Asianet Suvarna News Asianet Suvarna News

Wimbledon 2022 ನೋವಾಕ್ ಜೋಕೋವಿಚ್‌ಗೆ 7ನೇ ವಿಂಬಲ್ಡನ್ ಗೆಲ್ಲುವ ತವಕ

* ವಿಂಬಲ್ಡನ್ ಫೈನಲ್‌ನಲ್ಲಿಂದು ನೋವಾಕ್ ಜೋಕೋವಿಚ್-ನಿಕ್‌ ಕಿರಿಯೋಸ್‌ ಫೈಟ್
* 7ನೇ ವಿಂಬಲ್ಡನ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ಜೋಕೋ
* ವೃತ್ತಿಬದುಕಿನ 21ನೇ ಗ್ರ್ಯಾನ್‌ ಸ್ಲಾಂ ಗೆಲ್ಲುವ ತವಕದಲ್ಲಿ ಜೋಕೋವಿಚ್

Wimbledon 2022 Novak Djokovic eyes on 7th Wimbledon title kvn
Author
Bengaluru, First Published Jul 10, 2022, 10:05 AM IST

ಲಂಡನ್‌(ಜು.10): ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಆದ ಅವಮಾನ, ಫ್ರೆಂಚ್‌ ಓಪನ್‌ ಕ್ವಾರ್ಟರ್‌ನಲ್ಲಿ ಎದುರಾದ ಸೋಲು ನೋವಾಕ್‌ ಜೋಕೋವಿಚ್‌ರನ್ನು ಗ್ರ್ಯಾನ್‌ ಸ್ಲಾಂ ಗೆಲುವಿನಿಂದ ದೂರವಿರಿಸಿತ್ತು. ಇದೀಗ ಪ್ರಶಸ್ತಿ ಜಯಿಸುವ ಅವಕಾಶ ಮತ್ತೆ ಒದಗಿ ಬಂದಿದ್ದು, ಭಾನುವಾರ ನಡೆಯಲಿರುವ ವಿಂಬಲ್ಡನ್‌ನ ಫೈನಲ್‌ನಲ್ಲಿ ಜೋಕೋವಿಚ್‌ ಆಸ್ಪ್ರೇಲಿಯಾದ ನಿಕ್‌ ಕಿರಿಯೋಸ್‌ರನ್ನು ಸೋಲಿಸಿ ವೃತ್ತಿಬದುಕಿನ 21ನೇ ಗ್ರ್ಯಾನ್‌ ಸ್ಲಾಂ ಗೆಲ್ಲುವ ತವಕದಲ್ಲಿದ್ದಾರೆ. ವಿವಾದಿತ ಟೆನಿಸಿಗ ಕಿರಿಯೋಸ್‌ ಸೆಮಿಫೈನಲ್‌ನಲ್ಲಿ ನಡಾಲ್‌ ವಿರುದ್ಧ ಸೆಣಸಬೇಕಿತ್ತು. ಆದರೆ ನಡಾಲ ಗಾಯಗೊಂಡು ಹಿಂದೆ ಸರಿದ ಕಾರಣ ಕಿರಿಯೋಸ್‌ ಚೊಚ್ಚಲ ಬಾರಿಗೆ ಗ್ರ್ಯಾನ್‌ ಸ್ಲಾಂ ಫೈನಲ್‌ಗೇರಿದ್ದಾರೆ.

ಈ ಹಿಂದೆ 7 ಫೈನಲ್‌ನಲ್ಲಿ 6ರಲ್ಲಿ ಗೆದ್ದಿರುವ ನೋವಾಕ್ ಜೋಕೋವಿಚ್ (Novak Djokovic), 7ನೇ ಬಾರಿಗೆ ವಿಂಬಲ್ಡನ್‌ (Wimbledon) ಗೆದ್ದು ಪೀಟ್‌ ಸ್ಯಾಂಪ್ರಸ್‌ರ (07 ವಿಂಬಲ್ಡನ್‌ ಜಯ) ದಾಖಲೆ ಸರಿಗಟ್ಟುವ ತವಕದಲ್ಲಿದ್ದಾರೆ. ರೋಜರ್‌ ಫೆಡರರ್‌ (08) ಅತಿಹೆಚ್ಚು ಬಾರಿ ವಿಂಬಲ್ಡನ್‌ ಗೆದ್ದ ದಾಖಲೆ ಹೊಂದಿದ್ದಾರೆ. ಅಲ್ಲದೇ ಜೋಕೋ ಸತತ 4ನೇ ಬಾರಿಗೆ ವಿಂಬಲ್ಡನ್‌ ಚಾಂಪಿಯನ್‌ ಆಗುವ ಗುರಿ ಹೊಂದಿದ್ದಾರೆ.

ಇನ್ನು ಕಿರಿಯೋಸ್‌ ಸಹ ಉತ್ತಮ ಲಯದಲ್ಲಿದ್ದು, ಟೂರ್ನಿಯಲ್ಲಿ ಆಕರ್ಷಕ ಪ್ರದರ್ಶನ ತೋರಿದ್ದಾರೆ. ಜೋಕೋವಿಚ್‌ ವಿರುದ್ಧ ಈ ಹಿಂದೆ 2017ರಲ್ಲಿ 2 ಬಾರಿ ಮುಖಾಮುಖಿಯಾಗಿದ್ದು ಎರಡರಲ್ಲೂ ಕಿರಿಯೋಸ್‌ ಜಯಿಸಿದ್ದರು. ಆದರೆ ಆ ಪಂದ್ಯಗಳು ಬೆಸ್ಟ್‌ ಆಫ್‌ ಮೂರು ಸೆಟ್‌ಗಳ ಪಂದ್ಯಗಳಾಗಿದ್ದವು. ಐದು ಸೆಟ್‌ಗಳ ಪಂದ್ಯದಲ್ಲಿ ಜೋಕೋ ವಿರುದ್ಧ ಗೆಲ್ಲಬೇಕಿದ್ದರೆ ಕಿರಿಯೋಸ್‌ ಅಸಾಧಾರಣ ಪ್ರದರ್ಶನ ತೋರಬೇಕಿದೆ.

