Asianet Suvarna News Asianet Suvarna News

ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ಸರಣಿ ಜಯ

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಮಹಿಳಾ ತಂಡ ಸರಣಿ ಗೆಲುವು ಸಾಧಿಸಿದೆ. 2ನೇ ಪಂದ್ಯದಲ್ಲಿ ಅಬ್ಬರಿಸೋ ಮೂಲಕ ಇನ್ನು ಒಂದ ಪಂದ್ಯ ಬಾಕಿ ಇರುವಂತೆ ಸರಣಿ ಕೈವಶ ಮಾಡಿದೆ. ದ್ವಿತೀಯ ಪಂದ್ಯದ ಹೈಲೈಟ್ಸ್ ಇಲ್ಲಿದೆ.

Women ODI cricket India beat England by 7 wickets and clinch the series
Author
Bengaluru, First Published Feb 26, 2019, 9:02 AM IST

ಮುಂಬೈ(ಫೆ.26): ವೇಗಿಗಳಾದ ಜೂಲನ್‌ ಗೋಸ್ವಾಮಿ ಹಾಗೂ ಶಿಖಾ ಪಾಂಡೆ ಬಿರುಸಿನ ದಾಳಿ, ಸ್ಮೃತಿ ಮಂಧನಾ ಹಾಗೂ ಮಿಥಾಲಿ ರಾಜ್‌ರ ಆಕರ್ಷಕ ಬ್ಯಾಟಿಂಗ್‌ ನೆರವಿನಿಂದ ಭಾರತ ಮಹಿಳಾ ತಂಡ, ಇಂಗ್ಲೆಂಡ್‌ ವಿರುದ್ಧ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 2-0 ಅಜೇಯ ಮುನ್ನಡೆ ಸಾಧಿಸಿದ್ದು, ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿದೆ.

ಇದನ್ನೂ ಓದಿ: ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು - ಭಾರತೀಯರ ಹೃದಯ ಗೆದ್ದ ಬಿಸಿಸಿಐ!

ಸತತ 2 ಪಂದ್ಯಗಳಲ್ಲಿ ಗೆಲ್ಲುವ ಮೂಲಕ, ಐಸಿಸಿ ಏಕದಿನ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಭಾರತ 2ನೇ ಸ್ಥಾನಕ್ಕೇರಿದೆ. ತಂಡ ಸದ್ಯ ಆಡಿರುವ 14 ಪಂದ್ಯಗಳಲ್ಲಿ 8 ಗೆಲುವುಗಳೊಂದಿಗೆ 16 ಅಂಕ ಕಲೆಹಾಕಿದೆ. ಆಸ್ಪ್ರೇಲಿಯಾ 20 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಪಟ್ಟಿಯಲ್ಲಿ ಅಗ್ರ 4 ಸ್ಥಾನಗಳನ್ನು ಪಡೆಯುವ ತಂಡಗಳು 2021ರ ಐಸಿಸಿ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲಿವೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ಆರಂಭಿಕ ಕುಸಿತದ ಬಳಿಕ ನತಾಲಿ ಶೀವರ್‌ (85) ಏಕಾಂಗಿ ಹೋರಾಟದ ನೆರವಿನಿಂದ 43.3 ಓವರ್‌ಗಳಲ್ಲಿ 161 ರನ್‌ಗೆ ಆಲೌಟ್‌ ಅಯಿತು. 162 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಭಾರತ, 2ನೇ ಓವರ್‌ನಲ್ಲೇ ಜೆಮಿಮಾ ರೋಡ್ರಿಗಸ್‌ (0) ವಿಕೆಟ್‌ ಕಳೆದುಕೊಂಡರೂ, 2 ಪ್ರಮುಖ ಜೊತೆಯಾಟಗಳ ನೆರವಿನಿಂದ ಸುಲಭ ಗೆಲುವು ದಾಖಲಿಸಿತು. ಸ್ಮೃತಿ ಮಂಧನಾ ಹಾಗೂ ಪೂನಮ್‌ ರಾವತ್‌ (32) 2ನೇ ವಿಕೆಟ್‌ಗೆ 73 ರನ್‌ ಸೇರಿಸಿದರೆ, 3ನೇ ವಿಕೆಟ್‌ಗೆ ಸ್ಮೃತಿ ಹಾಗೂ ಮಿಥಾಲಿ ರಾಜ್‌ 66 ರನ್‌ ಜೊತೆಯಾಟವಾಡಿದರು.

ಇದನ್ನೂ ಓದಿ: ಮೊದಲ ಏಕದಿನ ಪಂದ್ಯದಲ್ಲಿ ಮಿಥಾಲಿ ಪಡೆಗೆ ಭರ್ಜರಿ ಜಯ

ಅತ್ಯುತ್ತಮ ಲಯದಲ್ಲಿರುವ ಸ್ಮೃತಿ, 74 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ನೊಂದಿಗೆ 63 ರನ್‌ ಗಳಿಸಿದರೆ, ಮಿಥಾಲಿ 69 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 47 ರನ್‌ ಗಳಿಸಿ ಅಜೇಯರಾಗಿ ಉಳಿದರು. ಭಾರತ ಇನ್ನೂ 8.5 ಓವರ್‌ ಬಾಕಿ ಇರುವಂತೆ ಕೇವಲ 3 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

ಇದಕ್ಕೂ ಮುನ್ನ, ಜೂಲನ್‌ 8.3 ಓವರ್‌ಗಳಲ್ಲಿ 30 ರನ್‌ಗೆ 4 ವಿಕೆಟ್‌ ಕಿತ್ತರೆ, ಶಿಖಾ 10 ಓವರ್‌ಗಳಲ್ಲಿ 18 ರನ್‌ಗೆ 4 ವಿಕೆಟ್‌ ಪಡೆದರು. ಇನ್ನುಳಿದ 2 ವಿಕೆಟ್‌ ಲೆಗ್‌ ಸ್ಪಿನ್ನರ್‌ ಪೂನಮ್‌ ಯಾದವ್‌ ಪಾಲಾಯಿತು. ನತಾಲಿ 5ನೇ ವಿಕೆಟ್‌ಗೆ 49 ರನ್‌ ಜೊತೆಯಾಟವಾಡಿದ ಲಾರಾ ವಿನ್‌ಫೀಲ್ಡ್‌ 28 ರನ್‌ಗಳ ಕೊಡುಗೆ ನೀಡಿದರು.

Follow Us:
Download App:
  • android
  • ios