ಇಂಗ್ಲೆಂಡ್ ನೆಲದಲ್ಲಿ ಭಾರತೀಯ ಬ್ಯಾಟ್ಸ್’ಮನ್’ಗಳ ಬಂಡವಾಳ ಮತ್ತೊಮ್ಮೆ ಬಟಾಬಯಲಾಯಿತು. ನಾಯಕ ಕೊಹ್ಲಿ ಹೊರತುಪಡಿಸಿ ಮತ್ತೆ ಯಾವ ಬ್ಯಾಟ್ಸ್’ಮನ್’ಗಳು ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ. ಒಂದು ಹಂತದಲ್ಲಿ 182 ರನ್’ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ಭಾರತ 200 ರನ್’ಗಳೊಳಗೆ ಆಲೌಟ್ ಆಗುವ ಭೀತಿಯಲ್ಲಿತ್ತು.
ಬರ್ಮಿಂಗ್’ಹ್ಯಾಮ್[ಆ.03]: ಇಂಗ್ಲೆಂಡ್ ನೆಲದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್’ನಲ್ಲಿ ಚೊಚ್ಚಲ ಶತಕ ಸಿಡಿಸುವುದರೊಂದಿಗೆ ಭಾರತೀಯ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಕಳೆದ 2014ರ ಪ್ರವಾಸದಲ್ಲಿ ಒಟ್ಟು 10 ಇನ್ನಿಂಗ್ಸ್’ಗಳಲ್ಲಿ 134 ರನ್’ಗಳನ್ನಷ್ಟೇ ಬಾರಿಸಿ ರನ್ ಬರ ಅನುಭವಿಸಿದ್ದರು. ಆದರೆ ಇದೀಗ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್’ನಲ್ಲೇ ಭರ್ಜರಿ 149 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.
ಇಂಗ್ಲೆಂಡ್ ನೆಲದಲ್ಲಿ ಭಾರತೀಯ ಬ್ಯಾಟ್ಸ್’ಮನ್’ಗಳ ಬಂಡವಾಳ ಮತ್ತೊಮ್ಮೆ ಬಟಾಬಯಲಾಯಿತು. ನಾಯಕ ಕೊಹ್ಲಿ ಹೊರತುಪಡಿಸಿ ಮತ್ತೆ ಯಾವ ಬ್ಯಾಟ್ಸ್’ಮನ್’ಗಳು ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ. ಒಂದು ಹಂತದಲ್ಲಿ 182 ರನ್’ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ಭಾರತ 200 ರನ್’ಗಳೊಳಗೆ ಆಲೌಟ್ ಆಗುವ ಭೀತಿಯಲ್ಲಿತ್ತು. ಆದರೆ ಬಾಲಂಗೋಚಿಗಳ ಜತೆ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ ಟೆಸ್ಟ್ ವೃತ್ತಿಜೀವನದ 22ನೇ ಶತಕ ಸಿಡಿಸುವುದರೊಂದಿಗೆ ತಂಡದ ಮೊತ್ತವನ್ನು 270ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಕೊಹ್ಲಿಯ ಈ ಅದ್ಭುತ ಇನ್ನಿಂಗ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು ವಿರೇಂದ್ರ ಸೆಹ್ವಾಗ್, ಲತಾ ಮಂಗೇಶ್’ಕರ್ ಸೇರಿದಂತೆ ದಿಗ್ಗಜರು ಕೊಹ್ಲಿ ಬ್ಯಾಟಿಂಗ್ ಕೊಂಡಾಡಿದ್ದಾರೆ.
