ವಿಶ್ವಕಪ್ 2019: ತಂಡದ ಯಶಸ್ಸಿಗೆ ಕಾರಣರಾಗೋ 5 ಆರಂಭಿಕರು!
ವಿಶ್ವಕಪ್ ಟೂರ್ನಿಗೆ ಪ್ರತಿ ತಂಡಗಳು ತಯಾರಿ ಆರಂಭಿಸಿದೆ. ತಂಡದ ಆರಂಭಿಕರ ಪ್ರದರ್ಶನ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತೆ. ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಯಶಸ್ಸಿಗೆ ಕಾರಣವಾಗಲ್ಲ ಐವರು ಆರಂಭಿಕರ ವಿವರ ಇಲ್ಲಿದೆ.
ಬೆಂಗಳೂರು(ಫೆ.16): ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಆರಂಭಿಕರ ಪಾತ್ರ ತುಂಬಾ ಮುಖ್ಯ. ತಂಡಕ್ಕೆ ಅತ್ಯುತ್ತಮ ಆರಂಭ ಸಿಕ್ಕಿದರೆ ಯಶಸ್ಸು ಖಚಿತ. ಅದರಲ್ಲೂ ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕರು ಮೇಲೆ ಪಂದ್ಯದ ಫಲಿತಾಂಶ ಕೂಡ ನಿರ್ಧರಾವಾಗುತ್ತೆ. 2019ರ ವಿಶ್ವಕಪ್ ಟೂರ್ನಿಯಲ್ಲಿ ತಂಡದ ಯಶಸ್ಸಿಗೆ ನೆರವಾಗೋ ಆರಂಭಿಕರ ಲಿಸ್ಟ್ ಇಲ್ಲಿದೆ.
ಇದನ್ನೂ ಓದಿ: 2019ರ ವಿಶ್ವಕಪ್‌ಗೆ 18 ಟೀಂ ಇಂಡಿಯಾ ಕ್ರಿಕೆಟಿಗರ ಪಟ್ಟಿ ರೆಡಿ!
ರೋಹಿತ್ ಶರ್ಮಾ
ಟೀಂ ಇಂಡಿಯಾ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಕ್ರೀಸ್‌ನಲ್ಲಿದ್ದರೆ ಯಾವ ಮೊತ್ತವೂ ಅಸಾಧ್ಯವಲ್ಲ. ಸಿಕ್ಸರ್ ಮೂಲಕವೇ ರೋಹಿತ್ ಅಬ್ಬರಿಸುತ್ತಾರೆ. ಇಷ್ಟೇ ಅಲ್ಲ ತಂಡಕ್ಕೆ ಅತ್ಯುತ್ತಮ ಆರಂಭ ನೀಡುತ್ತಾರೆ. 3 ದ್ವಿಶತಕ ಸಿಡಿಸಿರುವ ರೋಹಿತ್ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕೀ ಪ್ಲೇಯರ್.
ಇದನ್ನೂ ಓದಿ: ಭಾರತ-ಪಾಕಿಸ್ತಾನ ವಿಶ್ವಕಪ್ ಹೋರಾಟ- ಯಾರು ಮರೆಯಲ್ಲ ಬದ್ಧವೈರಿಗಳ ಕದನ!
ಡೇವಿಡ್ ವಾರ್ನರ್
ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಈ ಭಾರಿಯ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳೋ ಕುರಿತು ಇನ್ನು ಸ್ಪಷ್ಟತೆ ಇಲ್ಲ. ಸದ್ಯ ಅಮಾನತ್ತಿನಲ್ಲಿರುವ ವಾರ್ನರ್ ವಿಶ್ವಕಪ್ ವೇಳೆ ತಂಡ ಸೇರಿಕೊಳ್ಳೋ ಸಾಧ್ಯತೆ ಹೆಚ್ಚು. ಎದುರಾಳಿಗ ಲೆಕ್ಕಾಚಾರವನ್ನೇ ಬುಡಮೇಲು ಮಾಡೋ ವಾರ್ನರ್ ಆಸಿಸ್ ತಂಡದ ಪ್ರಮುಖ ಆಟಗಾರ.
ಜಾನಿ ಬೈರಿಸ್ಟೋ
ಕಳೆದೆರಡು ವರ್ಷದಿಂದ ಅತ್ಯುತ್ತಮ ಫಾರ್ಮ್‌ನಲ್ಲಿರುವ ಇಂಗ್ಲೆಂಡ್ ಆರಂಭಿಕ ಜಾನಿ ಬೈರಿಸ್ಟೋ ಈ ಬಾರಿಯ ವಿಶ್ವಕಪ್‌ನಲ್ಲೂ ಅಬ್ಬರಿಸೋ ವಿಶ್ವಾಸದಲ್ಲಿದ್ದಾರೆ. ಜಾನಿ ಅದ್ಬುತ ಆರಂಭದಿಂದಲೇ ಇಂಗ್ಲೆಂಡ್ ತಂಡ ಇತ್ತೀಚೆಗೆ ಗರಿಷ್ಠ ಮೊತ್ತ ದಾಖಲಿಸಿ ಗೆಲುವಿನ ನಗೆ ಬೀರುತ್ತಿದೆ.
ಇದನ್ನೂ ಓದಿ: ವಿಶ್ವಕಪ್ 2019: ವಿರಾಟ್ ಕೊಹ್ಲಿಗೆ 4ನೇ ಕ್ರಮಾಂಕ?
ಮಾರ್ಟಿನ್ ಗಪ್ಟಲ್
2015ರ ವಿಶ್ವಕಪ್ ಟೂರ್ನಿಯಲ್ಲಿ ದ್ವಿಶತಕ ಸಿಡಿಸಿ ಅಬ್ಬರಿಸಿದ ನ್ಯೂಜಿಲೆಂಡ್ ಆರಂಭಿಕ ಮಾರ್ಟಿನ್ ಗಪ್ಟಲ್, ತಂಡದ ಕೀ ಪ್ಲೇಯರ್. ಗಪ್ಟಲಿ ಅಬ್ಬರಿಸಿದ ಬಹುತೇಕ ಪಂದ್ಯಗಳನ್ನ ನ್ಯೂಜಿಲೆಂಡ್ ಗೆದ್ದುಕೊಂಡಿದೆ.
ಇಮಾಮ್ ಉಲ್ ಹಕ್
ಪಾಕಿಸ್ತಾನ ಆರಂಭಿಕ ಇಮಾಮ್ ಉಲ್ ಹಕ್ ಕಳೆದೊಂದು ವರ್ಷದಿಂದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಬಾಬಾರ್ ಅಜಮ್ ಜೊತೆ ಅಬ್ಬರಿಸುತ್ತಿರುವ ಇಮಾಮ್ ಉಲ್ ಹಕ್, 2018ರ ಏಷ್ಯಾಕಪ್ ಟೂರ್ನಿಯಲ್ಲಿ 3 ಅರ್ಧಶತಕ ಸಿಡಿಸಿ ಮಿಂಚಿದ್ದರು. ಪಾಕ್ ತಂಡಕ್ಕೆ ಉತ್ತಮ ಆರಂಭ ನೀಡೋ ಇಮಾಮ್, ಈ ವಿಶ್ವಕಪ್ ಟೂರ್ನಿಯಲ್ಲೂ ಅಬ್ಬರಿಸೋ ವಿಶ್ವಾಸದಲ್ಲಿದ್ದಾರೆ.