ಪಂದ್ಯ: ಸಂಜೆ 6.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಹಾಕಿ ವಿಶ್ವಕಪ್‌: ಭಾರತಕ್ಕೆ ಇಂದು ಸ್ಪೇನ್‌ ಸವಾಲು

ಟೆರ್ರಸ್ಸಾ: ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ನಾಕೌಟ್‌ ಹಂತಕ್ಕೆ ಪ್ರವೇಶಿಸುವ ಗುರಿ ಹೊಂದಿರುವ ಭಾರತ, ಭಾನುವಾರ ನಡೆಯಲಿರುವ ಕ್ರಾಸ್‌ ಓವರ್‌ ಪಂದ್ಯದಲ್ಲಿ ಆತಿಥೇಯ ಸ್ಪೇನ್‌ ವಿರುದ್ಧ ಸೆಣಸಲಿದೆ. ಗುಂಪು ಹಂತದಲ್ಲಿ 2 ಡ್ರಾ, ಒಂದು ಸೋಲು ಕಂಡು 3ನೇ ಸ್ಥಾನ ಪಡೆದ ಭಾರತ, ಕ್ವಾರ್ಟರ್‌ ಫೈನಲ್‌ಗೇರಲು ಸ್ಪೇನ್‌ ವಿರುದ್ಧ ಜಯ ಸಾಧಿಸಬೇಕಿದೆ. 

Wimbledon 2022 ಎಲೈನಾ ರಬೈಕೆನಾ ವಿಂಬಲ್ಡನ್‌ ಮಹಿಳಾ ಸಿಂಗಲ್ಸ್‌ ಚಾಂಪಿಯನ್‌..!

ಇಂಗ್ಲೆಂಡ್‌ ಹಾಗೂ ಚೀನಾ ವಿರುದ್ಧ ಡ್ರಾಗೆ ತೃಪ್ತಿಪಟ್ಟಿದ್ದ ಭಾರತ, ನ್ಯೂಜಿಲೆಂಡ್‌ ವಿರುದ್ಧ ಸೋಲು ಕಂಡಿತ್ತು. ಮೂರೂ ಪಂದ್ಯಗಳಿಂದ 30ಕ್ಕೂ ಹೆಚ್ಚು ಪೆನಾಲ್ಟಿಕಾರ್ನರ್‌ ಅವಕಾಶಗಳು ದೊರೆತರೂ ಭಾರತ ಕೇವಲ 3 ಗೋಲು ಗಳಿಸಿ ನಿರಾಸೆ ಮೂಡಿಸಿದೆ. ಬಲಿಷ್ಠ ಸ್ಪೇನ್‌ ವಿರುದ್ಧ ಗೆಲ್ಲಬೇಕಿದ್ದರೆ ಭಾರತ ಸುಧಾರಿತ ಪ್ರದರ್ಶನ ತೋರಬೇಕಿದೆ. ಗೆದ್ದರೆ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತಕ್ಕೆ ಆಸ್ಪ್ರೇಲಿಯಾ ಎದುರಾಗಲಿದೆ.

ಪಂದ್ಯ: ತಡರಾತ್ರಿ 1ಕ್ಕೆ 

ನಾಡಿದ್ದಿಂದ ಏಷ್ಯಾಕಪ್‌ ಬಾಸ್ಕೆಟ್‌ಬಾಲ್‌ ಟೂರ್ನಿ

ಬೆಂಗಳೂರು: 2022ರ ಏಷ್ಯಾಕಪ್‌ ಬಾಸ್ಕೆಟ್‌ಬಾಲ್‌ ಟೂರ್ನಿ ಜುಲೈ 12ರಿಂದ 24ರ ವರೆಗೂ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯಲಿದ್ದು ಭಾರತ ತಂಡ ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. 12 ಸದಸ್ಯರ ಭಾರತ ತಂಡಕ್ಕೆ ಹಿರಿಯ ಆಟಗಾರ ವಿಶೇಷ್‌ ಭೃಗುವಂಶಿ ನಾಯಕರಾಗಿದ್ದು, ಕರ್ನಾಟಕದ ಪ್ರತ್ಯಾನ್ಶು ಸ್ಥಾನ ಪಡೆದಿದ್ದಾರೆ. ಭಾರತ ತನ್ನ ಮೊದಲ ಪಂದ್ಯವನ್ನು ಜು.13ರಂದು ನ್ಯೂಜಿಲೆಂಡ್‌ ವಿರುದ್ಧ ಆಡಲಿದೆ. ಜು.15ಕ್ಕೆ ಫಿಲಿಪ್ಪೀನ್ಸ್‌, ಜು.17ಕ್ಕೆ ಲೆಬನಾನ್‌ ವಿರುದ್ಧ ಭಾರತ ಸೆಣಸಲಿದೆ.

Follow Us:
Download App:
  • android
  • ios