Asianet Suvarna News Asianet Suvarna News

4ನೇ ಏಕದಿನ: ಭಾರತಕ್ಕೆ ತಿರುಗೇಟು ನೀಡಿದ ನ್ಯೂಜಿಲೆಂಡ್!

ಭಾರತ ವಿರುದ್ದದ ಏಕದಿನ ಸರಣಿಯಲ್ಲಿ ಆತಿಥೇಯ ನ್ಯೂಜಿಲೆಂಡ್ ಕೊನೆಗೂ ಗೆಲುವು ಸಾಧಿಸಿದೆ. 4ನೇ ಏಕದಿನ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡೋ ಮೂಲಕ ಸರಣಿಯಲ್ಲಿ ಮೊದಲ ಗೆಲುವಿನ ಸಿಹಿ ಕಂಡಿದೆ.

India Vs New zealand ODI cricket host beat India by 8-wicket
Author
Bengaluru, First Published Jan 31, 2019, 11:07 AM IST

ಹ್ಯಾಮಿಲ್ಟನ್(ಜ.31): ಭಾರತ ವಿರುದ್ಧ ಏಕದಿನ ಸರಣಿ ಸೋತು ಮುಖಭಂಗಕ್ಕೆ ಒಳಗಾಗಿದ್ದ ನ್ಯೂಜಿಲೆಂಡ್ 4ನೇ ಪಂದ್ಯದಲ್ಲಿ ತಿರುಗೇಟು ನೀಡಿದೆ. ಟೀಂ ಇಂಡಿಯಾವನ್ನ ಅಲ್ಪಮೊತ್ತಕ್ಕೆ ಆಲೌಟ್ ಮಾಡಿದ ನ್ಯೂಜಿಲೆಂಡ್ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಸೋಲಿನ ಅಂತರವನ್ನ ಕಡಿಮೆ ಮಾಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಟ್ರೆಂಟ್ ಬೋಲ್ಟ್ ಹಾಗೂ ಕೊಲಿನ್ ಡೇ ಗ್ರ್ಯಾಂಡ್ ಹೊಮ್ಮೆ ದಾಳಿಗೆ ತತ್ತರಿಸಿತು.  ಶಿಖರ್ ಧವನ್ 13, ನಾಯಕ ರೋಹಿತ್ ಶರ್ಮಾ 7, ತಂಡಕ್ಕೆ ಪಾದಾರ್ಪಣೆ ಮಾಡಿದ ಶುಭ್‌ಮಾನ್ ಗಿಲ್ 9, ಅಂಬಾಟಿ ರಾಯುಡು, ದಿನೇಶ್ ಕಾರ್ತಿಕ್ ಶೂನ್ಯ ಸುತ್ತಿದರೆ, ಕೇದಾರ್ ಜಾಧವ್ 1 ರನ್ ಸಿಡಿಸಿ ಔಟಾದರು. 35 ರನ್‌ಗೆ 6 ವಿಕೆಟ್ ಕಳೆದುಕೊಂಡಿತು. 

ಇದನ್ನೂ ಓದಿ: 2020 ಟಿ20 ವಿಶ್ವಕಪ್: ಗುಂಪು ಹಂತದಲ್ಲಿ ಭಾರತ-ಪಾಕ್ ಮುಖಾಮುಖಿ ಇಲ್ಲ!

ಭುವನೇಶ್ವರ್ ಕುಮಾರ್ 1 ರನ್ ಸಿಡಿಸಿ ಔಟಾದರೆ, ಹಾರ್ದಿಕ್ ಪಾಂಡ್ಯ 16 ರನ್ ಕಾಣಿಕೆ ನೀಡಿದರು. ಈ ಮೂಲಕ ಭಾರತ 50 ರನ್ ಗಡಿ ದಾಟಿತು. ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಹೋರಾಟದಿಂದ ಭಾರತ ಅತ್ಯಲ್ಪ ಮೊತ್ತದ ಭೀತಿಯಿಂದ ಪಾರಾಯಿತು. 

ಕುಲ್ದೀಪ್ 15 ರನ್ ಸಿಡಿಸಿ ಔಟಾದರು. ಖಲೀಲ್ ಅಹಮ್ಮದ್ 5 ರನ್ ಸಿಡಿಸಿ ಔಟಾದರು. ಇನ್ನು ಯಜುವೇಂದ್ರ ಚಹಾಲ್ ಅಜೇಯ 18 ರನ್ ಸಿಡಿಸಿದರು. ಈ ಮೂಲಕ ಭಾರತ 92 ರನ್‌ಗೆ ಆಲೌಟ್ ಆಯಿತು. ನ್ಯೂಜಿಲೆಂಡ್ ವಿರುದ್ಧ ಭಾರತದ 2ನೇ ಅತ್ಯಲ್ಪ ಮೊತ್ತ ಅನ್ನೋ ಅಪಖ್ಯಾತಿಗೆ ಗುರಿಯಾಯ್ತು. ಇದಕ್ಕೂ ಮೊದಲು 2000ನೇ ಇಸವಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 81 ರನ್‌ಗೆ ಆಲೌಟ್ ಆಗಿತ್ತು. ಟ್ರೆಂಬ್ ಬೋಲ್ಟ್ 5, ಕೊಲಿನ್ ಡೇ ಗ್ರ್ಯಾಂಡ್ ಹೊಮ್ಮೆ 3, ಟೊಡ್ ಆಶ್ಲೆ, ಜೇಮ್ಸ್ ನೀಶಮ್ ತಲಾ 1 ವಿಕೆಟ್ ಕಬಳಿಸಿದರು.

ಇದನ್ನೂ ಓದಿ: ಸರಣಿ ಗೆಲುವಿನ ಬಳಿಕ ಅನುಷ್ಕಾ ಜೊತೆ ಕೊಹ್ಲಿ ಜಾಲಿ ಟ್ರಿಪ್!

93 ರನ್ ಗುರಿ ಪಡೆದ ನ್ಯೂಜಿಲೆಂಡ್ 14.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಮಾರ್ಟಿನ್ ಗಪ್ಟಿಲ್ 14, ನಾಯಕ ಕೇನ್ ವಿಲಿಯಮ್ಸನ್ 11 ರನ್ ಸಿಡಿಸಿ ಔಟಾದರು. ಹೆನ್ರಿ ನಿಕೋಲಸ್ ಅಜೇಯ 30 ಹಾಗೂ ರಾಸ್ ಟೇಲರ್ ಅಜೇಯ 37 ರನ್ ಸಿಡಿಸಿ ಗೆಲುವು ತಂದುಕೊಟ್ಟರು. 

Follow Us:
Download App:
  • android
  • ios