ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್: ಸೆಮೀಸ್‌ಗೆ ಅಮಿತ್‌, ಮನೀ​ಶ್‌

ವಿಶ್ವ ಬಾಕ್ಸಿಂಗ್‌ ಚಾಂಪಿ​ಯನ್‌ಶಿಪ್‌ನಲ್ಲಿ ಭಾರತ ಕೊನೆಗೂ ಪದಕದ ಖಾತೆ ತೆರೆಯುವುದನ್ನು ಖಚಿತಪಡಿಸಿಕೊಂಡಿದೆ. ಅಮಿತ್ ಹಾಗೂ ಮನೀಶ್‌ ಸೆಮೀಸ್ ಪ್ರವೇಶಿದ್ದು, ಭಾರತ ಇದೇ ಮೊದಲ ಬಾರಿಗೆ ವಿಶ್ವ ಬಾಕ್ಸಿಂಗ್‌ ಚಾಂಪಿ​ಯನ್‌ಶಿಪ್‌ನಲ್ಲಿ ಒಂದಕ್ಕಿಂತ ಹೆಚ್ಚು ಪದಕ ಜಯಿಸಿದ ಸಾಧನೆ ಮಾಡಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

World Boxing Championships 2019 Amit Panghal Manish Kaushik enter semi Finals

ರಷ್ಯಾ(ಸೆ.19): ವಿಶ್ವ ಬಾಕ್ಸಿಂಗ್‌ ಚಾಂಪಿ​ಯನ್‌ಶಿಪ್‌ನಲ್ಲಿ ಭಾರ​ತಕ್ಕೆ 2 ಪದಕ ಖಚಿತವಾಗಿದೆ. 52 ಕೆ.ಜಿ ವಿಭಾಗದಲ್ಲಿ ಅಮಿತ್‌ ಪಂಗಲ್‌ ಹಾಗೂ 63 ಕೆ.ಜಿ ವಿಭಾಗದಲ್ಲಿ ಮನೀಶ್‌ ಕೌಶಿಕ್‌ ಸೆಮಿ​ಫೈ​ನಲ್‌ ಪ್ರವೇ​ಶಿ​ಸಿದ್ದು, ಕನಿಷ್ಠ ಕಂಚಿನ ಪದಕ ಖಚಿತಪಡಿ​ಸಿ​ಕೊಂಡಿ​ದ್ದಾರೆ. ಇದೇ ಮೊದಲ ಬಾರಿಗೆ ಭಾರತ ವಿಶ್ವ ಚಾಂಪಿ​ಯನ್‌ಶಿಪ್‌ನ ಆವೃ​ತ್ತಿ​ಯೊಂದ​ರಲ್ಲಿ ಒಂದ​ಕ್ಕಿಂತ ಹೆಚ್ಚು ಪದಕ ಗೆಲ್ಲ​ಲಿದೆ.

ಚೀನಾ ಓಪನ್‌ ಬ್ಯಾಡ್ಮಿಂಟನ್‌: ಸಿಂಧು ಮುನ್ನಡೆ, ಸೈನಾ ಔಟ್‌

ಬುಧ​ವಾ​ರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಫಿಲಿಪೈನ್ಸ್‌ನ ಕಾರ್ಲೊ ಪಾಲಮ್‌ರನ್ನು 4-1 ಅಂಕಗಳಿಂದ ಮಣಿಸಿದ ಏಷ್ಯನ್‌ ಚಾಂಪಿಯನ್‌ ಅಮಿತ್‌ ಸೆಮಿಫೈನಲ್‌ಗೇರಿ​ದರು. ಇನ್ನು ಬ್ರೆಜಿಲ್‌ನ ವಾಂಡರ್‌ಸನ್‌ ಡಿ ಒಲಿವಿಯೆರಾ ವಿರುದ್ಧ 5-0 ಅಂತ​ರ​ದಲ್ಲಿ ಗೆದ್ದ ಮನೀಶ್‌ ಸಹ ಸೆಮೀಸ್‌ಗೆ ಲಗ್ಗೆಯಿಟ್ಟರು. 

ಪ್ರೊ ಕಬಡ್ಡಿ 2019: ಮುಂಬಾಗೆ ರೋಚಕ ಜಯ

ಇದೇ ವೇಳೆ 91 ಕೆ.ಜಿ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಈಕ್ವೆ​ಡಾರ್‌ನ ಕ್ಯಾಸ್ಟಿಲ್ಲೋ ವಿರುದ್ಧ ಸೋತ ಸಂಜೀತ್‌ ಹಾಗೂ 57 ಕೆ.ಜಿ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಕವೀಂದರ್‌ ಬಿಶ್ತ್, ಬ್ರಿಟನ್‌ನ ಪೀಟರ್‌ ಮೆಕ್‌ಗ್ರೇಲ್‌ ವಿರುದ್ಧ ಸೋಲುಂಡು ಪದಕ ಅವ​ಕಾಶ ಕೈಚೆ​ಲ್ಲಿ​ದರು.
 

Latest Videos
Follow Us:
Download App:
  • android
  • ios