ಟೀಂ ಇಂಡಿಯಾದ ಮುಂದಿನ ದಿಗ್ಗಜ ನಾಯಕ ಯಾರು? ಪ್ರಸಕ್ತ ನಾಯಕ ವಿರಾಟ್ ಕೊಹ್ಲಿ ಭಾರತದ ಶ್ರೇಷ್ಠ ನಾಯಕನಾಗಲು ಸಾಧ್ಯವಿಲ್ವಾ? ದಿಗ್ಗಜ ನಾಯಕ ಪಟ್ಟ ಯಾರಿಗೆ ಸಿಗಲಿದೆ. ಈ ಎಲ್ಲಾ ಕುತೂಹಲಗಳಿಗೆ ವಿರೇಂದ್ರ ಸೆಹ್ವಾಗ್ ಹೇಳಿದ್ದೇನು? ಇಲ್ಲಿದೆ ವಿವರ.
ನವದೆಹಲಿ(ಜು.09): ಟೀ ಇಂಡಿಯಾದ ಮುಂದಿನ ನಾಯಕ ಯಾರು ಅನ್ನೋ ಪ್ರಶ್ನೆ ಈಗ ಸೂಕ್ತವಲ್ಲ. ಕಾರಣ ಎಂ ಎಸ್ ಧೋನಿ ಬಳಿಕ ತಂಡವನ್ನ ವಿರಾಟ್ ಕೊಹ್ಲಿ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಆದರೆ ಭಾರತದ ಮುಂದಿನ ದಿಗ್ಗಜ ನಾಯಕ ಪಟ್ಟ ಯಾರಿಗೆ ಒಲಿಯುತ್ತೆ? ಅನ್ನೋ ಕುತೂಹಲ ಎಲ್ಲರಲ್ಲೂ ಇದೇ. ಇದಕ್ಕೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಉತ್ತರಿಸಿದ್ದಾರೆ.
ಮಾಜಿ ನಾಯಕರಾದ ಎಂ ಎಸ್ ಧೋನಿ, ಸೌರವ್ ಗಂಗೂಲಿ ಹುಟ್ಟುಹಬ್ಬಕ್ಕೆ ಶುಭಕೋರಿದ ಸೆಹ್ವಾಗ್ ಇದೀಗ ಮತ್ತೊಂದು ಟ್ವೀಟ್ ಮೂಲಕ ಭಾರತದ ಭವಿಷ್ಯದ ದಿಗ್ಗಜ ನಾಯಕನ ಸೂಚನೆ ನೀಡಿದ್ದಾರೆ.
ವಿರೇಂದ್ರ ಸೆಹ್ವಾಗ್ ಮಾಡಿರೋ ಟ್ವೀಟ್ ಇದೀಗ ಬಾರಿ ಸದ್ದು ಮಾಡುತ್ತಿದೆ. ಜುಲೈ 7 ಧೋನಿ ಹುಟ್ಟುಹಬ್ಬ, ಜುಲೈ 8 ಸೌರವ್ ಗಂಗೂಲಿ, ಜುಲೈ 10 ಸುನಿಲ್ ಗವಾಸ್ಕರ್ ಹುಟ್ಟುಹಬ್ಬ. ಮೂವರು ಭಾರತದ ಶ್ರೇಷ್ಠ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಜುಲೈ 9 ರ ಜನ್ಮದಿನ ಹೊಂದಿದ ಕ್ರಿಕೆಟಿಗ ಭವಿಷ್ಯದಲ್ಲಿ ಶ್ರೇಷ್ಠ ನಾಯಕನಾಗಲಿದ್ದಾರೆ ಎಂದು ಸೆಹ್ವಾಗ್ ಹೇಳಿದ್ದಾರೆ.
ವೀರೂ ಸಂದೇಶದ ಪ್ರಕಾರ, ಜುಲೈ 9 ರಂದು ಕರ್ನಾಟತದ ಶಿವಿಲ್ ಕೌಶಿಕ್ ಹಾಗೂ ಮಧ್ಯಮಪ್ರದೇಶ ಆರ್ಯಮನ್ ಬಿರ್ಲಾ ಹುಟ್ಟುಹಬ್ಬ ದಿನಾಂಕ ಹೊಂದಿದ್ದಾರೆ. ಹೀಗಾಗಿ ಸೆಹ್ವಾಗ್ ಪ್ರಕಾರ ಇವರಿಬ್ಬರಿಗೂ ಶ್ರೇಷ್ಠ ನಾಯಕನಾಗೋ ಅವಕಾಶಗಳಿವೆ. ಜುಲೈ 9 ರಂದು ಮಾಜಿ ಸ್ಪಿನ್ನರ್ ವೆಂಕಟಪತಿ ರಾಜು ಹುಟ್ಟಿದ ದಿನ. ಆದರೆ ವೆಂಕಟಪತಿ ರಾಜು ಭಾರತದ ಶ್ರೇಷ್ಠ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ.
