ನವದೆಹಲಿ(ಮೇ.05): ವಿರಾಟ್ ಕೊಹ್ಲಿ ವಿಶ್ವದ ಶ್ರೀಮಂತ ಕ್ರಿಕೆಟಿಗನಾಗಿದರೂ, ಇಂಗ್ಲೆಂಡ್ ಕೌಂಟಿಯಲ್ಲಿ ಅವರಿಗೆ ಸಿಗುವುದು ಕನಿಷ್ಠ ಮೊತ್ತ ಮಾತ್ರ.
ಗುರುವಾರವಷ್ಟೇ ಕೊಹ್ಲಿ ತಂಡ ದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಕೌಂಟಿ ತಂಡ ಸರ್ರೆ ಅಧಿಕೃತ ಪ್ರಕಟಣೆ ಹೊರಡಿಸಿತ್ತು. ಕೊಹ್ಲಿ ಸೇರ್ಪಡೆಗೊಂಡಿರುವುದರಿಂದ ಸರ್ರೆ ದೊಡ್ಡ ಮೊತ್ತ ಖರ್ಚಾಗಲಿದೆ ಎನ್ನುವ ಲೆಕ್ಕಾಚಾರ ಸುಳ್ಳು. ಭಾರತೀಯ ನಾಯಕ ನಿಗೆ ಸರ್ರೆ ವಿಮಾನ ಶುಲ್ಕ, ವಾಸ್ತವ್ಯ ವ್ಯವಸ್ಥೆ ಹಾಗೂ ಹಾಲಿ ಆಟಗಾರರಿಗೆ ನೀಡುತ್ತಿರುವ ದಿನ ಭತ್ಯೆ ಮೊತ್ತವನ್ನಷ್ಟೇ ಪಾವತಿಸಲಿ ದೆ ಎಂದು ಐಸಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಸಿಸಿಐ ಹಾಗೂ ಸ್ವತಃ ವಿರಾಟ್ ಕೊಹ್ಲಿಗೆ ಇಂಗ್ಲೆಂಡ್ ಕೌಂಟಿಯಲ್ಲಿ ಆಡುವ ಆಸಕ್ತಿ ಇದಿದ್ದರಿಂದ ಹಣಕಾಸಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಪ್ರಮೇಯ ಬರಲಿಲ್ಲ. ಸರ್ರೆ ತಂಡ ಸಂಭಾವನೆ ರೂಪದಲ್ಲಿ ಎಷ್ಟು ಹಣ  ನೀಡಲಿದೆ ಎನ್ನುವುದನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ. ಜೂನ್'ನಲ್ಲಿ ವಿರಾಟ್ 3 ನಾಲ್ಕು ದಿನಗಳ ಟೆಸ್ಟ್  ಪಂದ್ಯ ಹಾಗೂ ಮೂರು 50 ಓವರ್'ಗಳ ಪಂದ್ಯಗಳನ್ನಾಡಲಿದ್ದಾರೆ.