ಸೌರವ್ ಗಂಗೂಲಿ ಹುಟ್ಟುಹಬ್ಬಕ್ಕೆ ವಿರೇಂದ್ರ ಸೆಹ್ವಾಗ್ ಮಾಡಿದ ಟ್ವೀಟ್ ಏನು?

Virender Sehwag Wishes Sourav Ganguly On His Birthday In His Own Style
Highlights

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಎಂ ಎಸ್ ಧೋನಿ ಹುಟ್ಟುಹಬ್ಬದ ಶುಭಾಶಯದ ಬಳಿಕ ಇದೀಗ ಸೌರವ್ ಗಂಗೂಲಿಗೆ ಶುಭಾಶಯ ಕೋರಿದ್ದಾರೆ. ಟ್ವೀಟ್ ಮೂಲಕ ಮತ್ತೆ ಅಬ್ಬರಿಸಿರುವ ವೀರೂ, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸೆಹ್ವಾಗ್ ಮಾಡಿದ ಟ್ವೀಟ್ ವಿವರ ಇಲ್ಲಿದೆ.

ನವ ದೆಹಲಿ(ಜು.08): ಟೀಂ ಇಂಡಿಯಾ ಕಂಡ ಶ್ರೇಷ್ಠ ನಾಯಕ ನಾಯಕ ಸೌರವ್ ಗಂಗೂಲಿ ಇಂದು 46ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ವಿರೇಂದ್ರ ಸೆಹ್ವಾಗ್, ತಮ್ಮ ಶೈಲಿಯಲ್ಲೇ ದಾದಾ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಯಶಸ್ಸು ಸಾಧಿಸಿದ್ದು ಸೌರವ್ ಗಂಗೂಲಿಯಿಂದ. ಗಂಗೂಲಿ ತಮ್ಮ ಆರಂಭಿಕ ಸ್ಥಾನವನ್ನ ಗಂಗೂಲಿಗೆ ಬಿಟ್ಟುಕೊಡೋ ಮೂಲಕ ಸೆಹ್ವಾಗ್ ಟೀಂ ಇಂಡಿಯಾದ ಡ್ಯಾಶಿಂಗ್ ಓಪನರ್‌ ಆಗಿ ಗಮನಸೆಳೆದರು. ಇದೀಗ ತಮ್ಮ ನಾಯಕ, ಟೀಮ್‌ಮೇಟ್ ಗಂಗೂಲಿಗೆ ಟ್ವಿಟರ್ ಮೂಲಕ ಹುಟ್ಟುಹಬ್ಬ ಶುಭಾಶಯ ತಿಳಿಸಿದ್ದಾರೆ.

 

 

ಗಂಗೂಲಿ ಕ್ರಿಕೆಟ್ ಹಾಗೂ ವ್ಯಕ್ತಿತ್ವವನ್ನ ಚೊಕ್ಕದಾಗಿ ಹೇಳಿರುವ ಸೆಹ್ವಾಗ್, ಮತ್ತೊಮ್ಮೆ ಟ್ವಿಟರ್‌ನಲ್ಲಿ ಸಿಕ್ಸರ್ ಸಿಡಿಸಿದ್ದಾರೆ. ಸ್ಪೆಪ್ 1: ಬೆಳಗ್ಗೆ ಎದ್ದು, ಎರಡು ಬಾರಿ ಕಣ್ಣು ಮಿಟಕಿಸಿ, ಕ್ರೀಸ್‌ಗೆ ಹಾಜರ್. ಸ್ಪೆಪ್2: ಪ್ರತಿ ಎಸೆತಕ್ಕೂ ದಿಟ್ಟ ಉತ್ತರ. ಸ್ಟೆಪ್ 3: ಬೌಲಿಂಗ್‌ನಲ್ಲಿ ಮಾತ್ರವಲ್ಲ ತಲೆಕೂದಲನ್ನ ಸ್ವಿಂಗ್ ಮಾಡುತ್ತಾ ಮನಸ್ಸು ಗೆದ್ದು ಆಟಾಗರ. ಸ್ಪೆಪ್4: ಗೆಲುವಿನ ಸಂಭ್ರಮವನ್ನ ಯಾರೂ ತನ್ನನ್ನ ನೋಡುತ್ತಿಲ್ಲ ಅನ್ನೋ ರೀತಿ ಸಂಭ್ರಮಿಸೋ ಕ್ರಿಕೆಟಿಗ.  ಹುಟ್ಟು ಹಬ್ಬದ ಶುಭಾಶಯ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ: ಕ್ರಿಕೆಟ್ ಸೀಕ್ರೆಟ್ಸ್: ಭಾರತದ ಯಶಸ್ವಿ ನಾಯಕ ಸೌರವ್ ಗಂಗೂಲಿಗೆ ಈ ದಿನ ವಿಶೇಷ ಯಾಕೆ?

loader