ವಿಂಬಲ್ಡನ್‌ನಲ್ಲಿನ್ನು ಲೈನ್ ಜಡ್ಜ್ ಬದಲು ಎಐ ಬಳಸಲು ನಿರ್ಧಾರ!
ಪ್ರತಿಷ್ಠಿತ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಟೂರ್ನಿಯಲ್ಲಿ 2025ರಿಂದ ಲೈನ್ ಜಡ್ಜ್‌ಗಳು ನೋಡಲು ಸಿಗುವುದಿಲ್ಲ. ಟೂರ್ನಿಯಲ್ಲಿ ಸರ್ವಿಸ್ ಫಾಲ್ಟ್, ಔಟ್ ತೀರ್ಪುಗಳನ್ನು ನೀಡಲು 2025ರಿಂದ ಕೃತಕ ಬುದ್ಧಿಮತ್ತೆ ಬಳಸಲು ತೀರ್ಮಾನಿಸಿದ್ದಾರೆ.
ಲಂಡನ್: ಇನ್ಮುಂದೆ ವಿಂಬಲ್ಡನ್ ಗ್ಯಾನ್ ಸ್ಲಾಂ ಟೆನಿಸ್ ಟೂರ್ನಿ ಯಲ್ಲಿ ಲೈನ್ ಜಡ್ಜ್‌ಗಳು ಇರುವುದಿಲ್ಲ. ವಿಂಬಲ್ಡನ್ ಆಯೋಜಕರಾದ ಆಲ್ ಇಂಗ್ಲೆಂಡ್ ಕ್ಲಬ್, ಟೂರ್ನಿಯಲ್ಲಿ ಸರ್ವಿಸ್ ಫಾಲ್ಟ್, ಔಟ್ ತೀರ್ಪುಗಳನ್ನು ನೀಡಲು 2025ರಿಂದ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಕೆ ಮಾಡಲು ನಿರ್ಧರಿಸಿದೆ.
ಈ ಬಗ್ಗೆ ಬುಧವಾರ ಮಾಹಿತಿ ನೀಡಿರುವ ಆಲ್ ಇಂಗ್ಲೆಂಡ್ ಕ್ಲಬ್‌ನ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿ ಸ್ಯಾಲಿ ಬೋಲ್ಟನ್, “ಟೂರ್ನಿ ಇಷ್ಟು ವರ್ಷ ಯಶಸ್ವಿಯಾಗಿ ನಡೆಯಲು ಲೈನ್ ಜಡ್ಜ್‌ಗಳ ಕೊಡುಗೆ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಆದರೆ ಕಾಲ ಬದಲಾದಂತೆ ತಂತ್ರಜ್ಞಾನದ ಬಳಕೆಯೂ ಮುಖ್ಯವಾಗಲಿದೆ. ಮತ್ತಷ್ಟು ಪಾರದರ್ಶಕ ಆಟಕ್ಕೆ ಎಐನಿಂದ ಅನುಕೂಲವಾಗಲಿದೆ. ಹಲವು ವರ್ಷಗಳಿಂದ ಇರುವ ಬಾಲ್ ಟ್ರ್ಯಾಕಿಂಗ್ ವ್ಯವಸ್ಥೆಯೂ ಮುಂದುವರಿಯಲಿದೆ, ಕಳೆದ ವರ್ಷ ಟೂರ್ನಿಯಲ್ಲಿ ಎಐ ಅನ್ನು ಪ್ರಾಯೋಗಿಕವಾಗಿ ಬಳಕೆ ಮಾಡಿದ್ದೆವು. ಅದರಿಂದ ಸಿಕ್ಕ ಫಲಿತಾಂಶವನ್ನು ಪರಿಗಣಿಸಿ ಮುಂದಿನ ವರ್ಷದಿಂದ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲು ನಿರ್ಧರಿಸಲಾಗಿದೆ' ಎಂದು ತಿಳಿಸಿದರು.
