ಕ್ರಿಕೆಟ್‌ನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇಂತಹ ದಾಖಲೆಗಳು, ಐತಿಹಾಸಿಕ ನಿಮಿಷಗಳನ್ನ ಮೆಲುಕು ಹಾಕುವ ವಿಶೇಷ ಪ್ರಯತ್ನವೇ ಕ್ರಿಕೆಟ್ ಸೀಕ್ರೆಟ್ಸ್. ಹಾಗಾದರೆ ಜುಲೈ 8ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.

ಕೋಲ್ಕತ್ತಾ(ಜು.08): ಟೀಂ ಇಂಡಿಯಾ ಕಂಡ ಯಶಸ್ವಿ ನಾಯಕ ಸೌರವ್ ಗಂಗೂಲಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜುಲೈ 8, 1972ರಂದು ಹುಟ್ಟಿದ ಸೌರವ್ ಗಂಗೂಲಿ ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಗಂಗೂಲಿ ಬ್ಯಾಟಿಂಗ್ ಶೈಲಿಯನ್ನ ಒಂದೇ ಮಾತಿನಲ್ಲಿ ಹೇಳೋದಾದರೆ, ಫ್ರಂಟ್ ಫೂಟ್ ಸಿಕ್ಸರ್, ಆಫ್ ಸೈಡ್ ವಂಡರ್. (ಎರಡು ಹೆಜ್ಜೆ ಮುಂದೆ ಬಂದರೆ ಸಿಕ್ಸರ್, ಆಫ್ ಸೈಡ್‌ ಬ್ಯಾಟಿಂಗ್‌ನಲ್ಲಿ ಮಾಸ್ಟರ್) ಅದ್ಬುತ ಬ್ಯಾಟ್ಸ್‌ಮನ್ ಆಗಿ 1992ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಸೌರವ್, ಬಳಿಕ ಭಾರತ ತಂಡದ ಅಗ್ರೆಸ್ಸೀವ್ ಹಾಗೂ ಯಶಸ್ವಿ ನಾಯಕನಾಗಿ ಹೊರಹೊಮ್ಮಿದರು.

Scroll to load tweet…

ಅಕ್ರಮಣಕಾರಿ, ಏಟಿಗೆ ಎದಿರೇಟು ನೀಡೋ ತಾಕತ್ತು ಸೌರವ್ ಗಂಗೂಲಿಯಿಂದಲೇ ಭಾರತ ರೂಡಿಸಿಕೊಂಡಿತು. 2002ರ ನಾಟ್‌ವೆಸ್ಟ್ ಸರಣಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನ ಮಣಿಸಿ, ಆಂಡ್ರ್ಯೂ ಫ್ಲಿಂಟಾಫ್‌ಗೆ ತಿರುಗೇಟು ನೀಡಿದ್ದನ್ನ ಯಾರು ಮರೆತಿಲ್ಲ.

ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಸೆಂಚುರಿ ಸಿಡಿಸಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ ಅತ್ಯುತ್ತಮ ಆಟಗಾರ ಗಂಗೂಲಿ. 2003ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನ ಫೈನಲ್‌ಗೆ ಕೊಂಡೊಯ್ದ ಸೌರವ್ ಗಂಗೂಲಿ, 2005,2005ರಲ್ಲಿ ಪಾಕಿಸ್ತಾನ ವಿರುದ್ಧ ಸರಣಿ ಗೆದ್ದ ಸಾಧನೆ ಮಾಡಿದರು.

113 ಟೆಸ್ಟ್ ಪಂದ್ಯಗಳಿಂದ ಗಂಗೂಲಿ 7212 ರನ್ ಸಿಡಿಸಿದ್ದಾರೆ. 239 ಟೆಸ್ಟ್‌ನಲ್ಲಿ ಗಂಗೂಲಿ ಬೆಸ್ಟ್ ಸ್ಕೋರ್. 16 ಶತಕ ಹಾಗೂ 35 ಅರ್ಧಶತಕ ದಾಖಲಿಸಿದ್ದಾರೆ. 311 ಏಕದಿನ ಪಂದ್ಯಗಳಿಂದ 11363 ರನ್ ಸಿಡಿಸಿರುವ ಗಂಗೂಲಿ, 22 ಶತಕ ಹಾಗೂ 72 ಅರ್ಧಶತಕ ಸಿಡಿಸಿದ್ದಾರೆ. ಏಕದಿನದಲ್ಲಿ 183 ಗಂಗೂಲಿ ಬೆಸ್ಟ್ ಸ್ಕೋರ್. ಇಷ್ಟೇ ಅಲ್ಲ ಟೆಸ್ಟ್‌ನಲ್ಲಿ 32 ಹಾಗೂ ಏಕದಿನದಲ್ಲಿ 100 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.

ಕೋಚ್ ಗ್ರೆಗ್ ಚಾಪೆಲ್ ನಡುವಿನ ಜಟಾಪಟಿಯಿಂದ ಗಂಗೂಲಿ ನಾಯಕತ್ವಕ್ಕೆ ಕುತ್ತು ಎದುರಾಯಿತು. ಆದರೆ 2006ರಲ್ಲಿ ಮತ್ತೆ ಕಮ್‌ಬ್ಯಾಕ್ ಮಾಡಿದ ಗಂಗೂಲಿ 2008ರಲ್ಲಿ ಅಂತಾರಾಷ್ಟ್ಪೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಇದೀಗ 46ನೇ ವರ್ಷಕ್ಕೆ ಕಾಲಿಟ್ಟಿರುವಸೌರವ್ ಗಂಗೂಲಿಗೆ ಹುಟ್ಟುಹಬ್ಬದ ಶುಭಾಷಯಗಳು.