Asianet Suvarna News Asianet Suvarna News

ಸೌರವ್ ಗಂಗೂಲಿ ನಾಯಕತ್ವ ಉಳಿಸಿತ್ತು ಲಕ್ಷ್ಮಣ್ 281 ರನ್!

ವಿವಿಎಸ್ ಲಕ್ಷ್ಮಣ್ ಇನ್ನಿಂಗ್ಸ್ ಟೀಂ ಇಂಡಿಯಾವನ್ನ ಮಾತ್ರವಲ್ಲ ಹಲವರ ಕರಿಯರ್ ಕೂಡ ಕಾಪಾಡಿದೆ. ಇದೀಗ ಮಾಜಿ ನಾಯಕ ಸೌರವ್ ಗಂಗೂಲಿ ಇದೀಗ ತಮ್ಮ ಕರಿಯರ್ ಬಚಾವ್ ಮಾಡಿದ ಘಟನೆಯೊಂದನ್ನ ಬಿಚ್ಚಿಟ್ಟಿದ್ದಾರೆ.
 

VVS Laxman 281 runs saved my career says Sourav Ganguly
Author
Bengaluru, First Published Dec 13, 2018, 11:48 AM IST

ಕೋಲ್ಕತ್ತಾ(ಡಿ.13): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್  ಹಲವು ಬಾರಿ ತಂಡವನ್ನ ಕಾಪಾಡಿದ್ದಾರೆ. ಸೋಲಿನಲ್ಲಿದ್ದ ತಂಡವನ್ನ ಗೆಲುವಿನ ದಡ ಸೇರಿದ ಹೆಗ್ಗಳಿಕೆಗೆ ಲಕ್ಷ್ಮಣ್  ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ ಲಕ್ಷ್ಮಣ್ ಇನ್ನಿಂಗ್ಸ್ ಹಲವರ ಕ್ರಿಕೆಟ್ ಕರಿಯರ್‌ಗೂ ನೆರವಾಗಿದೆ ಅನ್ನೋ ಸೀಕ್ರೆಟ್ ಬಹಿರಂಗವಾಗಿದೆ.

ಕೋಲ್ಕತ್ತಾ ಟೆಸ್ಟ್ ಪಂದ್ಯದಲ್ಲಿ ವಿವಿಎಸ್ ಲಕ್ಷ್ಮಣ್ ಸಿಡಿಸಿದ 281 ರನ್ ನಿಂದ ಟೀಂ ಇಂಡಿಯಾ ಗೆಲುವು ಮಾತ್ರವಲ್ಲ, ನನ್ನ ಕರಿಯರ್ ಕೂಡ ಉಳಿಯಿತು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ. 

ಇದನ್ನೂ ಓದಿ: ಇಂಡೋ-ಆಸಿಸ್ ಟೆಸ್ಟ್: ಪರ್ತ್ ಪಂದ್ಯಕ್ಕೆ ಭಾರತ ತಂಡ ಪ್ರಕಟ!

ಮ್ಯಾಚ್ ಫಿಕ್ಸಿಂಗ್‌ನಿಂದ ಹೈರಾಣಾಗಿದ್ದ ಟೀಂ ಇಂಡಿಯಾ ಎಲ್ಲೆಡೆಗಳಿಂದ ಟೀಕೆಗೆ ಗುರಿಯಾಗಿತ್ತು. ಈ ವೇಳೆ ತಂಡದ ನಾಯಕತ್ವ ವಹಿಸಿಕೊಂಡ ಸೌರವ್ ಗಂಗೂಲಿಗೆ  ಅಗ್ನಿಪರೀಕ್ಷೆ ಎದುರಾಗಿತ್ತು.  2001ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದ ಭಾರತ ಕೋಲ್ಕತ್ತಾ ಪಂದ್ಯದಲ್ಲಿ ತಿರುಗೇಟು ನೀಡಿತ್ತು. ಈ ಲಕ್ಷ್ಮಣ್ 281ರನ್ ಸಿಡಿಸಿದರೆ ರಾಹುಲ್ ದ್ರಾವಿಡ್ 180 ರನ್ ಸಿಡಿಸಿದ್ದರು. ಈ ಮೂಲಕ ಟೀಂ ಇಂಡಿಯಾ 71 ರನ್ ಗೆಲುವು ಸಾಧಿಸಿತ್ತು. ಇಷ್ಟೇ ಅಲ್ಲ ನನ್ನ ನಾಯಕತ್ವ ಹಾಗೂ ಕ್ರಿಕೆಟ್ ಕರಿಯರ್ ಉಳಿಯಿತು ಎಂದು ಗಂಗೂಲಿ ಹೇಳಿದ್ದಾರೆ. 

ಇದನ್ನೂ ಓದಿ: ಐಪಿಎಲ್ ಹರಾಜು: 346 ಆಟಗಾರರ ಶಾರ್ಟ್‌ಲಿಸ್ಟ್-ಯಾರಿಗಿದೆ ಅವಕಾಶ?

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರ 281 ಆ್ಯಂಡ್ ಬಿಯಾಂಡ್ ಪುಸ್ತಕ ಭಾರಿ ಸುದ್ದು ಮಾಡುತ್ತಿದೆ. ಕೋಲ್ಕತ್ತಾದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸೌರವ್ ಗಂಗೂಲಿ ತಮ್ಮ ಕರಿಯರ್ ಸೀಕ್ರೆಟ್ ಬಹಿರಂಗ ಪಡಿಸಿದರು.

ಇದನ್ನೂ ಓದಿ: ಕೊಹ್ಲಿ- ಅನುಷ್ಕಾ ಜೋಡಿ ತ್ಯಾಗಕ್ಕೆ ಟ್ವಿಟರಿಗರ ಮೆಚ್ಚುಗೆ!

Follow Us:
Download App:
  • android
  • ios