ಮುಂಬೈ: ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡಕ್ಕೆ ಪ್ರಸಕ್ತ ಸಾಲಿನ ವಿಶ್ವಕಪ್ ಎತ್ತಿ ಹಿಡಿಯುವ ಎಲ್ಲಾ ಅವಕಾಶಗಳಿವೆ. ಅಲ್ಲದೆ ತಂಡ ಆ ಸಾಮರ್ಥ್ಯವನ್ನೂ ಹೊಂದಿದೆ ಎಂದು ಮಾಜಿ ನಾಯಕ ದಿಲೀಪ್ ವೆಂಗ್‌ಸರ್ಕಾರ್ ಹೇಳಿದ್ದಾರೆ.

'ಕೊಹ್ಲಿಯಲ್ಲಿನ ಪ್ರತಿಭೆ ಗುರುತಿಸಿದ್ದೇ ನಾನು'

ಸೋಮವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಅಂತಿಮ ನಾಲ್ಕರ ಘಟ್ಟವನ್ನು ಸುಲಭವಾಗಿ ಪ್ರವೇಶಿಸುವ ಅವಕಾಶಗಳು ಕೊಹ್ಲಿ ಪಡೆ ಮುಂದಿದೆ. ಆದರೆ ಫೈನಲ್ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಆದರೆ ತಂಡ ಸಾಕಷ್ಟು ಸಮತೋಲನದಿಂದ ಕೂಡಿದ್ದು, ಫೈನಲ್‌ನಲ್ಲಿಯೂ ಗೆದ್ದು ಟ್ರೋಫಿ ಎತ್ತಿ ಹಿಡಿಯುವ ಎಲ್ಲಾ ಸಾಮರ್ಥ್ಯ ತಂಡಕ್ಕಿದೆ. ಎಲ್ಲಾ ಆಟಗಾರರು ಫಾಮ್ ನರ್ಲ್ಲಿದ್ದಾರೆ ಎಂದು ಹೇಳಿದರು.

ಇಲ್ಲಿದೆ ನೋಡಿ ವಿಶ್ವಕಪ್ ಟೂರ್ನಿಗೆ ರೆಡಿಯಾದ 10 ತಂಡಗಳ ಸಂಪೂರ್ಣ ಪಟ್ಟಿ

ಇಂಗ್ಲೆಂಡ್‌ನಲ್ಲಿ ಮೇ 30ರಿಂದ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದ್ದು, ಭಾರತ ತಂಡ ಜೂನ್ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ಪಂದ್ಯ ಆಡುವ ಮೂಲಕ ಅಭಿಯಾನ ಶುರುಮಾಡಲಿದೆ.

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..