ಜೈಪುರ(ಡಿ.11): ಐಪಿಎಲ್ ಹರಾಜಿಗೆ ಫ್ರಾಂಚೈಸಿಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಡಿಸೆಂಬರ್ 18 ರಂದು ಜೈಪುರದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 346 ಆಟಗಾರರನ್ನ ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಶಾರ್ಟ್‌ಲಿಸ್ಟ್ ಮಾಡಲಾಗಿರುವ ಆಟಗಾರರ ಪೈಕಿ 226 ಆಟಗಾರರು ಭಾರತೀಯರು ಇನ್ನುಳಿದ 120 ಮಂದಿ ವಿದೇಶಿ ಆಟಗಾರರಿದ್ದಾರೆ. ಲಸಿತ್ ಮಲಿಂಗ, ಬ್ರೆಂಡೆನ್ ಮೆಕ್‌ಕಲಮ್, ಕೋರಿ ಆಂಡರ್ಸನ್, ಸ್ಯಾಮ್ ಕುರ್ರನ್ ಸೇರಿದಂತೆ 9 ಮಂದಿ ಆಟಗಾರರು ಮೂಲ ಬೆಲೆ 2 ಕೋಟಿ ರೂಪಾಯಿ ಹೊಂದಿದ್ದಾರೆ.

ಹರಾಜಿನಲ್ಲಿರು ಭಾರತೀಯ ಆಟಗಾರರ ಬೈಕಿ ಗರಿಷ್ಠ ಮೂಲ ಬೆಲೆ ಹೊಂದಿಗೆ ಹೆಗ್ಗಳಿಕೆಗೆ ವೇಗಿ ಜಯದೇವ್ ಉನದ್ಕಟ್ ಪಾತ್ರರಾಗಿದ್ದಾರೆ. ಉನದ್ಕಟ್ ಮೂಲ ಬೆಲೆ 1.5 ಕೋಟಿ ರೂಪಾಯಿ. ಈ ಬಾರಿಯ ಐಪಿಎಲ್ ಹರಾಜಿಗೆ ಬರೋಬ್ಬರಿ 1003 ಆಟಗಾರರು ಹೆಸರು ನೊಂದಾಯಿಸಿದ್ದರು. ಇದರಲ್ಲಿ 346 ಆಟಗಾರರನ್ನ ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಈ 346 ಆಟಗಾರರ ಮೇಲೆ ಡಿ.18 ರಂದು ಫ್ರಾಂಚೈಸಿಗಳು ಹರಾಜು ಮಾಡಲಿದ್ದಾರೆ. 

ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಿಕೊಡುತ್ತಿದ್ದ ರಿಚರ್ಡ್ ಮ್ಯಾಡ್ಲೆಗೆ ಈಬಾರಿ ಕೊಕ್ ನೀಡಲಾಗಿದೆ. ಇದೇ ಮೊದಲ ಬಾರಿಗೆ ರಿಚರ್ಡ್ ಮ್ಯಾಡ್ಸೆ ಇಲ್ಲದೆ ಐಪಿಎಲ್ ಹರಾಜು ನಡೆಯಲಿದೆ. ಈ ಬಾರಿ ಹರಾಜಿಗೆ ರಿಚರ್ಡ್ ಮ್ಯಾಡ್ಲೆ ಬದಲು ಕ್ಲಾಸಿಕ್ ಕಾರ್ ಅಂಡ್ ಚಾರಿಟಿ ಆಕ್ಷನರ್ ಹರಾಜು ಪ್ರಕ್ರಿಯೆ ನಡೆಸಿಕೊಡಲಿದ್ದಾರೆ.