ಜಮೈಕಾ(ಸೆ.09): ವಿಶ್ವಕಪ್ ಟೂರ್ನಿ ಬಳಿಕ ಭಾರತ ವಿರುದ್ದದ ಸರಣಿಯಲ್ಲಿ ಹೀನಾಯ ಸೋಲು ತಂಡ ವೆಸ್ಟ್ ಇಂಡೀಸ್ ತಂಡ ಸಂಕಷ್ಟದಲ್ಲಿದೆ. ಇದೀಗ ತಂಡಕ್ಕೇ ಮೇಜರ್ ಸರ್ಜರಿ ಮಾಡಲು ವಿಂಡೀಸ್ ಕ್ರಿಕೆಟ್ ಮಂಡಳಿ ಸಜ್ಜಾಗಿದೆ. ಇದರ ಬೆನ್ನಲ್ಲೇ ಏಕದಿನ ನಾಯಕ ಜಾಸನ್ ಹೋಲ್ಡರ್ ಹಾಗೂ ಹಾಗೂ ಟಿ20 ನಾಯಕ ಕಾರ್ಲೋಸ್ ಬ್ರಾಥ್ವೈಟ್‌ಗೆ ಕೊಕ್ ನೀಡಲು ವೆಸ್ಟ್ ಇಂಡೀಸ್ ಮುಂದಾಗಿದೆ.

ಇದನ್ನೂ ಓದಿ: ವಿಂಡೀಸ್ ಮಣಿಸಿ ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ

ಹೋಲ್ಡರ್ ಹಾಗೂ ಬ್ರಾಥ್ವೈಟ್‌ ಕಿತ್ತೆಸೆದು ಇದೀಗ ಹಿರಿಯ ಆಲ್ರೌಂಡರ್ ಕೀರನ್ ಪೊಲ್ಲಾರ್ಡ್‌ಗೆ ನಾಯಕನ ಜವಾಬ್ದಾರಿ ನೀಡಲು ಎಲ್ಲಾ ತಯಾರಿ ನಡೆದಿದೆ. ಭಾರತ ವಿರುದ್ಧ ಸರಣಿ ಮುಗಿಸಿರುವ ವೆಸ್ಟ್ ಇಂಡೀಸ್ ಶೀಘ್ರದಲ್ಲೇ ಆಫ್ಘಾನಿಸ್ತಾನ ವಿರುದ್ಧದ ಸರಣಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಗೂ ಮುನ್ನ ಅಧೀಕೃತ ಪ್ರಕಟಣೆ ಹೊರಡಿಸಲಿದೆ.

ಇದನ್ನೂ ಓದಿ: ಟಿ20 ಸರಣಿ ಬಳಿಕ, ಏಕದಿನ ಸರಣಿಯಲ್ಲೂ ಭಾರತ ಚಾಂಪಿಯನ್!

ಭಾರತ ವಿರುದ್ಧದ ಟಿ20 ಸರಣಿಯಲ್ಲಿ 0-3, ಏಕದಿನ ಸರಣಿಯಲ್ಲಿ 0-2 ಹಾಗೂ ಟೆಸ್ಟ್ ಸರಣಿಯಲ್ಲಿ 0-2 ಅಂತರದಲ್ಲಿ ಸರಣಿ ಸೋತಿತ್ತು. ಮೂರು ಮಾದರಿಯಲ್ಲಿ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿದ ವಿಂಡೀಸ್ ಇದೀಗ ಬಲಿಷ್ಠ ತಂಡ ಕಟ್ಟಲು ಸಜ್ಜಾಗಿದೆ.