ಭಾರತೀಯ ಕುಸ್ತಿ ಫೆಡರೇಷನ್ ಆಡಳಿತ ನಿರ್ವಹಿಸಲು ಅಡ್‌ಹಾಕ್ ಸಮಿತಿಯು ಮರುಸ್ಥಾಪನೆ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶ ನೀಡಿದೆ. ಇದನ್ನು ಪ್ರಶ್ನಿಸಲು WFI ಮುಂದಾಗಿದೆ

ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ನ ಆಡಳಿತ ನಿರ್ವಹಿಸಲು ಅಡ್‌ಹಾಕ್ ಸಮಿತಿಯು ಮರುಸ್ಥಾಪನೆ ಮಾಡುವಂತೆ ಭಾರತೀಯ ಒಲಿಂಪಿಕ್ ಸಂಸ್ಥೆಗೆ ದೆಹಲಿ ಹೈಕೋರ್ಟ್ ಶುಕ್ರವಾರ ಮಧ್ಯಂತರ ಆದೇಶ ನೀಡಿದೆ. ಇದು ಡಬ್ಲ್ಯುಎಫ್‌ಐ ಅನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

ಐಒಎ ಅಡ್‌ಹಾಕ್ ಸಮಿತಿಯನ್ನು ಮರುಸ್ಥಾಪನೆ ಮಾಡಬೇಕು ಎಂದು ಒಲಿಂಪಿಯನ್ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಫೂನಿಯಾ, ಅವರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಮಹತ್ವದ ಆದೇಶ ನೀಡಿದೆ. ಇದರ ಬೆನ್ನಲ್ಲೇ ಡಬ್ಲ್ಯುಎಫ್‌ಐ ಅಧ್ಯಕ್ಷ ಸಂಜಯ್‌ ಸಿಂಗ್‌ ತಾವು ವಿಶ್ವ ಕುಸ್ತಿ, ಐಒಸಿ ನೆರವು ಕೇಳುತ್ತೇವೆ ಎಂದು ಹೇಳಿದ್ದಾರೆ.

ಡಬ್ಲ್ಯುಎಫ್‌ಐನ ಅಧಿಕಾರ ಮೊಟಕುಗೊಳಿಸಿರುವುದನ್ನು ಒಕ್ಕೂಟದ ಅಧ್ಯಕ್ಷ ಸಂಜಯ್‌ ಸಿಂಗ್‌ ಖಂಡಿಸಿದ್ದು, ಇದರ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ ಎಂದಿದ್ದಾರೆ. ಅಲ್ಲದೆ, ಜಾಗತಿಕ ಕುಸ್ತಿ ಫೆಡರೇಷನ್‌(ಯುಡಬ್ಲ್ಯುಡಬ್ಲ್ಯು) ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಂಸ್ಥೆ(ಐಒಸಿ) ನೆರವನ್ನೂ ಕೇಳುತ್ತೇವೆ ಎಂದಿದ್ದಾರೆ. 

ಏನ್ ದುರಂತ ಇದು..! ಪಾಕ್‌ನ 2 ಕ್ರೀಡಾಂಗಣದಲ್ಲಿ ಬಾಡಿಗೆ ಫ್ಲಡ್‌ಲೈಟ್‌ಗಳನ್ನು ಅಳವಡಿಸಲಿರುವ ಪಿಸಿಬಿ!

‘ನಾವು ಇದರ ವಿರುದ್ಧ ಜಂಟಿ ಸಮಿತಿಗೆ ಮೇಲ್ಮನವಿ ಸಲ್ಲಿಸುತ್ತೇವೆ. ಜಾಗತಿಕ ಕುಸ್ತಿ, ಐಒಸಿಗೂ ಮನವಿ ಮಾಡುತ್ತೇವೆ. ಹೊರಗಿನ ಹಸ್ತಕ್ಷೇಪ ಕ್ರೀಡಾಪಟುಗಳ ಮೇಲೆ ಪರಿಣಾಮ ಬೀರಬಹುದು ಎಂದು ಯುಡಬ್ಲ್ಯುಡಬ್ಲ್ಯು, ಐಒಸಿ ಮೊದಲೇ ಎಚ್ಚರಿಕೆ ನೀಡಿತ್ತು. ಈಗ 2 ವಿಶ್ವ ಚಾಂಪಿಯನ್‌ಶಿಪ್‌ ಶುರುವಾಗಲಿದೆ. ಆದರೆ ಹೈಕೋರ್ಟ್‌ ಆದೇಶದಿಂದಾಗಿ ನಮ್ಮ ಕುಸ್ತಿಪಟುಗಳ ಮೇಲೆ ಪರಿಣಾಮ ಬೀರಲಿದೆ’ ಎಂದು ಸಂಜಯ್‌ ಸಿಂಗ್‌ ಹೇಳಿದ್ದಾರೆ.

ಭಾರತೀಯರ ಸ್ಪರ್ಧೆ ಮೇಲೆ ಪರಿಣಾಮ ಬೀರುವ ಆತಂಕ

ಡಬ್ಲ್ಯುಎಫ್‌ಐ ಮೇಲಿನ ನಿಯಂತ್ರವಣವನ್ನು ಸ್ವತಂತ್ರ ಸಮಿತಿಗೆ ನೀಡಿರುವುದರಿಂದ, ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತದ ಸ್ಪರ್ಧೆ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ. ಆ.19ರಿಂದ 25ರ ವರೆಗೆ ಜೊರ್ಡನ್‌ನಲ್ಲಿ ಅಂಡರ್‌-17 ವಿಶ್ವ ಚಾಂಪಿಯನ್‌ಶಿಪ್‌ ಹಾಗೂ ಸೆ.2ರಿಂದ 8ರ ವರೆಗೆ ಸ್ಪೇನ್‌ನಲ್ಲಿ ಅಂಡರ್‌-20 ವಿಶ್ವ ಚಾಂಪಿಯನ್‌ಶಿಪ್‌ ನಿಗದಿಯಾಗಿದೆ. 

ವಿನೇಶ್‌ ಫೋಗಟ್ ಸತ್ತೇ ಹೋಗ್ತಾರೆ ಎಂದು ಆತಂಕಗೊಂಡಿದ್ದೆ: ಕೋಚ್‌ ವೋಲರ್‌ ಅಕೋಸ್‌

ಆದರೆ ಡಬ್ಲ್ಯುಎಫ್‌ಐ ಮೇಲೆ ಸ್ವತಂತ್ರ ಸಮಿತಿ ನಿಯಂತ್ರಣ ಸಾಧಿಸಿದರೆ, ಅದನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಜಾಗತಿಕ ಕುಸ್ತಿ ಸಂಸ್ಥೆ ಈ ಮೊದಲೇ ಸ್ಪಷ್ಟವಾಗಿ ಹೇಳಿತ್ತು. ಹೀಗಾಗಿ, ಹೊಸದಾಗಿ ನೇಮಕಗೊಂಡಿರುವ ಸ್ವತಂತ್ರ ಸಮಿತಿಯು ವಿಶ್ವ ಚಾಂಪಿಯನ್‌ಶಿಪ್‌ಗೆ ಭಾರತದ ಕುಸ್ತಿಪಟುಗಳನ್ನು ಆಯ್ಕೆ ಮಾಡಿದರೂ, ಅದನ್ನು ಜಾಗತಿಕ ಕುಸ್ತಿ ಸಂಸ್ಥೆ ತಡೆಹಿಡಿಯುವ ಸಾಧ್ಯತೆಯಿದೆ.