Asianet Suvarna News Asianet Suvarna News

ವಿಶ್ವ ಬಾಕ್ಸಿಂಗ್‌ ಚಾಂಪಿ​ಯನ್‌ಶಿಪ್‌: ಕ್ವಾರ್ಟರ್‌ಗೆ ಭಾರ​ತದ ನಾಲ್ವ​ರು!

ವಿಶ್ವ ಬಾಕ್ಸಿಂಗ್‌ ಚಾಂಪಿ​ಯನ್‌ಶಿಪ್‌ನಲ್ಲಿ ಭಾರತದ ನಾಲ್ವರು ಬಾಕ್ಸರ್‌ಗಳು ಕ್ವಾರ್ಟರ್ ಫೈನಲ್ ಪ್ರವೇಶಿದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

World Boxing Championships 2019 Amit Panghal and 3 more Boxer enters quarter finals
Author
Ekaterinburg, First Published Sep 18, 2019, 12:12 PM IST

ಎಕಟೆರಿನ್ಬರ್ಗ್‌:(ಸೆ.18): ವಿಶ್ವ ಬಾಕ್ಸಿಂಗ್‌ ಚಾಂಪಿ​ಯನ್‌ಶಿಪ್‌ನಲ್ಲಿ  ಅಮಿತ್‌ ಪಂಗಲ್‌ ಸೇರಿದಂತೆ ಭಾರ​ತದ ನಾಲ್ವರು ಬಾಕ್ಸರ್‌ಗಳು ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿ​ದ್ದಾರೆ. 

ವಿಶ್ವ ಬಾಕ್ಸಿಂಗ್‌ ಕೂಟ: ಭಾರ​ತೀಯ​ರಿಗೆ ಯಶ​ಸ್ಸು

ಮಂಗಳವಾರ ನಡೆದ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯ​ಗ​ಳಲ್ಲಿ ಏಷ್ಯನ್‌ ಚಾಂಪಿಯನ್‌ ಅಮಿತ್‌ ಪಂಗಲ್‌ (52 ಕೆ.ಜಿ), ಮನೀಶ್‌ ಕೌಶಿಕ್‌ (63 ಕೆ.ಜಿ), ಸಂಜೀತ್‌ (91 ಕೆ.ಜಿ) ಹಾಗೂ ಕವೀಂದರ್‌ ಬಿಶ್ತ್ (57 ಕೆ.ಜಿ) ಗೆಲುವು ಸಾಧಿ​ಸಿದರು. ಅಮಿತ್‌, ಟರ್ಕಿಯ ಬತ್ಹೂನ್‌ ಸಿಟ್ಸಿ ವಿರುದ್ಧ 5-0 ಯಲ್ಲಿ ಗೆಲುವು ಸಾಧಿಸಿದರೆ, ಮನೀಶ್‌ ಕೌಶಿಕ್‌ ಮಂಗೋಲಿಯಾದ ಚಿಂಜೊರಿಂಗ್‌ ಬಾಟರ್ಸುಖ್‌ ಎದುರು 5-0ಯಲ್ಲಿ ಜಯ ಪಡೆದರು. 

ಪದ್ಮವಿಭೂಷಣ ಪ್ರಶಸ್ತಿಗೆ ಬಾಕ್ಸರ್ ಮೇರಿ ಕೋಮ್ ಹೆಸರು ಶಿಫಾರಸು

ಉಜ್ಬೇಕಿಸ್ತಾನದ ಸಂಜಾರ್‌ ಟರ್ಸುನೊವ್‌ ವಿರುದ್ಧ ಸಂಜೀತ್‌ 3-2 ರಲ್ಲಿ ಗೆದ್ದರೆ, ಕವೀಂದರ್‌ ಫಿನ್‌ಲ್ಯಾಂಡ್‌ನ ಅರ್ಸಲನ್‌ ಖಟೆವ್‌ ಎದುರು 3-2ರಲ್ಲಿ ಗೆದ್ದು ಅಂತಿಮ 8ರ ಘಟ್ಟಕ್ಕೆ ಪ್ರವೇಶ ಪಡೆ​ದರು. ಈ ನಾಲ್ವರು ಇನ್ನೊಂದು ಪಂದ್ಯ ಗೆದ್ದು ಸೆಮಿ​ಫೈ​ನಲ್‌ ಪ್ರವೇ​ಶಿ​ಸಿದರೆ, ಕನಿಷ್ಠ ಕಂಚಿನ ಪದಕ ಖಚಿತವಾಗ​ಲಿದೆ.
 

Follow Us:
Download App:
  • android
  • ios