ಆದಿವಾಸಿ ಹತ್ಯೆಗೆ ಸಂಬಂಧಿಸಿದಂತೆ ಸೆಹ್ವಾಗ್ ಟ್ವೀಟ್ ಮಾಡಿ ಡಿಲೀಟ್ ಮಾಡಿದ್ದು ಯಾಕೆ

First Published 25, Feb 2018, 4:43 PM IST
Virender Sehwag sparks communal controversy over Kerala tribal murder then apologises
Highlights

ಆದರೆ ವಾಸ್ತವದಲ್ಲಿ  ಘಟನೆಗೆ ಸಂಬಂಧಿಸಿದಂತೆ ಕೊಲೆ ಆರೋಪದಲ್ಲಿ 16 ಮಂದಿಯನ್ನು ಬಂಧಿಸಲಾಗಿದೆ. ಧಾರ್ಮಿಕ ವಿಷಯವನ್ನು ಎಳೆದು ತಂದಿರುವುದಕ್ಕೆ ರಾಮಚಂದ್ರ ಗುಹಾ, ಶೇಖರ್ ಗುಪ್ತ ಸೇರಿದಂತೆ ಹಲವರು ಸೆಹ್ವಾಗ್ ಮಾತುಗಳನ್ನು ಖಂಡಿಸಿದ್ದರು.

ಎರಡು ದಿನಗಳ ಹಿಂದಷ್ಟೆ ಒಂದು ಕೆಜಿ ಅಕ್ಕಿ ಕದ್ದ ಎಂದು ಮಧು ಎಂಬ ಆದಿವಾಸಿ ಯುವಕನನ್ನು ಕೇರಳದಲ್ಲಿ ಗುಂಪೊಂದು ಹತ್ಯೆ ಮಾಡಿತ್ತು. ಸಾವಿಗೆ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗಿ ಆರೋಪಿಗಳನ್ನು ಸ್ಥಳೀಯ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸುತ್ತಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಆದರೆ ಟ್ವಿಟ್'ನಲ್ಲಿ ವ್ಯಕ್ತಪಡಿಸಿದ್ದ ಮಾತು ವಿವಾದವುಂಟಾಗಿತ್ತು. ವಿಷಾದ ವ್ಯಕ್ತಪಡಿಸಿ ಮಾತನಾಡಿದ ಮಾಜಿ ಕ್ರಿಕೆಟಿಗ' ಮಧು 1 ಕೆಜಿ ಅಕ್ಕಿ ಕದ್ದ ಬ ಕಾರಣಕ್ಕೆ  'ಉಬೈದ್, ಹುಸೇನ್ ಮತ್ತು ಅಬ್ದುಲ್ ಕರೀಂನ ಗುಂಪು ಅಮಾಯಕವಾಗಿ ಸಾವಿಗೆ ತಳ್ಳಿದೆ. ಇದು ನಾಗರಿಕ ಸಮಾಜಕ್ಕೆ ನಾಚಿಕೆಗೇಡಿನ ವಿಷಯವಾಗಿದೆ. ಈ ರೀತಿ ಘಟನೆ ನಡೆಯುತ್ತಿರುವುದಕ್ಕೆ ನನಗೂ ಕೂಡ ನಾಚಿಕೆಯಾಗುತ್ತಿದೆ' ಎಂದು ಟ್ವೀಟ್ ಮಾಡಿದ್ದರು. ಅಲ್ಲದೆ ಧಾರ್ಮಿಕ ವಿಷಯವನ್ನು ಪ್ರಸ್ತಾಪ ಮಾಡಿದ್ದರು.  

ಆದರೆ ವಾಸ್ತವದಲ್ಲಿ  ಘಟನೆಗೆ ಸಂಬಂಧಿಸಿದಂತೆ ಕೊಲೆ ಆರೋಪದಲ್ಲಿ 16 ಮಂದಿಯನ್ನು ಬಂಧಿಸಲಾಗಿದೆ. ಧಾರ್ಮಿಕ ವಿಷಯವನ್ನು ಎಳೆದು ತಂದಿರುವುದಕ್ಕೆ ರಾಮಚಂದ್ರ ಗುಹಾ, ಶೇಖರ್ ಗುಪ್ತ ಸೇರಿದಂತೆ ಹಲವರು ಸೆಹ್ವಾಗ್ ಮಾತುಗಳನ್ನು ಖಂಡಿಸಿದ್ದರು. ಖಂಡನೆ ಹೆಚ್ಚಾಗುತ್ತಿದ್ದಂತೆ ಕ್ಷಮಾಪಣೆ ಕೇಳಿದ ಮಾಜಿ ಕ್ರಿಕೆಟಿಗ ಟ್ವೀಟ್'ಗಳನ್ನು ಡಿಲೀಟ್ ಮಾಡಿದ್ದಾರೆ.

loader