ಕೊಹ್ಲಿಗೆ ಕೌಂಟಿ ಆಡಲು ಅವಕಾಶ ಕೊಡಬೇಡಿ..! ಹೀಗೆ ಹೇಳಿದ್ದು ಯಾರು ಗೊತ್ತಾ..?

Virat Kohli shouldnt be allowed to play County cricket Says Bob Willis
Highlights

ವಿರಾಟ್ ಕೊಹ್ಲಿ ಇಂಗ್ಲೆಂಡ್ ನೆಲದಲ್ಲಿ ಈ ಮೊದಲು ಕೇವಲ 30ರ ಸರಾಸರಿಯಲ್ಲಿ ರನ್ ದಾಖಲಿಸಿದ್ದಾರೆ. ವಿದೇಶಿ ಆಟಗಾರರಿಗೆ ಇಲ್ಲಿ ಆಡಲು ಅವಕಾಶಕೊಟ್ಟ ಬಳಿಕವಷ್ಟೇ ಇಂಗ್ಲೆಂಡ್ ತವರಿನಲ್ಲಿ ಸೋಲಲು ಆರಂಭಿಸಿತು ಎಂದು ವಿಲ್ಲಿಸ್ ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಚೇತೇಶ್ವರ ಪೂಜಾರ(ಯಾರ್ಕ್'ಶೈರ್) ಮತ್ತು ಇಶಾಂತ್ ಶರ್ಮಾ(ಸಸೆಕ್ಸ್) ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ.

ಲಂಡನ್(ಮಾ.28): ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಕೌಂಟಿ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ನೀಡಬಾರದು ಎಂದು ಇಂಗ್ಲೆಂಡ್ ಮಾಜಿ ವೇಗಿ ಬಾಬ್ ವಿಲ್ಲಿಸ್ ಆಗ್ರಹಿಸಿದ್ದಾರೆ.

ಇದೇ ವರ್ಷ ಜೂನ್‌'ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಟೆಸ್ಟ್ ಆಡಲಿದ್ದು, ಅದಕ್ಕೂ ಮುನ್ನ ಸರ್ರೆ ತಂಡದ ಪರ ಕೌಂಟಿಯಲ್ಲಿ ಆಡಲು ಕೊಹ್ಲಿ ನಿರ್ಧರಿಸಿದ್ದಾರೆ.

‘ಕೊಹ್ಲಿಗೆ ಕೌಂಟಿಯಲ್ಲಿ ಆಡಲು ಅವಕಾಶ ಕೊಟ್ಟರೆ, ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಾರೆ. ಎದುರಾಳಿಗೆ ನಾವೇ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಇಂಗ್ಲೆಂಡ್‌'ನಲ್ಲಿ ರನ್ ಗಳಿಸಲು ಕೊಹ್ಲಿ ಪರದಾಡುವಂತೆ ಮಾಡಬೇಕು’ ಎಂದು ವಿಲ್ಲಿಸ್ ಹೇಳಿದ್ದಾರೆ. ಕಳೆದ ಬಾರಿ ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಭಾರತ ಪರ 5 ಟೆಸ್ಟ್ ಪಂದ್ಯಗಳನ್ನಾಡಿದ್ದ ಕೊಹ್ಲಿ ಒಂದು ಅರ್ಧಶತಕ ಬಾರಿಸಲು ಕೂಡಾ ವಿಫಲವಾಗಿದ್ದರು.

loader