ಅಚಿಲೆಸ್ ಬೆಕ್ಕು ಹೇಳಲಿದೆ ಫಿಫಾ ವಿಶ್ವಕಪ್ ಪಂದ್ಯದ ಸೋಲು-ಗೆಲುವಿನ ಭವಿಷ್ಯ

The deaf cat Achilles predicting this year's World Cup results
Highlights

ಫಿಫಾ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಪಂದ್ಯ ಸೋಲು ಗೆಲುವಿನ ಕುರಿತು ಭವಿಷ್ಯ ಹೇಳಲು ಅಚಿಲೆಸ್ ಬೆಕ್ಕು ಸಜ್ಜಾಗಿದೆ. 2010ರಲ್ಲಿ ಪೌಲ್ ಅಕ್ಟೋಪಸ್ ಮಾಡಿದ ಮೋಡಿ ಇದೀಗ ಅಚಿಲೆಸ್ ಬೆಕ್ಕು ಮಾಡಲು ಮುಂದಾಗಿದೆ. ಬೆಕ್ಕಿನ ಭವಿಷ್ಯ ಇಲ್ಲಿದೆ.

ಸೈಂಟ್ ಪೀಟರ್ಸ್‌ಬರ್ಗ್(ಜೂನ್.9): ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ಪಂದ್ಯದಲ್ಲಿ ಸೋಲು-ಗೆಲುವು ಲೆಕ್ಕಾಚಾರ ಹಾಕಲು ಇದೀಗ ಅಚಿಲೆಸ್ ಬೆಕ್ಕು ರೆಡಿಯಾಗಿದೆ. 2010ರಲ್ಲಿ ಪೌಲ್ ಅಕ್ಟೋಪಸ್ ಫಿಫಾ ಪಂದ್ಯದ ಭವಿಷ್ಯ ಹೇಳೋ ಮೂಲಕ ಭಾರಿ ಜನಪ್ರೀಯವಾಗಿತ್ತು. ಆದರೆ ಈ ಬಾರಿ ಅಚಿಲೆ ಬೆಕ್ಕು ಸೋಲು-ಗೆಲುವಿನ ಭವಿಷ್ಯ ನುಡಯಲಿದೆ.

ಈ ಬಾರಿಯ ವಿಶೇಷತೆ ಅಂದರೆ ಅಚಿಲೆಸ್ ಬೆಕ್ಕಿಗೆ ಕಿವಿ ಕೇಳಿಸಲ್ಲ. ಪಂದ್ಯಕ್ಕೂ ಮೊದಲು ತಂಡಗಳ ಧ್ವಜವಿರೋ ಪಾತ್ರೆಗಳನ್ನ ಇಡಲಾಗುತ್ತೆ. ಬೆಕ್ಕು ಯಾವುದನ್ನ ಮೊದಲು ಮುಟ್ಟುತ್ತೋ ಆ ತಂಡ ಗೆಲ್ಲಲಿದೆ ಎಂದು ಬೆಕ್ಕಿಗೆ ತರಬೇತಿ ನೀಡಿರುವ ಹರ್ಮಿಟೇಜ್ ಮ್ಯೂಸಿಯಂನ ಅನಾ ಕಸಾಕ್ತಿನ ಹೇಳಿದ್ದಾರೆ.

2010ರ ಫಿಫಾ ಪಂದ್ಯದ ವೇಳೆ ಪೌಲ್ ಅಕ್ಟೋಪಸ್ ಭವಿಷ್ಯ ಬಹುತೇಕ ನಿಜವಾಗಿತ್ತು. ಹೀಗಾಗಿ ಪೌಲ್ ಭವಿಷ್ಯ ವಿಶ್ವದಲ್ಲೇ ಮನೆಮಾತಾಗಿತ್ತು. ಈ ಬಾರಿ ಅಚಿಲೆಸ್ ಭವಿಷ್ಯ ನಿಜವಾಗುತ್ತಾ ಅನ್ನೋ ಕುತೂಹಲ ಈಗ ಫಿಫಾ ಅಭಿಮಾನಿಗಳಲ್ಲಿ ಮನೆ ಮಾಡಿದೆ. 

 

loader