ಏಷ್ಯನ್ ಗೇಮ್ಸ್‌ಗೆ ಚೆಸ್ ವಾಪಸ್; ವಿಶ್ವನಾಥನ್ ಆನಂದ್ ಸಂತಸ
ಕಳೆದೆರಡು ಏಷ್ಯನ್ ಗೇಮ್ಸ್’ನಲ್ಲಿ ಚೆಸ್ ಕ್ರೀಡೆಯನ್ನು ಟೂರ್ನಿಯಲ್ಲಿ ಕೈಬಿಡಲಾಗಿತ್ತು. ಇದೀಗ ಮುಂಬರುವ ಏಷ್ಯಾಡ್’ಗೆ ಚೆಸ್ ಸೇರ್ಪಡೆಗೊಂಡಿದೆ.
ಚೆನ್ನೈ[ಮಾ.18]: ಏಷ್ಯನ್ ಗೇಮ್ಸ್‌ಗೆ ಚೆಸ್ ವಾಪಸಾಗಿದೆ. 2022ರಲ್ಲಿ ಚೀನಾದ ಹ್ಯಾಂಗ್ಝುನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಚೆಸ್ ನಡೆಯಲಿದೆ ಎಂದು ಏಷ್ಯನ್ ಒಲಿಂಪಿಕ್ ಸಮಿತಿ ಮುಖ್ಯಸ್ಥರು ತಿಳಿಸಿದ್ದಾರೆ.
2 ವರ್ಷ ಶಾಲೆಗೇ ಹೋಗದವ ಗ್ರ್ಯಾಂಡ್‌ಮಾಸ್ಟರ್!
2006ರ ದೋಹಾ ಹಾಗೂ 2010ರ ಗುವಾಂಗ್ಝು ಏಷ್ಯಾಡ್‌ನಲ್ಲಿ ಚೆಸ್ ಇತ್ತು. 2006ರಲ್ಲಿ ಭಾರತ 2 ಚಿನ್ನ ಜಯಿಸಿದರೆ, 2010ರಲ್ಲಿ 2 ಕಂಚಿನ ಪದಕ ಗಳಿಸಿತ್ತು. 2014 ಹಾಗೂ 2018ರ ಏಷ್ಯನ್ ಗೇಮ್ಸ್‌ಗಳಲ್ಲಿ ಚೆಸ್ ಸ್ಪರ್ಧೆ ನಡೆದಿರಲಿಲ್ಲ.
ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಚೆಸ್ ಸೇರ್ಪಡೆಗೊಳಿಸಿದ್ದಕ್ಕೆ 5 ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಸೇರಿ ಭಾರತದ ಅಗ್ರ ಚೆಸ್ ಪಟುಗಳು ಸಂತಸ ವ್ಯಕ್ತಪಡಿಸಿದ್ದಾರೆ. ‘ಈ ಬೆಳವಣಿಗೆ ಸಂತಸ ಮೂಡಿಸಿದೆ. ಭಾರತ ತಂಡ ಪದಕ ಗೆಲ್ಲಲಿದೆ ಎನ್ನುವ ಭರವಸೆ ಇದೆ’ ಎಂದು ಆನಂದ್ ಹೇಳಿದ್ದಾರೆ.