ಕೋಲ್ಕತಾ[ಏ.29]: ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮದ್ ಶಮಿ, ತಮ್ಮ ನಿಜವಾದ ವಯಸ್ಸನ್ನು ಮುಚ್ಚಿಟ್ಟು ಬಿಸಿಸಿಐಗೆ ನಕಲಿ ಜನನ ಪ್ರಮಾಣಪತ್ರ ಸಲ್ಲಿಸಿದ್ದರೆ ಎನ್ನುವ ಅನುಮಾನ ಶುರುವಾಗಿದೆ. 
ಇದಕ್ಕೆ ಕಾರಣ ಶಮಿ ಪತ್ನಿ ಹಸೀನ್ ಜಹಾನ್ ಫೇಸ್‌'ಬುಕ್‌'ನಲ್ಲಿ ಮಾಡಿದ್ದ ಪೋಸ್ಟ್. ಶಮಿ ಅವರದು ಎನ್ನಲಾದ ಡ್ರೈವಿಂಗ್ ಲೈಸನ್ಸ್‌'ನ ಫೋಟೋವನ್ನು ತೆಗೆದು ಪೋಸ್ಟ್ ಮಾಡಿದ್ದ ಜಹಾನ್, ಇದರ ಪ್ರಕಾರ ಶಮಿ ಜನಿಸಿದ್ದು 1982ರಲ್ಲಿ. ಆದರೆ, ಬಿಸಿಸಿಐ ವೆಬ್‌'ಸೈಟ್‌'ನಲ್ಲಿ 1990 ಎಂದಿದೆ. 
ಸುಳ್ಳು ಜನನ ಪತ್ರ ನೀಡಿ ಬಿಸಿಸಿಐಗೆ ವಂಚಿಸಿ, ಅಂಡರ್-22 ತಂಡದಲ್ಲಿ ಶಮಿ ಆಡಿದ್ದಾರೆ ಎಂದು ಜಹಾನ್ ಆಪಾದಿಸಿದ್ದಾರೆ. ಆದರೆ, ಸ್ವಲ್ಪ ಸಮಯದ ಬಳಿಕ ಜಹಾನ್ ತಮ್ಮ ಪೋಸ್ಟ್ ಅನ್ನು ಅಳಿಸಿ ಹಾಕಿದ್ದಾರೆ