ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ನಿಖಾತ್ ಜರೀನ್ ಫೈನಲ್‌ಗೆ ಲಗ್ಗೆ
* ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸಿದ ನಿಖಾತ್ ಜರೀನ್
* ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಡುತ್ತಿರುವ ನಿಖಾತ್ ಜರೀನ್
* ಕಿರಿಯರ ವಿಶ್ವ ಚಾಂಪಿಯನ್ ಆಗಿರುವ ಹೈದರಾಬಾದ್ ಮೂಲದ ಜರೀನ್
ಇಸ್ತಾಂಬುಲ್(ಮೇ.19): ಭಾರತದ ಯುವ ಬಾಕ್ಸರ್ ನಿಖಾತ್ ಜರೀನ್ (Nikhat Zareen) (52 ಕೆ.ಜಿ.) ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಸೆಮಿಫೈನಲ್ ಪ್ರವೇಶಿಸಿದ್ದ ಮತ್ತಿಬ್ಬರು ಬಾಕ್ಸರ್‌ಗಳಾದ ಮನೀಶಾ ಮೌನ್(57 ಕೆ.ಜಿ.) ಹಾಗೂ ಪವೀರ್‍ನ್ ಹೂಡಾ(63 ಕೆ.ಜಿ.) ಸೋಲು ಅನುಭವಿಸಿ ಕಂಚಿನ ಪದಕಗಳಿಗೆ ತೃಪ್ತಿಪಟ್ಟಿದ್ದಾರೆ.
ಚೊಚ್ಚಲ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ (World Boxing Championships) ಆಡುತ್ತಿರುವ ನಿಖಾತ್, ಬ್ರೆಜಿಲ್‌ನ ಕ್ಯಾರೊಲೈನ್ ಡೆ ಅಲ್ಮೆಡಾ ವಿರುದ್ಧ 5-0 ಅಂತರದಲ್ಲಿ ಗೆದ್ದು ಸಂಭ್ರಮಿಸಿದರು. ಮಾಜಿ ಕಿರಿಯರ ವಿಶ್ವ ಚಾಂಪಿಯನ್ ಆಗಿರುವ ಹೈದರಾಬಾದ್ ಮೂಲದ ಜರೀನ್, ಹಿರಿಯರ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಭಾರತದ 5ನೇ ಬಾಕ್ಸರ್ ಎನಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. 6 ಬಾರಿ ಚಾಂಪಿಯನ್ ಮೇರಿ ಕೋಮ್, ಸರಿತಾ ದೇವಿ, ಜೆನ್ನಿ ಆರ್.ಎಲ್. ಮತ್ತು ಲೇಖಾ ಸಿ. ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಇನ್ನು ಮನೀಶಾ, ಟೋಕಿಯೋ ಒಲಿಂಪಿಕ್ಸ್ ಕಂಚು ವಿಜೇತೆ ಇಟಲಿಯ ಇರ್ಮಾ ಟೆಸ್ಟಾವಿರುದ್ಧ 0-5ರಲ್ಲಿ ಸೋತರೆ, ಪವೀರ್ನ್ ಐರ್ಲೆಂಡ್‌ನ ಏಮಿ ಬ್ರಾಡ್‌ಹಸ್ಟ್‌ರ್ ವಿರುದ್ಧ 1-4ರಲ್ಲಿ ಪರಾಭವಗೊಂಡರು.
