ವಿಶ್ವಕಪ್ 2019: ವಿರಾಟ್ ಕೊಹ್ಲಿಗೆ 4ನೇ ಕ್ರಮಾಂಕ?
2019ರ ವಿಶ್ವಕಪ್ ಟೂರ್ನಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕ ಬದಲಾಯಿಸಲು ನಿರ್ಧರಿಸಿದ್ದಾರೆ. ಟೀಂ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿ ಈ ಕುರಿತು ಮಾಹಿತಿ ಹೊರಹಾಕಿದ್ದಾರೆ.
ವೆಲ್ಲಿಂಗ್ಟನ್(ಫೆ.07): ಮುಂಬರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸಾಧ್ಯತೆ ಇದೆ ಎಂದು ತಂಡದ ಪ್ರಧಾನ ಕೋಚ್ ರವಿಶಾಸ್ತ್ರಿ ಬುಧವಾರ ಹೇಳಿದ್ದಾರೆ. ಖಾಸಗಿ ಕ್ರಿಕೆಟ್ ವೆಬ್‌ಸೈಟ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಶಾಸ್ತ್ರಿ , ವಿಶ್ವಕಪ್‌ಗೆ ತಂಡದ ಹೇಗೆ ಸಿದ್ಧಗೊಂಡಿದೆ ಎನ್ನುವುದನ್ನು ವಿವರಿಸಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ 2019: ಸೆಮಿಫೈನಲ್ ಪ್ರವೇಶಿಸಬಲ್ಲ ಬಲಿಷ್ಠ 4 ತಂಡಗಳು ಯಾವುವು?
‘ಭಾರತ ತಂಡದ ಅಗ್ರ 3 ಆಟಗಾರರ ವಿಶೇಷತೆ ಏನೆಂದರೆ ಅವರನ್ನು ಕಾಯಂ ಕ್ರಮಾಂಕಗಳಿಂದ ಬೇರ್ಪಡಿಸಬಹುದು. ವಿಶ್ವಕಪ್‌ನಂತಹ ಟೂರ್ನಿಯಲ್ಲಿ ನಾವು 18-3 ಇಲ್ಲವೇ 16-4 ವಿಕೆಟ್ ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಹೀಗಾಗಿ ಸಮತೋಲನ ಕಾಪಾಡಿಕೊಳ್ಳುವ ದೃಷ್ಟಿಯಿಂದ ಕೊಹ್ಲಿ 4ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಏರ್ ಶೋ ಎಫೆಕ್ಟ್: ಬೆಂಗ್ಳೂರಲ್ಲಿ 2ನೇ ಟಿ20, ಮೊದಲ ಪಂದ್ಯಕ್ಕೆ ವೈಝಾಗ್ ಆತಿಥ್ಯ!
ಅಂಬಾಟಿ ರಾಯುಡು ಇಲ್ಲವೇ ಮತ್ತ್ಯಾರಾದರೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ’ ಎಂದು ಶಾಸ್ತ್ರಿ ಹೇಳಿದ್ದಾರೆ. ಈ ಮೂಲಕ ಅಂಬಾಟಿ ರಾಯುಡು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಅನ್ನೋ ಸೂಚನೆ ನೀಡಿದ್ದಾರೆ.