ವಿನೇಶ್‌ ಫೋಗಟ್ ಸತ್ತೇ ಹೋಗ್ತಾರೆ ಎಂದು ಆತಂಕಗೊಂಡಿದ್ದೆ: ಕೋಚ್‌ ವೋಲರ್‌ ಅಕೋಸ್‌

ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ತೂಕ ಇಳಿಸಿಕೊಳ್ಳಲು ಮಾಡಿದ ಪ್ರಯತ್ನದ ಬಗ್ಗೆ ಅವರ ಕೋಚ್ ತುಟಿಬಿಚ್ಚಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Vinesh Phogat coach shocking revelation on weight cut grind before gold medal clash in Paris Olympics 2024 kvn

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಅನರ್ಹತೆ ತಪ್ಪಿಸಲು ತೂಕ ಇಳಿಸುವ ಪ್ರಯತ್ನದಲ್ಲಿದ್ದಾಗ ವಿನೇಶ್‌ ಫೋಗಟ್‌ ಸತ್ತೇ ಹೋಗುತ್ತಾರೆ ಎಂದು ಆತಂಕಗೊಂಡಿದ್ದೆ ಎಂದು ವಿನೇಶ್‌ರ ಕೋಚ್‌ ವೋಲರ್‌ ಅಕೋಸ್‌ ಶುಕ್ರವಾರ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಬಳಿಕ ಅವರು ಪೋಸ್ಟ್‌ ಅಳಿಸಿ ಹಾಕಿದ್ದಾರೆ.

ತೂಕ ಇಳಿಸುವ ಪ್ರಕ್ರಿಯೆ ವೇಳೆ ನಡೆದ ಘಟನೆಗಳನ್ನು ವಿವರಿಸಿರುವ ಅವರು, ‘ವಿನೇಶ್‌ ಮಧ್ಯರಾತ್ರಿಯಿಂದ ಬೆಳಗ್ಗೆ 5.30ರ ವರೆಗೂ ಕಠಿಣ ಪರಿಶ್ರಮ ಪಟ್ಟಿದ್ದಾರೆ. ಬಿಡುವಿಲ್ಲದೆ ಜಿಮ್‌, ಸ್ಕಿಪ್ಪಿಂಗ್‌, ಜಾಗಿಂಗ್‌, ಹಬೆಯಲ್ಲಿ ಕೂರುವ ಮೂಲಕ ತೂಕ ಇಳಿಸಲು ಪ್ರಯತ್ನಿಸಿದ್ದಾರೆ. ಇದರಿಂದ ವಿನೇಶ್‌ ಕುಸಿದು ಬಿದ್ದಿದ್ದರು. ಆದರೆ ಹೇಗಾದರೂ ಮಾಡಿ ಅವಳನ್ನು ಎಬ್ಬಿಸಿದೆವು. ಈ ಹಂತದಲ್ಲಿ ವಿನೇಶ್‌ ಸಾಯಬಹುದು ಎಂದು ನಾನು ಆತಂಕಕ್ಕೊಳಗಾಗಿದ್ದೆ’ ಎಂದು ಅವರು ವಿವರಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ಪ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ವಿನೇಶ್ ಫೋಗಟ್ ಫೈನಲ್ ಪ್ರವೇಶಿಸಿದ್ದರು. ಆದರೆ ಫೈನಲ್‌ ಪಂದ್ಯಕ್ಕೂ ಮುನ್ನ 100 ಗ್ರಾಮ್ ಹೆಚ್ಚಿಗೆ ತೂಕ ಹೊಂದಿದ್ದರಿಂದ ಫೋಗಟ್ ಅನರ್ಹರಾಗಿದ್ದರು.

ಒಲಿಂಪಿಕ್ ಚಿನ್ನ ಗೆದ್ದ ಅಳಿಯನಿಗೆ ಮಾವನ ಎಮ್ಮೆ ಗಿಫ್ಟ್! ಇದರ ಬದಲು ಅದನ್ನಾದರೂ ಕೊಟ್ಟಿದ್ದಿದ್ರೆ ಎಂದ ಅರ್ಶದ್ ನದೀಂ!

