ಬಿಜೆಪಿಯವರು ಕೌರವರಿದ್ದಂತೆ, ನಾವು ಪಾಂಡವರಂತೆ ಸತ್ಯಕ್ಕಾಗಿ ಹೋರಾಡುತ್ತೇವೆ: ರಾಹುಲ್ ಗಾಂಧಿ

First Published 18, Mar 2018, 5:52 PM IST
We Let People Down Rahul Gandhi Top Quotes At Congress Plenary
Highlights

ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ನಡುವೆ ದೊಡ್ಡ ಗೋಡೆಯಿದೆ ಎಂಬ ಬಗ್ಗೆ ನನಗೆ ಅರಿವಿದೆ, ನನ್ನ ಮೊದಲ ಆದ್ಯತೆ ಈ ಗೋಡೆಯನ್ನು ಒಡೆಯುವುದಾಗಿದೆ ಎಂದು ಹೇಳಿದ್ದಾರೆ.

ನವದೆಹಲಿ(ಮಾ.18): ಮಹಾಭಾರತದ ಕೌರವರಿಗೆ ಬಿಜೆಪಿ ಹಾಗೂ ಆರ್'ಎಸ್'ಎಸ್ ಹೋಲಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಶತಮಾನಗಳಿಂದಲೂ ಅಧಿಕಾರಕ್ಕಾಗಿ ಹೋರಾಟ ನಡೆಯುತ್ತಾ ಬಂದಿದೆ. ಕೌರವರು ಬಲಿಷ್ಠರು ಹಾಗೂ ಸೊಕ್ಕಿನಿಂದ ವರ್ತಿಸುತ್ತಿದ್ದರು, ಇದೇ ವೇಳೆ ಪಾಂಡವರು ವಿನಮ್ರರಾಗಿದ್ದರು ಹಾಗೂ ಸತ್ಯಕ್ಕಾಗಿ ಹೋರಾಡುತ್ತಿದ್ದರು ಎಂದು ಕಾಂಗ್ರೆಸ್ ಅಧಿವೇಶನದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ನಡುವೆ ದೊಡ್ಡ ಗೋಡೆಯಿದೆ ಎಂಬ ಬಗ್ಗೆ ನನಗೆ ಅರಿವಿದೆ, ನನ್ನ ಮೊದಲ ಆದ್ಯತೆ ಈ ಗೋಡೆಯನ್ನು ಒಡೆಯುವುದಾಗಿದೆ ಎಂದು ಹೇಳಿದ್ದಾರೆ.

ಇದೇವೇಳೆ ಮೋದಿ ಓರ್ವ ವ್ಯಾಪರಿ ಹಾಗೂ ಪ್ರಧಾನಿ ಈ ಎರಡರ ಸಮ್ಮಿಶ್ರ ವ್ಯಕ್ತಿ ಎಂದು ರಾಹುಲ್ ಟೀಕೆ ಮಾಡಿದ್ದಾರೆ. 

loader