ಪುಣೆ[ಸೆ.19]: ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಪ್ಲೇ-ಅಫ್‌ಗೇರಲು ತಂಡ​ಗಳ ನಡುವೆ ಪೈಪೋಟಿ ಹೆಚ್ಚಾ​ಗು​ತ್ತಿದ್ದು, ಮಾಜಿ ಚಾಂಪಿ​ಯನ್‌ ಯು ಮುಂಬಾ ಅಗತ್ಯ ಗೆಲುವು ಸಾಧಿ​ಸಿದೆ. 

2020 ಒಲಿಂಪಿಕ್ಸ್ ಹಾಕಿ: ರಾಜ್ಯದ ರಘು ಅಂಪೈರ್

ಬುಧ​ವಾ​ರ ಇಲ್ಲಿ ನಡೆದ ಯು.ಪಿ.​ಯೋಧಾ ವಿರು​ದ್ಧದ ಪಂದ್ಯ​ದಲ್ಲಿ ಮುಂಬಾ 39-36ರಲ್ಲಿ ಗೆಲುವು ಸಾಧಿಸಿ, ಅಂಕ​ಪ​ಟ್ಟಿ​ಯಲ್ಲಿ 5ನೇ ಸ್ಥಾನ​ಕ್ಕೇ​ರಿ​ತು. ಯೋಧಾ ತಂಡ 6ನೇ ಸ್ಥಾನ​ದ​ಲ್ಲಿದ್ದು, ಪ್ಲೇ-ಆಫ್‌ಗೇರುವ ಭರ​ವಸೆ ಉಳಿ​ಸಿ​ಕೊಂಡಿದೆ.

PKL 2019; ದಬಾಂಗ್ ದಿಲ್ಲಿಗೆ ಹ್ಯಾಟ್ರಿಕ್ ಗೆಲುವು: ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ!

ಬುಧ​ವಾ​ರ ನಡೆದ 2ನೇ ಪಂದ್ಯ​ದಲ್ಲಿ ಪುಣೇರಿ ಪಲ್ಟನ್‌ ವಿರುದ್ಧ ತಮಿಳ್‌ ತಲೈ​ವಾಸ್‌ 36-36ರಲ್ಲಿ ಟೈ ಸಾಧಿ​ಸಿತು. ಈಗಾ​ಗಲೇ ಪ್ಲೇ-ಆಫ್‌ ರೇಸ್‌ನಿಂದ ಹೊರ​ಬಿ​ದ್ದಿ​ರುವ ತಲೈ​ವಾಸ್‌ಗೆ ಈ ಫಲಿ​ತಾಂಶ ಹೆಚ್ಚಿನ ವ್ಯತ್ಯಾಸವನ್ನೇನೂ ಮಾಡ​ದಿ​ದ್ದರೂ, ಜಯದ ನಿರೀ​ಕ್ಷೆಯಲ್ಲಿದ್ದ ಪುಣೆಗೆ ಆಘಾತವಾಯಿತು. 

ಪುಣೆ 17 ಪಂದ್ಯ​ಗ​ಳಿಂದ ಕೇವಲ 5 ಗೆಲುವು ಸಾಧಿ​ಸಿದ್ದು, ಇನ್ನು​ಳಿದ 5 ಪಂದ್ಯ​ಗ​ಳಲ್ಲಿ ಗೆದ್ದ​ರೂ ಪ್ಲೇ-ಆಫ್‌ಗೇರು​ವುದು ಅನು​ಮಾ​ನ​ವೆ​ನಿ​ಸಿದೆ.