ಓವಲ್(ಮೇ.26): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದೀಗ ವೇಗಿಗಳ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಜೊತೆ ಮತ್ತೊರ್ವ ವೇಗಿ ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ. ವೇಗಿಗಳಾಗಿ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ತಂಡದಲ್ಲಿದ್ದಾರೆ. ಬುಮ್ರಾ ಸ್ಥಾನ ಖಚಿತ. ಬುಮ್ರಾ ಜೊತೆ ಮತ್ತೊರ್ವ ವೇಗಿ ಯಾರಾಗಬೇಕು ಅನ್ನೋದನ್ನು ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಭಾರತ ಲೀಗ್‌ನಿಂದಲೇ ಹೊರಬೀಳಲಿದೆ-ನಟ KRK ಟೀಕೆ!

ಇಂಗ್ಲೆಂಡ್ ಕಂಡೀಷನ್ ಹಾಗೂ ಲೈನ್ ಅಂಡ್ ಲೆಂಥ್ ಪರಿಗಣಿಸಿದರೆ ಭುವನೇಶ್ವರ್ ಕುಮಾರ್ ಬದಲು ಮೊಹಮ್ಮದ್ ಶಮಿ ನನ್ನ ಆಯ್ಕೆ ಎಂದು ಗಂಗೂಲಿ ಹೇಳಿದ್ದಾರೆ. ಗಂಗೂಲಿ ಇದಕ್ಕೆ  ಕಾರಣವೂ ನೀಡಿದ್ದಾರೆ. ಇಂಜುರಿ ಬಳಿಕ ಭುವಿ ತಂಡಕ್ಕೆ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಆದರೆ ಕಳೆದೊಂದು ವರ್ಷದಲ್ಲಿ ಭುವಿ ಪ್ರದರ್ಶನ ಅಷ್ಟಕಷ್ಟೇ ಎಂದಿದ್ದಾರೆ.

ಇದನ್ನೂ ಓದಿ: ಗೌತಮ್ ಗಂಭೀರ್ ಮೂರ್ಖ-ನೂತನ ಸಂಸದನ ತಿವಿದ ಶಾಹಿದ್ ಆಫ್ರಿದಿ!

ನ್ಯೂಜಿಲೆಂಡ್ ವಿರದ್ದದ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ 9 ವಿಕೆಟ್ ಕಬಳಿಸೋ ಮೂಲಕ ಶಮಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಶಮಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಭುವನೇಶ್ವರ್ ಬದಲು ಮೊಹಮ್ಮದ್ ಶಮಿ ಉತ್ತಮ ಆಯ್ಕೆ. ಬುಮ್ರಾ ಹಾಗೂ ಶಮಿ ಎದುರಾಳಿಗಳನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಬಲ್ಲರು ಎಂದಿದ್ದಾರೆ.