ಎಫ್‌ಐಎಚ್ ಹಾಕಿ ಫೈವ್ಸ್ ಟೂರ್ನಿ: ಭಾರತ ತಂಡಕ್ಕೆ ರಾಜ್ಯದ ರಾಹೀಲ್
ನವದೆಹಲಿ: ಚೊಚ್ಚಲ ಆವೃತ್ತಿಯ ಎಫ್‌ಐಎಚ್ ಹಾಕಿ ಫೈವ್ಸ್ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದ್ದು, 9 ಸದಸ್ಯರ ತಂಡದಲ್ಲಿ ಕರ್ನಾಟಕದ ಮೊಹಮದ್ ರಾಹೀಲ್ ಸ್ಥಾನ ಪಡೆದಿದ್ದಾರೆ. ಡಿಫೆಂಡರ್ ಗುರಿಂದರ್ ಸಿಂಗ್ ತಂಡವನ್ನು ಮುನ್ನಡೆಸಲಿದ್ದಾರೆ. ಸ್ವಿಜರ್‌ಲೆಂಡ್‌ನ ಲುಸ್ಸಾನೆಯಲ್ಲಿ ಜೂ.4, 5ರಂದು ನಡೆಯಲಿರುವ ಟೂರ್ನಿಯಲ್ಲಿ ಭಾರತ, ಪೋಲೆಂಡ್, ಸ್ವಿಜರ್‌ಲೆಂಡ್, ಉರುಗ್ವೆ ಮತ್ತು ದಕ್ಷಿಣ ಆಫ್ರಿಕಾ ಸೆಣಸಲಿವೆ. ಮೊದಲ ದಿನ ಭಾರತ ತಂಡ ಉರುಗ್ವೆ ಹಾಗೂ ಪೋಲೆಂಡ್ ವಿರುದ್ಧ ಆಡಲಿದ್ದು, 2ನೇ ದಿನ ಸ್ವಿಜರ್‌ಲೆಂಡ್ ಮತ್ತು ದ.ಆಫ್ರಿಕಾವನ್ನು ಎದುರಿಸಲಿದೆ. ಜೂ.5ರಂದೇ ಅಗ್ರ 2 ಸ್ಥಾನ ಪಡೆಯುವ ತಂಡಗಳ ನಡುವೆ ಫೈನಲ್ ನಡೆಯಲಿದೆ.
ರಾಷ್ಟ್ರೀಯ ಹಾಕಿ: ಕರ್ನಾಟಕ ವನಿತೆಯರಿಗೆ ಒಲಿದ ಬೆಳ್ಳಿ
ಹಾಕಿಯ ‘ಟಿ20’ ಈ ಹಾಕಿ ಫೈವ್‌್ಸ ಟೂರ್ನಿ
ಸಂಪ್ರದಾಯಿಕ ಹಾಕಿಗೂ ಈ ಹಾಕಿ ಫೈವ್ಸ್‌ಗೂ ಹಲವು ವ್ಯತ್ಯಾಸಗಳಿವೆ. ಇದರಲ್ಲಿ 11ರ ಬದಲು ಕೇವಲ 5 ಆಟಗಾರರು ಆಡಲಿದ್ದಾರೆ. ಅಂಕಣ ಸಣ್ಣದಿರಲಿದೆ. ಪ್ರತಿ ಪಂದ್ಯ ತಲಾ 10 ನಿಮಿಷಗಳ ಎರಡು ಅವಧಿ ಎಂದರೆ ಒಟ್ಟು 20 ನಿಮಿಷಗಳ ನಡೆಯಲಿದೆ. ಇಲ್ಲಿ ಹೆಚ್ಚೆಚ್ಚು ಗೋಲುಗಳು ದಾಖಲಾಗಲಿವೆ. ಇದೊಂದು ರೀತಿ ಹಾಕಿಯ ಟಿ20 ಇದ್ದಂತೆ.
ಥಾಯ್ಲೆಂಡ್ ಓಪನ್: 2ನೇ ಸುತ್ತಿಗೆ ಶ್ರೀಕಾಂತ್, ಸಿಂಧು
ಬ್ಯಾಂಕಾಕ್: ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್ 2ನೇ ಸುತ್ತಿಗೇರಿದ್ದಾರೆ. ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್, ಫ್ರಾನ್ಸ್‌ನ ಬ್ರೈಸ್ ಲೆವೆರೆಡ್ಜ್ ವಿರುದ್ಧ 18-21, 21-10, 21-16ರಲ್ಲಿ ಗೆದ್ದರೆ, ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಅಮೆರಿಕದ ಲಾರೆನ್ ಲ್ಯಾಮ್ ವಿರುದ್ಧ ಸಿಂಧು 21-19, 19-21, 21-18ರಲ್ಲಿ ಗೆದ್ದರು. ಸೈನಾ ನೆಹ್ವಾಲ್, ಎಚ್.ಎಸ್.ಪ್ರಣಯ್ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.