ದೆಹಲಿಯ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ ಅನಾವರಣಬ್ಯಾಟ್ ಹಿಡಿದು ಕಂಗಳಲ್ಲೇ ಬೌಲರ್‌ಗೆ ನಡುಕ ಹುಟ್ಟಿಸುವ ಶೈಲಿಯ ವಿರಾಟ್ ಮೇಣದ ಪ್ರತಿಮೆ ಈ ಅಪರೂಪದ ಗೌರವ ನೀಡಿದ ಟುಸ್ಸಾಡ್ಸ್ ಮ್ಯೂಸಿಯಂಗೆ ವಿರಾಟ್ ಅಭಿನಂದನೆ

ನವದೆಹಲಿ(ಜೂ.6): ಜಗತ್ತಿನ ಖ್ಯಾತನಾಮರಮೇಣದ ಪ್ರತಿಮೆಗಳಿಗೆ ಹೆಸರಾಗಿರುವ ಪ್ರತಿಷ್ಠಿತ ಮೇಡಮ್‌ ಟುಸ್ಸಾಡ್ಸ್ ಮ್ಯೂಸಿಯಂನ ದೆಹಲಿ ಶಾಖೆಯಲ್ಲಿ, ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ.

ಈಗಗಾಲೇ ಟುಸ್ಸಾಡ್ಸ್‌ ಮ್ಯೂಸಿಯಂನಲ್ಲಿ ಕ್ರಿಕೆಟ್‌ ದಿಗ್ಗಜರಾದ ಕಪಿಲ್‌ ದೇವ್‌, ಸಚಿನ್‌ ತೆಂಡೂಲ್ಕರ್‌, ಅರ್ಜೆಂಟೀನಾದ ಫುಟ್‌ಬಾಲ್‌ ಆಟಗಾರ ಲಯೊನೆಲ್‌ ಮೆಸ್ಸಿ ಅವರ ಮೇಣದ ಪ್ರತಿಮೆಗಳಿದ್ದು, ಈಗ ವಿರಾಟ್ ಕೊಹ್ಲಿ ಪ್ರತಿಮೆ ಕೂಡ ಸೇರ್ಪಡೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿರಾಟ್‌ ಕೊಹ್ಲಿ, 'ನನ್ನ ಮೇಣದ ಪ್ರತಿಮೆ ಅನಾವರಣಗೊಳ್ಳುತ್ತಿರುವುದು ದೊಡ್ಡ ಗೌರವ. ಜೀವಮಾನದ ನೆನಪಿಗಾಗಿ ಮೇಡಮ್ ಟುಸ್ಸಾಡ್ಸ್‌ಗೆ ಕೃತಜ್ಞತೆಗಳು,' ಎಂದು ತಿಳಿಸಿದ್ದಾರೆ.

ಇತ್ತೀಚಿಗೆ ಲಂಡನ್ ನಿಂದ ದೆಹಲಿ ಆಗಮಿಸಿದ್ದ ಪರಿಣತ ಕಲಾವಿದರ ತಂಡ ವಿರಾಟ್‌ ಕೊಹ್ಲಿ ಅವರ ಮೇಣದ ಪ್ರತಿಮೆ ನಿರ್ಮಿಸಿದೆ. ಇದಕ್ಕಾಗಿ ವಿರಾಟ್‌ ಅವರ ದೇಹದ 200 ನಿರ್ದಿಷ್ಟ ಅಳತೆಗಳು ಹಾಗೂ ಚಿತ್ರಗಳನ್ನು ಈ ತಂಡ ಪಡೆದಿತ್ತು.