ದೀಪಾ ನಿವೃತ್ತಿಗೆ ಕೇಂದ್ರ ಕ್ರೀಡಾ ಸಚಿವ ಅಚ್ಚರಿ
ನವದೆಹಲಿ: ಭಾರತದ ಅಗ್ರ ಜಿಮ್ನಾಸ್ಟಿಕ್ಸ್ ಪಟು ದೀಪಾ ಕರ್ಮಕರ್ ಕ್ರೀಡೆಗೆ ದಿಢೀರ್ ನಿವೃತ್ತಿ ಘೋಷಿಸಿದ್ದಕ್ಕೆ ಕೇಂದ್ರ ಕ್ರೀಡಾ ಸಚಿವ ಮನ್‌ಸುಖ್ ಮಾಂಡವೀಯ ಅಚ್ಚರಿ ವ್ಯಕ್ತಪಡಿಸಿದ್ದಾರೆ. 31 ವರ್ಷದ ದೀಪಾ, 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ 4ನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದರು.
ಅಲ್ಲದೇ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಜಿಮ್ನಾಸ್ಟಿಕ್ಸ್ ಪಟು ಎನ್ನುವ ಹಿರಿಮೆಗೂ ಪಾತ್ರರಾಗಿದ್ದರು. ದೀಪಾರನ್ನು ಅಭಿನಂದಿಸಿ ಪತ್ರವನ್ನು ಬರೆದಿರುವ ಮಾಂಡವೀಯ, ‘ನೀವು ನಿವೃತ್ತಿ ಘೋಷಿಸಿದ ವಿಷಯ ತಿಳಿದು ಆಶ್ಚರ್ಯವಾಗಿದೆ. ಬಹಳ ಯೋಚಿಸಿ ಈ ನಿರ್ಧಾರಕ್ಕೆ ಬಂದೀದ್ದೀರಾ ಎನ್ನುವ ವಿಶ್ವಾಸ ನನಗಿದೆ. ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ’ ಎಂದು ತಿಳಿಸಿದ್ದಾರೆ.
ರಿಂಕು-ನಿತೀಶ್ ಅಬ್ಬರಕ್ಕೆ ಬಾಂಗ್ಲಾದೇಶ ತಬ್ಬಿಬ್ಬು; ತವರಿನಲ್ಲಿ ಸತತ 7ನೇ ಟಿ20 ಸರಣಿ ಗೆದ್ದ ಭಾರತ
ಆರ್ಕ್‌ಟಿಕ್ ಓಪನ್: ಪ್ರಿ ಕ್ವಾರ್ಟರ್‌ಗೆ ಲಕ್ಷ್ಯ
ವಂಟಾ (ಫಿನ್‌ಲ್ಯಾಂಡ್): ಭಾರತದ ಯುವ ಶಟ್ಲರ್ ಲಕ್ಷ್ಯ ಸೇನ್ ಇಲ್ಲಿ ನಡಯುತ್ತಿರುವ ಆರ್ಕ್‌ಟಿಕ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಮೊದಲ ಸುತ್ತಿನಲ್ಲಿ ಲಕ್ಷ್ಯರ ಎದುರಾಳಿ ಡೆನ್ಮಾರ್ಕ್‌ನ ರಾಸ್ಮಸ್ ಗೆಮ್ಕೆ ನಿವೃತ್ತಿ ಪಡೆದರು. ಇದೇ ವೇಳೆ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಯುವ ಆಟಗಾರ್ತಿ ಮಾಳ್ವಿಕಾ ಬನ್ಸೋದ್, ವಿಶ್ವ ನಂ.23 ಚೈನೀಸ್ ತೈಪೆಯ ಸುಂಗ್ ಯುನ್ ವಿರುದ್ಧ ಜಯಿಸಿ ಪ್ರಿ ಕ್ವಾರ್ಟರ್ ಫೈನಲ್‌ಗೇರಿದರು.