ನವದೆಹಲಿ(ಜ.31): ವಿಶ್ವಕಪ್ ಟೂರ್ನಿ ಆಯ್ಕೆಗೆ ತಯಾರಿ ಆರಂಭವಾಗಿದೆ. ಟೀಂ ಇಂಡಿಯಾ ಆಯ್ಕೆ ಸಮಿತಿ 30 ಸದಸ್ಯರ ಪಟ್ಟಿ ತಯಾರಿಸುತ್ತಿದೆ. ಇದೀಗ ಮಾಜಿ ಕ್ರಿಕೆಟಿಗ ಮೊಹೀಂದರ್ ಅಮರನಾಥ್ ಆಯ್ಕೆ ಸಮಿತಿಗೆ ಸಲಹೆ ನೀಡಿದ್ದಾರೆ. ವಿಶ್ವಕಪ್ ಟೂರ್ನಿ ಆಯ್ಕೆಗೆ ಐಪಿಎಲ್ ಪ್ರದರ್ಶನ ಪರಿಗಣಿಸುವುದು ಸೂಕ್ತವಲ್ಲ ಎಂದಿದ್ದಾರೆ.

ಇದನ್ನೂ ಓದಿ: 4ನೇ ಏಕದಿನ: ಭಾರತಕ್ಕೆ ತಿರುಗೇಟು ನೀಡಿದ ನ್ಯೂಜಿಲೆಂಡ್!

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಟಗಾರರ ಪದರ್ಶನವೇ ಮುಖ್ಯ ಹೊರತು, ಐಪಿಎಲ್ ಟೂರ್ನಿಯಲ್ಲ ಎಂದು ಅಮರನಾಥ್ ಹೇಳಿದ್ದಾರೆ. ಈ ಬಾರಿಯ ವಿಶ್ವಕಪ್ ಟೂರ್ನಿ ಗೆಲ್ಲಲು ಭಾರತಕ್ಕೆ ಅತ್ಯುತ್ತಮ ಅವಕಾಶವಿದೆ. ಹೀಗಾಗಿ ತಂಡದ ಆಯ್ಕೆ ಕೂಡ ಅಷ್ಟೇ ಮುಖ್ಯ ಎಂದಿದ್ದಾರೆ.

ಇದನ್ನೂ ಓದಿ: 2015ರ ವಿಶ್ವಕಪ್‌ನಿಂದ 2019 - ಟೀಂ ಇಂಡಿಯಾದ ಯಶಸ್ವಿ ಜರ್ನಿ ಮೆಲುಕು!

ಪ್ರಮುಖ ಆಟಗಾರರಿಗೆ ಐಪಿಎಲ್ ಟೂರ್ನಿಯಿಂದ ವಿಶ್ರಾಂತಿ ನೀಡುವುದು ಸೂಕ್ತ ಎಂದಿದ್ದಾರೆ. ಈ ಮೂಲಕ ಆಟಗಾರರಿಗೆ ಹೆಚ್ಚಿನ ವಿಶ್ರಾಂತಿ ಸಿಗಲಿದೆ. ಅಲ್ಲದೇ ಫಿಟ್ನೆಸ್, ಇಂಜುರಿ ಸಮಸ್ಯೆಯಿಂದ ದೂರವಿರಬಹುದು ಎಂದು ಅಮರನಾಥ್ ಹೇಳಿದ್ದಾರೆ.