ನಿವೃತ್ತಿ ನಿರ್ಧಾರದಿಂದ ವಿನೇಶ್ ಯೂಟರ್ನ್‌: ನನ್ನಲ್ಲಿನ ಹೋರಾಟ, ಕುಸ್ತಿ ಇನ್ನೂ ಮುಗಿದಿಲ್ಲ ಎಂದ ತಾರಾ ರೆಸ್ಲರ್‌

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ಬಳಿಕ ನಿವೃತ್ತಿ ಘೋಷಿಸಿದ್ದ ಭಾರತದ ತಾರಾ ಕುಸ್ತಿಪಟು ವಿನೇಶ್‌ ಫೋಗಟ್‌, ತಮ್ಮ ನಿರ್ಧಾರಿಂದ ಹಿಂದೆ ಸರಿಯುವ ಸುಳಿವು ನೀಡಿದ್ದಾರೆ.

ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಸುದೀರ್ಘ ಪೋಸ್ಟ್‌ ಹಂಚಿಕೊಂಡಿದ್ದಾರೆ. ‘ನಾನು ಸಾಧನೆಯ ಗುರಿಯನ್ನು ಇನ್ನೂ ತಲುಪಿಲ್ಲ. ಬಹುಶಃ ಬೇರೆ ಬೇರೆ ಸನ್ನಿವೇಶಗಳಿಗೆ ಅನುಗುಣವಾಗಿ, ನಾನು 2032ರ ವರೆಗೂ ಆಡುವುದನ್ನು ನೋಡಬಹುದು. ನನ್ನಲ್ಲಿನ ಹೋರಾಟ ಮತ್ತು ಕುಸ್ತಿ ಮುಗಿದಿಲ್ಲ. ಭವಿಷ್ಯದಲ್ಲಿ ಏನಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಆದರೆ ನಾನು ನಂಬಿದ ವಿಷಯದಲ್ಲಿ ಯಾವತ್ತೂ ಹೋರಾಡುತ್ತೇನೆ’ ಎಂದು 29 ವರ್ಷದ ವಿನೇಶ್‌ ತಿಳಿಸಿದ್ದಾರೆ.

ಪ್ರೊ ಕಬಡ್ಡಿ ಹರಾಜು: ಸಚಿನ್‌ಗೆ ₹2.15 ಕೋಟಿ ಜಾಕ್‌ಪಾಟ್, ಬೆಂಗಳೂರಿಗೆ ಬಂದ ಹಳೆ ಹುಲಿ..!

ಇದೇ ವೇಳೆ, ತಮ್ಮ ಒಲಿಂಪಿಕ್ಸ್‌ ಪಯಣದಲ್ಲಿ ಜೊತೆಗಿದ್ದ ವೈದ್ಯ ದಿನ್‌ಶಾ ಪರ್ದಿವಾಲಾ, ಸಹಾಯಕ ಸಿಬ್ಬಂದಿ, ಕುಟುಂಬಸ್ಥರಿಗೆ ವಿನೇಶ್‌ ಧನ್ಯವಾದ ತಿಳಿಸಿದ್ದಾರೆ.

ಡೇವಿಸ್‌ ಕಪ್‌ಗೆ ನಗಾಲ್‌: ಯೂಕಿ ಭಾಂಬ್ರಿ ಅಲಭ್ಯ

ನವದೆಹಲಿ: ಸೆ.14-15ಕ್ಕೆ ಸ್ವೀಡನ್‌ ವಿರುದ್ಧ ನಡೆಯಲಿರುವ ಡೇವಿಸ್‌ ಕಪ್‌ ವಿಶ್ವ ಗುಂಪು 1ರ ಪಂದ್ಯಕ್ಕೆ ಭಾರತ ತಂಡ ಪ್ರಕಟಗೊಂಡಿದೆ. ಸುಮಿತ್‌ ನಗಾಲ್‌, ರಾಮ್‌ಕುಮಾರ್‌, ಶ್ರೀರಾಮ್‌ ಬಾಲಾಜಿ, ನಿಕಿ ಪೂನಚ್ಚ, ಸಿದ್ಧಾರ್ಥ್‌ ವಿಶ್ವಕರ್ಮ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಯೂಕಿ ಭಾಂಬ್ರಿ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಆರ್ಯನ್‌ ಶಾ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದು, ಅಶುತೋಶ್‌ ಸಿಂಗ್‌ ನೂತನ ಕೋಚ್‌ ಆಗಿ ನೇಮಕಗೊಂಡಿದ್ದಾರೆ.
 

Latest Videos
Follow Us:
Download App:
  • android
  • ios