫ್ರಾ ಆರ್ಚರ್‌ ಗಾಯಗೊಂಡು ಮೈದಾನ ತೊರೆದ ಕಾರಣ, ಮಾಜಿ ನಾಯಕ ಹಾಗೂ ಹಾಲಿ ಸಹಾಯಕ ಕೋಚ್‌ ಪಾಲ್‌ ಕಾಲಿಂಗ್‌ವುಡ್‌ ಫೀಲ್ಡಿಂಗ್‌ ಮಾಡಲು ಮೈದಾನಕ್ಕಿಳಿದ ಪ್ರಸಂಗ ನಡೆಯಿತು. ವುಡ್‌ರ ಜೆರ್ಸಿ ತೊಟ್ಟು ಫೀಲ್ಡಿಂಗ್‌ ಮಾಡಿದ 42 ವರ್ಷದ ಕಾಲಿಂಗ್‌ವುಡ್‌, ಆಕರ್ಷಕ ಕ್ಷೇತ್ರರಕ್ಷಣೆ ಮೂಲಕ ಪ್ರೇಕ್ಷಕರ ಗಮನ ಸೆಳೆದರು.

ಇದನ್ನೂ ಓದಿ: ಗೌತಮ್ ಗಂಭೀರ್ ಮೂರ್ಖ-ನೂತನ ಸಂಸದನ ತಿವಿದ ಶಾಹಿದ್ ಆಫ್ರಿದಿ!

ಕಾಲಿಂಗ್‌ವುಡ್ ಅದ್ಬುತ ಫೀಲ್ಡಿಂಗ್ ಮೂಲಕ ಆಸಿಸ್ ನಾಯಕ ಆ್ಯರೋನ್ ಫಿಂಚ್ ಬಲಿ ಪಡೆದರು. ಮಾರ್ಕ್ ವುಡ್ ಕಾಲಿಗೆ ಗಾಯವಾಗಿರೋದರಿಂದ ವಿಶ್ರಾಂತಿಗೆ ಜಾರಿದ್ದಾರೆ. ಇನ್ನು ನಾಯಕ ಇಯಾನ್ ಮಾರ್ಗನ್ ಎಡೈಗ ಬೆರಳಿಗೆ ಗಾಯವಾಗಿದೆ.